ಗಮಕ ಶ್ರಾವಣ ಆ. 28ರಂದು ಸಮಾರೋಪ

Chandrashekhara Kulamarva
0



ಕುಂಬಳೆ: ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆ ಇವುಗಳ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುತ್ತಿರುವ ಗಮಕ ಶ್ರಾವಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಆಗಸ್ಟ್‌ 28ರಂದು ಅಪರಾಹ್ನ 2:15ಕ್ಕೆ ಕುಂಬಳೆಯ ಸಮೀಪ ನಾರಾಯಣಮಂಗಲದ ವಿ.ಬಿ. ಕುಳಮರ್ವರ ನಿವಾಸ 'ಶ್ರೀನಿಧಿ'ಯಲ್ಲಿ ನಡೆಯಲಿದೆ.

ಲಲಿತಾಲಕ್ಷ್ಮಿ ಕುಳಮರ್ವ ದೀಪ ಪ್ರಜ್ವಲನೆ ನಡೆಸುವರು. ವಾಮರಾವ್‌ ಬೇಕಲ್‌ ಮುಖ್ಯ ಅತಿಥಿಯಾಗಿರುವರು. ವಿಶಾಲಾಕ್ಷ ಪುತ್ರಕಳ ಸಮಾರೋಪ ಭಾಷಣ ಮಾಡಲಿದ್ದಾರೆ.

ಜೈಮಿನಿ ಭಾರತದ ಆಯ್ದ ಭಾಗವನ್ನು ಕೊಚ್ಚಿ ಗೋಪಾಲಕೃಷ್ಣ ಭಟ್‌ ವಾಚನ ಮಾಡಲಿದ್ದಾರೆ. ಶ್ರೀಹರಿ ಭಟ್‌ ಪೆಲ್ತಾಜೆ ವ್ಯಾಖ್ಯಾನ ನಡೆಸಲಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top