ವಿದ್ಯೆ ಅಂಕಕ್ಕೆ ಸೀಮಿತವಾಗದೇ ಸಂಸ್ಕಾರವಂತರನ್ನಾಗಿಸಬೇಕು: ಡಾ.ನಂಜಾವಧೂತ ಸ್ವಾಮೀಜಿ

Upayuktha
0

ಬೆಂಗಳೂರು: ವಿದ್ಯೆ ಬಹಳ ದೊಡ್ಡ ಶಕ್ತಿ. ವಿದ್ಯೆಯ ಜೊತೆ ಜೊತೆಗೆ ನಾವು ನಾಗರಿಕರಾಗಬೇಕಿದೆ, ಮನುಷ್ಯರಾಗಬೇಕಿದೆ, ಮಾನವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನದ ಡಾ.ನಂಜಾವಧೂತ ಮಹಾಸ್ವಾಮೀಜಿ ಹೇಳಿದರು.


ಇತ್ತೀಚೆಗೆ ಎನ್.ಎ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಎಸ್.ಎಸ್.ಎಲ್. ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿ ಸಾಧನಾ ಪುರಸ್ಕಾರ' ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಜೆ.ಡಿ.ಎಸ್ ಡಾ.ಸಯ್ಯದ್ ಮೋಹಿದ್ ಅಲ್ತಾಫ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ನಂಜಾವಧೂತ ಮಹಾಸ್ವಾಮೀಜಿ "ನಮ್ಮ ನೆಲದಲ್ಲಿ ಎಲ್ಲಾ ಧರ್ಮದವರು ಒಂದೇ. ಎಲ್ಲರಿಗೂ ಬದುಕುವುದಕ್ಕೆ ಸಮಾನ ಹಕ್ಕುಗಳಿದೆ. ಈ ದೇಶದ ಐಕ್ಯತೆಯನ್ನು ಎತ್ತಿಹಿಡಿಯಬೇಕು. ಆ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ. ವಿದ್ಯೆ ಕೇವಲ ಅಂಕಕ್ಕೆ ಸೀಮಿತವಾಗದೇ ಅದು ನಮ್ಮನ್ನು ಸಂಸ್ಕಾರವಂತರನ್ನಾಗಿಸಬೇಕು. ವಿದ್ಯೆ ಬಹಳ ದೊಡ್ಡ ಶಕ್ತಿ.ವಿದ್ಯೆಯ ಜೊತೆ ಜೊತೆಗೆ ನಾವು ನಾಗರಿಕರಾಗಬೇಕಿದೆ, ಮನುಷ್ಯರಾಗಬೇಕಿದೆ, ಮಾನವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದು  ಹೇಳಿದರು.


ಈ ಸಂದರ್ಭದಲ್ಲಿ ಬಿ.ಎಂ ಹನೀಫ್ ಪತ್ರಕರ್ತರು, ಮಾಜಿ ಸಹ ಸಂಪಾದಕರು ಪ್ರಜಾವಾಣಿ ದಿನಪತ್ರಿಕೆ, ಟಿ. ಪ್ರಭಾಕರ್ ಸಾಮಾಜಿಕ, ಸಾಂಸ್ಕೃತಿಕ , ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕರ್ತರಾದ ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್.ಎಲ್. ಸಿಯಲ್ಲಿ ಶೇಕಡಾ 99% ಕ್ಕಿಂತಲೂ ಹೆಚ್ಚು ಅಂಕ ಪಡೆದಿರುವ ಏಳು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, 250 ವಿದ್ಯಾರ್ಥಿಗಳಿಗೆ MI ಕೈಗಡಿಯಾರ, ಒಟ್ಟು 300 ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top