ಮುಜಂಟಿ (ಮಿಸ್ರಿ) ಕುಟುಂಬವನ್ನು ಪಾಲುಮಾಡುವ ವಿಧಾನ

Upayuktha
0


ಬಲಿಷ್ಠವಾದ ಮಜಂಟಿ ಜೇನು ಕುಟುಂಬವನ್ನು ಅವುಗಳ ಪ್ರವೇಶದ್ವಾರ ನೋಡಿಯೇ ತಿಳಿದುಕೊಳ್ಳಬಹುದು. ಅಂದರೆ ಅವುಗಳ ಪ್ರವೇಶ ದ್ವಾರದಲ್ಲಿ ಹತ್ತು-ಹದಿನಾಲ್ಕು ನೊಣಗಳು ಕಾವಲಿಗೆ ನಿಂತಿದ್ದರೆ ಅವುಗಳು ಬಲಿಷ್ಠ ಕುಟುಂಬ ಆಗಿರುತ್ತದೆ, ಹಾಗೂ ಜಾಸ್ತಿ ನೊಣಗಳು ತುಂಬಿರುವ ಇಂತಹ ಗೂಡಿನಿಂದ ಅವುಗಳು ಹೊರಡಿಸುವ ಶಬ್ದವೂ ಸ್ಪಷ್ಟವಾಗಿ ಕೇಳಿಸುತ್ತದೆ. ಈ ರೀತಿಯಲ್ಲಿರುವ ಗೂಡನ್ನು ಎತ್ತಿ ನೋಡಿದರಂತೂ ಭಾರವಾಗಿರುತ್ತದೆ. ಇಂತಹ ಗೂಡನ್ನು ತೆರೆದು ನೋಡಿದರೆ ಅದರಲ್ಲಿ ತುಂಬಾ ಮೊಟ್ಟೆ ಪರಾಗ ಹಾಗೂ ತುಪ್ಪ ತುಂಬಿದ ಗೋಳಗಳು ಕಾಣ ಸಿಗುತ್ತದೆ. ಇದರಲ್ಲಿ ಕಂದು ಮತ್ತು ಸ್ವಲ್ಪ ಬಿಳಿ ಬಣ್ಣದಿಂದ ಕಾಣುವ ಎರಡು ತರದ ಮೊಟ್ಟೆಗಳಿರುತ್ತದೆ. ಕಂದು ಬಣ್ಣದ ಮೊಟ್ಟೆ ಹೊಸ ಮೊಟ್ಟೆಯಾಗಿದ್ದು, ಕೈಯಿಂದ ಮುಟ್ಟುವಾಗ ಹುಡಿಯಾಗುತ್ತದೆ. ಇನ್ನು ನಸು ಬಿಳಿ ಬಣ್ಣದ ಮೊಟ್ಟೆಯು ಸ್ವಲ್ಪ ಬೆಳೆದ ಮೊಟ್ಟೆಯಾಗಿರುತ್ತದೆ ಇಂತಹ ಮೊಟ್ಟೆಯ ಜೊತೆಗೆ ರಾಣಿ ಮೊಟ್ಟೆಯು ಕಾಣಸಿಗುತ್ತದೆ.


ರಾಣಿ ಮೊಟ್ಟೆಯು ಇತರ ಮೊಟ್ಟೆಗಳಿಂದ ದೊಡ್ಡದಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಗೂಡನ್ನು ಪಾಲು ಮಾಡುವಾಗ ಈ ತರಹದ ಎರಡೂ ರೀತಿಯ ಮೊಟ್ಟೆಗಳನ್ನು ಎರಡು ಗೂಡಿಗೂ ಹಾಕುವುದು ಒಳಿತು. ಆಮೇಲೆ ಒಂದು ಲಿಂಬೆ ಹಣ್ಣು ಗಾತ್ರದ ಪರಾಗ ಹಾಗೂ ಜೇನುತುಪ್ಪದ ಗೋಳಗಳನ್ನು ಕೊಡಬೇಕು. ಮೇಣವನ್ನೂ ಕೊಡಬೇಕು, ಮೇಣ ಅವುಗಳಿಗೆ ಗೂಡಿನ ರಕ್ಷಣೆ ಹಾಗೂ ಒಳಗಿನ ರಚನೆಗೆ ಬೇಕಾಗುತ್ತದೆ. ರಾಣಿ ನೊಣ ಯಾವುದರಲ್ಲಿ ಇದೆಯೆಂದು ಮೊದಲೇ ಖಚಿತಪಡಿಸಿಕೊಳ್ಳಬೇಕು. ರಾಣಿ ಇಲ್ಲದೇ ಇರುವ ಗೂಡಿಗೆ ರಾಣಿ ಮೊಟ್ಟೆಯನ್ನು ಕೊಡಬೇಕು. ನಂತರ ಎರಡೂ ಪೆಟ್ಟಿಗೆಗಳನ್ನು ಒಂದೇ ಕಡೆ ಮುಖಮಾಡಿ ಇಡಬೇಕು, (ಮೂಲ ಗೂಡು ಇದ್ದ ಜಾಗದಲ್ಲಿ ಹೊಸ ಗೂಡನ್ನಿರಿಸಬೇಕು) ಹೊಸ ಗೂಡಿಗೆ ಅದರದ್ದೇ ಮೇಣದಿಂದ ರಿಂಗ್ ತರಹ ಮಾಡಿ ಪ್ರವೇಶ ದ್ವಾರಕ್ಕೆ ಅಂಟಿಸ ಬೇಕು. ಈವಾಗ ಎರಡೂ ಪೆಟ್ಟಿಗೆಗೂ ನೊಣಗಳು ಹೋಗುತ್ತವೆ.


ಇನ್ನು ರಾಣಿ ಇರುವ ಗೂಡನ್ನು ರಾತ್ರಿ ಸಮಯದಲ್ಲಿ ಅಲ್ಲಿಂದ ತಪ್ಪಿಸಿ ಬೇರೆ ಕಡೆ ಇಡುವುದು ಉತ್ತಮ. ಪಾಲು ಮಾಡಿದ ಕೂಡಲೇ ಒಂದುರೀತಿಯ ಸಣ್ಣ ಇರುವೆಗಳು ಗೂಡಿಗೆ ನುಸುಳಿ ಮೊಟ್ಟೆಗಳನ್ನು ಹಾಳುಗೆಡವುತ್ತದೆ. ಪಾಲು ಮಾಡಿದ ಹೊಸ ಗೂಡನ್ನು ಒಂದು ವಾರದ ವರೆಗೆ ಇರುವೆ ಗಳಿಂದ ರಕ್ಷಿಸಬೇಕು.

-ಪುದ್ಯೋಡು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top