ಲಂಚ ಪಡೆದವರಿಗೆ ಪ್ರಚಾರ ನೀಡಿ ಮಾನಕಳೆಯಬೇಕು: ಡಾ.ಯು.ಪಿ.ಶಿವಾನಂದ
ಪುತ್ತೂರು: ಲಂಚಗುಳಿತನವನ್ನು ನಿರ್ಮೂಲನೆ ಮಾಡುವುದಕ್ಕೆ ಸಮಾಜದ ಜನರಿಂದ ಮಾತ್ರ ಸಾಧ್ಯ. ಯಾರೇ ಆಗಲಿ ಲಂಚ ಕೊಡುವಂತಹ ಅನಿವಾರ್ಯ ಸ್ಥಿತಿ ಬಂದರೆ ಹಾಗೆ ಕೊಟ್ಟದ್ದನ್ನು ಸಮಾಜದೆಲ್ಲೆಡೆ ಹೇಳಿಕೊಂಡು ಬರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವ್ಯಕ್ತಿ ನನ್ನಿಂದ ಒತ್ತಾಯಪೂರ್ವಕವಾಗಿ ಲಂಚ ಪಡೆದಿದ್ದಾನೆ ಎಂಬುದನ್ನು ಬಹಿರಂಗಗೊಳಿಸಬೇಕು. ಆಗ ಸಮಾಜದ ಮುಂದೆ ಲಂಚ ಸ್ವೀಕರಿಸಿದ ವ್ಯಕ್ತಿಗೆ ಅವಮಾನವಾಗಿ ಮುಂದೆ ಆತ ಲಂಚ ಸ್ವೀಕರಿಸದೆ ಕೆಲಸ ಮಾಡುವುದಕ್ಕೆ ಆರಂಭಿಸುತ್ತಾನೆ ಎಂದು ಸುದ್ದಿ ಸಮೂಹ ಮಾಧ್ಯಮದ ಮುಖ್ಯಸ್ಥ ಡಾ. ಯು. ಪಿ. ಶಿವಾನಂದ ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ಹಾಗೂ ಸುದ್ದಿ ಜನಾಂದೋಲನ ವೇದಿಕೆಯ ಸಂಯುಕ್ತಾಶ್ರ್ರಯದಲ್ಲಿ ಶನಿವಾರದಂದು ಭ್ರμÁ್ಟಚಾರ ನಿರ್ಮೂಲನೆ ಎಂಬ ವಿಷಯದ ಬಗೆಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಎಲ್ಲರಿಗೂ ಸಮಾಜದಲ್ಲಿ ತಮಗೆ ದೊರಕುವ ಗೌರವ ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ಹಣ ಅಥವ ಗೌರವ ಎರಡರ ಮಧ್ಯೆ ಎಲ್ಲರೂ ಗೌರವವನ್ನೇ ಆಯ್ದುಕೊಳ್ಳುತ್ತಾರೆ. ತಾನು ಲಂಚ ಪಡೆದ್ದು ಊರಿಗೆಲ್ಲಾ ತಿಳಿಯುತ್ತದೆ ಎಂದು ಗೊತ್ತಾದೊಡನೆ ಪ್ರತಿಯೊಬ್ಬರೂ ಲಂಚ ಪಡೆಯುವುದನ್ನು ನಿಲ್ಲಿಸುತ್ತಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ತಾವು ಅಥವ ತಮ್ಮ ಹೆತ್ತವರು ಲಂಚ ಕೊಡಬೇಕಾಗಿ ಬಂದದ್ದನ್ನು ಎಲ್ಲರಿಗೂ ಹೇಳಬೇಕು. ಲಂಚಕೋರರ ಮಾನ ಹರಾಜು ಹಾಕಬೇಕು ಎಂದರು.
ಹೆಚ್ಚಿನ ಜನರು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಭ್ರಷ್ಟಾಚಾರದ ಕೂಪದೊಳಕ್ಕೆ ಬಿದ್ದಿದ್ದಾರೆ. ಲಂಚ ಕೊಡದೆ ಕೆಲಸ ಮಾಡಿಸುವುದು ಹೇಗೆಂಬ ಅರಿವು ಜನರಿಗಿಲ್ಲದ್ದೇ ಭ್ರμÁ್ಟಚಾರಕ್ಕೆ ಮೂಲ ಕಾರಣವಾಗಿದೆ. ಜನಸಾಮಾನ್ಯರು ತಮ್ಮ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳದಿರುವುದು ಮೂಲಭೂತ ಸಮಸ್ಯೆಯಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಲಂಚ ಸ್ವೀಕರಿಸುವ ವ್ಯಕ್ತಿಗೆ ಇನ್ನಿಲ್ಲದ ಗೌರವವನ್ನು ನೀಡಿ ಆತನನ್ನು ಮಹಾರಾಜನಂತೆ ನಡೆಸಿಕೊಳ್ಳುವುದೇ ಈ ಲಂಚಾವತಾರ ವಿಸ್ತೃತವಾಗಿ ಬೆಳೆಯಲು ಕಾರಣವಾಗಿದೆ ಎಂದರು.
ವ್ಯಕ್ತಿಯೊಬ್ಬ ತನ್ನ ಕೆಲಸ ಆದದ್ದಕ್ಕೆ ಖುಷಿಯಿಂದ ಕೊಡುವ ಭಕ್ಷೀಸನ್ನು ಲಂಚ ಎಂದು ಕರೆಯಲಾಗುವುದಿಲ್ಲ. ಅದು ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಕೊಡುವ ಹಣ ಅಥವಾ ಕಾಣಿಕೆಯಲ್ಲ. ಹೋಟೇಲಿನಲ್ಲಿ ಆಹಾರ ಸರಬರಾಜು ಮಾಡುವವರಿಗೆ ಕೊಡುವ ಹಣ ಲಂಚ ಅಲ್ಲ. ಯಾಕೆಂದರೆ ಹಣ ಕೊಡದಿದ್ದರೂ ಅವರು ಆ ಕೆಲಸ ಮಾಡುತ್ತಾರೆ. ಆದ್ದರಿಂದ ಭಕ್ಷೀಸನ್ನು ಲಂಚ ಅಂದುಕೊಳ್ಳುವುದು ಬೇಡ. ಆದರೆ ಹಣ ಕೊಡದೆ ಕೆಲಸ ಮಾಡುವುದಿಲ್ಲ ಎಂಬ ವ್ಯವಸ್ಥೆಯೇ ಲಂಚಗುಳಿತನ ಎಂಬುದನ್ನು ಮರೆಯಬಾರದು. ಅದನ್ನು ಪ್ರತಿಯೊಬ್ಬರೂ ವಿರೋಧಿಸಬೇಕಲು ಎಂದು ನುಡಿದರು.
ಶಾಲಾ ಕಾಲೇಜುಗಳಲ್ಲಿಯೇ ಭ್ರμÁ್ಟಚಾರ ನಿರ್ಮೂಲನೆ ಮಾಡುವುದು ಹೇಗೆಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಅವರಿಂದ ಹೆತ್ತವರ ಮನಃಪರಿವರ್ತನೆ ಮಾಡಬೇಕು. ಎಲ್ಲರೂ ಒಂದುಗೂಡಿ ಭ್ರμÁ್ಟಚಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಬೇಕು. ಸಮಾಜದ ಜನರು ಭ್ರμÁ್ಟಚಾರದ ಪ್ರಭಾವದಿಂದ ಹೊರಬಂದು ನೆಮ್ಮದಿಯ, ಗೌರವದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆ ರೂಪಿಸಿದ ಭ್ರμÁ್ಟಚಾರ ನಿರ್ಮೂಲನೆಯ ಪ್ರತಿಜ್ಞೆಯನ್ನು ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಬೋಧಿಸಿದರು ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸುದ್ದಿ ಸಂಸ್ಥೆಯ ವ್ಯವಹಾರ ನಿರ್ವಹಣಾ ವಿಭಾಗದ ನಿರ್ವಾಹಕ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹಾಗೂ ಕಾಲೇಜಿನ ಇಂಗ್ಲೀμï ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ವಂದಿಸಿದರು. ಕಾಲೇಜಿನ ಗಣಿತ ವಿಭಾಗ ಮುಖ್ಯಸ್ಥೆ ಕಾವ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ