ಮಂಗಳೂರು ವಿವಿ ವೈಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್: ಆಳ್ವಾಸ್‍ಗೆ ಅವಳಿ ಪ್ರಶಸ್ತಿ

Upayuktha
0

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಕಾಲೇಜು ಜಂಟಿ ಸಹಯೋಗದಲ್ಲಿ ಇಲ್ಲಿನ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆದ ವಿವಿ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನ  ಪುರುಷ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಗಳಿಸಿದೆ. ಒಟ್ಟು ಕ್ರೀಡಾಕೂಟದಲ್ಲಿ 19 ನೂತನ ಕೂಟ ದಾಖಲೆ ನಿರ್ಮಾಣಗೊಂಡಿದ್ದು, ಅವುಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು 13 ಕೂಟ ದಾಖಲೆ ನಿರ್ಮಿಸಿರುವುದು ಗಮನಾರ್ಹ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಸತತ 18ನೇ ಬಾರಿಗೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.


ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ: 

ಪುರುಷರ 55 ಕೆಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪ್ರಶಾಂತ (ಸ್ನ್ಯಾಚ್-80ಕೆ.ಜಿ. ಕ್ಲೀನ್&ಜರ್ಕ್-113ಕೆಜಿ ಒಟ್ಟು-193) ಕೆ.ಜಿ ಪ್ರಥಮ ಹಾಗೂ ಸುಶಾಂತ (ಸ್ನ್ಯಾಚ್-85ಕೆ.ಜಿ. ಕ್ಲೀನ್&ಜರ್ಕ್-107 ಕೆಜಿ ಒಟ್ಟು-192 ಕೆ.ಜಿ) ದ್ವಿತೀಯ, 61 ಕೆಜಿ ವಿಭಾಗದಲ್ಲಿ ಅರವಿಂದ್ (ಸ್ನ್ಯಾಚ್-109ಕೆ.ಜಿ. ಕ್ಲೀನ್&ಜರ್ಕ್-135ಕೆಜಿ ಒಟ್ಟು-244 ಕೆ.ಜಿ) ಪ್ರಥಮ ಹಾಗೂ ನಾಗರಾಜ್ (ಸ್ನ್ಯಾಚ್-107ಕೆ.ಜಿ. ಕ್ಲೀನ್&ಜರ್ಕ್-132 ಕೆಜಿ ಒಟ್ಟು-239 ಕೆ.ಜಿ ) ದ್ವಿತೀಯ, 67 ಕೆಜಿ ವಿಭಾಗದಲ್ಲಿ ದೇವರಾಜ್ (ಸ್ನ್ಯಾಚ್-109ಕೆ.ಜಿ. ಕ್ಲೀನ್&ಜರ್ಕ್-135ಕೆಜಿ ಒಟ್ಟು-244 ಕೆ.ಜಿ) ಪ್ರಥಮ,  89ಕೆಜಿ ವಿಭಾಗದಲ್ಲಿ ಜೇಮ್ಸ್ ಜೆ (ಸ್ನ್ಯಾಚ್-117ಕೆ.ಜಿ. ಕ್ಲೀನ್&ಜರ್ಕ್-160ಕೆಜಿ ಒಟ್ಟು-277 ಕೆ.ಜಿ) ಪ್ರಥಮ,  ಕುಂಬಾರ್ ಶ್ರುತಿಕ್ ಮಹೇಶ್ (ಸ್ನ್ಯಾಚ್-124ಕೆ.ಜಿ. ಕ್ಲೀನ್&ಜರ್ಕ್-148ಕೆಜಿ ಒಟ್ಟು-278 ಕೆ.ಜಿ)  ದ್ವಿತೀಯ, 109 ಕೆಜಿ ವಿಭಾಗದಲ್ಲಿ ಪ್ರತ್ಯುμï (ಸ್ನ್ಯಾಚ್-117ಕೆ.ಜಿ. ಕ್ಲೀನ್&ಜರ್ಕ್-162ಕೆಜಿ ಒಟ್ಟು-279 ಕೆ.ಜಿ) ಪ್ರಥವ, 109+ ಕೆಜಿ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ (ಸ್ನ್ಯಾಚ್-110ಕೆ.ಜಿ. ಕ್ಲೀನ್&ಜರ್ಕ್-150ಕೆಜಿ ಒಟ್ಟು-260 ಕೆ.ಜಿ) ಪ್ರಥಮ ಸ್ಥಾನ ಪಡೆದಿದ್ದಾರೆ. ಆಳ್ವಾಸ್ ಕಾಲೇಜಿನ ಅರವಿಂದ್ ಪುರುಷರ ವಿಭಾಗದಲ್ಲಿ ಬೆಸ್ಟ್ ಲಿಫ್ಟರ್ ಆಗಿ ಹೊರಹೊಮ್ಮಿದ್ದಾರೆ.  


ಮಹಿಳಾ ವಿಭಾಗ 

ಮಹಿಳೆಯರ 45ಕೆಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಯಾಸ್ಮಿನ್ (ಸ್ನ್ಯಾಚ್-33ಕೆ.ಜಿ. ಕ್ಲೀನ್&ಜರ್ಕ್-53ಕೆಜಿ ಒಟ್ಟು-88 ಕೆ.ಜಿ) ಪ್ರಥಮ, 49 ಕೆಜಿ ವಿಭಾಗದಲ್ಲಿ ಚಂದ್ರಿಕಾ (ಸ್ನ್ಯಾಚ್-34ಕೆ.ಜಿ. ಕ್ಲೀನ್&ಜರ್ಕ್-44ಕೆಜಿ ಒಟ್ಟು-78 ಕೆ.ಜಿ) ದ್ವಿತೀಯ, 55ಕೆಜಿ ವಿಭಾಗದಲ್ಲಿ ಲಕ್ಷ್ಮೀ (ಸ್ನ್ಯಾಚ್-69ಕೆ.ಜಿ. ಕ್ಲೀನ್&ಜರ್ಕ್-91ಕೆಜಿ ಒಟ್ಟು-160 ಕೆ.ಜಿ)  ಪ್ರಥಮ, 59ಕೆಜಿ ವಿಭಾಗದಲ್ಲಿ ಅರ್ಚನಾ ಡೆನ್ಸಿ (ಸ್ನ್ಯಾಚ್-45ಕೆ.ಜಿ. ಕ್ಲೀನ್&ಜರ್ಕ್-60ಕೆಜಿ ಒಟ್ಟು-105 ಕೆ.ಜಿ) ತೃತೀಯ, 64ಕೆಜಿ ವಿಭಾಗದಲ್ಲಿ ಲಾವಣ್ಯಾ ರೈ (ಸ್ನ್ಯಾಚ್-58ಕೆ.ಜಿ. ಕ್ಲೀನ್&ಜರ್ಕ್-65ಕೆಜಿ ಒಟ್ಟು-123 ಕೆ.ಜಿ) ದ್ವಿತೀಯ, 71ಕೆಜಿ ವಿಭಾಗದಲ್ಲಿ ತನುಷಾ (ಸ್ನ್ಯಾಚ್-76ಕೆ.ಜಿ. ಕ್ಲೀನ್&ಜರ್ಕ್-105ಕೆಜಿ ಒಟ್ಟು-181 ಕೆ.ಜಿ) ಪ್ರಥಮ, 81ಕೆಜಿ ವಿಭಾಗದಲ್ಲಿ ಯಶಸ್ವಿನಿ (ಸ್ನ್ಯಾಚ್-65ಕೆ.ಜಿ. ಕ್ಲೀನ್&ಜರ್ಕ್-85ಕೆಜಿ ಒಟ್ಟು-150 ಕೆ.ಜಿ) ಪ್ರಥಮ, 87ಕೆಜಿ ವಿಭಾಗದಲ್ಲಿ ನಿಶ್ಮಿತಾ (ಸ್ನ್ಯಾಚ್-64ಕೆ.ಜಿ. ಕ್ಲೀನ್&ಜರ್ಕ್-78ಕೆಜಿ ಒಟ್ಟು-142 ಕೆ.ಜಿ)  ಪ್ರಥಮ, 87+ಕೆಜಿ ವಿಭಾಗದಲ್ಲಿ ಸಿತಾರಾ (ಸ್ನ್ಯಾಚ್-66ಕೆ.ಜಿ. ಕ್ಲೀನ್&ಜರ್ಕ್-77ಕೆಜಿ ಒಟ್ಟು-143ಕೆ.ಜಿ) ಪ್ರಥಮ ಸ್ಥಾನ ಪಡೆದಿದ್ದಾರೆ. ಆಳ್ವಾಸ್‍ನ ಲಕ್ಷ್ಮೀ ಮಹಿಳಾ ಬೆಸ್ಟ್ ಲಿಫ್ಟರ್ ಆಗಿ ಹೊರಹೊಮ್ಮಿದ್ದಾರೆ.



ಆಳ್ವಾಸ್‍ನ ನೂತನ ಕೂಟ ದಾಖಲೆಗಳು:

ಪುರುಷರ 55 ಕೆಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪ್ರಶಾಂತ ಕ್ಲೀನ್&ಜರ್ಕ್-113ಕೆಜಿ ಭಾರ ಎತ್ತುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 109 ಕೆಜಿ ಕೆಟಗರಿಯ ವಿಭಾಗದಲ್ಲಿ ಆಳ್ವಾಸ್‍ನ ಪ್ರತ್ಯುμï ಸ್ನ್ಯಾಚ್-117ಕೆ.ಜಿ. ಕ್ಲೀನ್&ಜರ್ಕ್-162 ಕೆಜಿ ಒಟ್ಟು-279 ಕೆ.ಜಿ ಭಾರ ಎತ್ತುವ ಮೂಲಕ ಮೂರು ವಿಭಾಗಗಳಲ್ಲಿಯೂ ನೂತನ ಕೂಟ ದಾಖಲೆ ಬರೆದಿದ್ದಾರೆ.


ಮಹಿಳೆಯರಲ್ಲಿ 45 ಕೆಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಯಾಸ್ಮಿನ್ (ಸ್ನ್ಯಾಚ್-33ಕೆ.ಜಿ. ಕ್ಲೀನ್&ಜರ್ಕ್-53 ಕೆಜಿ ಒಟ್ಟು-88 ಕೆ.ಜಿ), 55 ಕೆಜಿ ವಿಭಾಗದಲ್ಲಿ ಲಕ್ಷ್ಮೀ (ಸ್ನ್ಯಾಚ್-69 ಕೆ.ಜಿ. ಕ್ಲೀನ್&ಜರ್ಕ್-91ಕೆಜಿ ಒಟ್ಟು-160 ಕೆ.ಜಿ), ತನುಷಾ ಸ್ನ್ಯಾಚ್-76ಕೆ.ಜಿ. ಕ್ಲೀನ್&ಜರ್ಕ್-105 ಕೆಜಿ ಒಟ್ಟು-181 ಕೆ.ಜಿ ಭಾರ ಎತ್ತುವ ಮೂಲಕ ಮೂರು ವಿಭಾಗಗಳಲ್ಲಿಯೂ ನೂತನ ಕೂಟ ದಾಖಲೆ ಬರೆದಿದ್ದಾರೆ.


ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ವಿಹಿಂಪ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮಾಜಿ ರಾಷ್ಟ್ರೀಯ ವೈಟ್ ಲಿಫ್ಟರ್ ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top