|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲಾ ಲೋಕದೊಡನೆ ಸಂಗೀತ ಲೋಕದೆಡೆಗೆ ಪಯಣ ಬೆಳೆಸಿದ ಯಶು ಸ್ನೇಹಗಿರಿ

ಕಲಾ ಲೋಕದೊಡನೆ ಸಂಗೀತ ಲೋಕದೆಡೆಗೆ ಪಯಣ ಬೆಳೆಸಿದ ಯಶು ಸ್ನೇಹಗಿರಿ


ತನ್ನ ಬಾಲ್ಯದಿಂದಲೇ ಗೋಪುರದಷ್ಟು ಕನಸನ್ನು ಹೊತ್ತು ನನಸಾಗಿಸಾಗುವ ಕಡೆ ಗುರಿಯಿಟ್ಟವರೇ "ಯಶು ಸ್ನೇಹಗಿರಿ". ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ, ನಯನಾಡಿನ ಸ್ನೇಹಗಿರಿಯವರು. ಶ್ರೀಯುತ ಸಂಕಪ್ಪ ರಾಣ್ಯ ಮತ್ತು ಶ್ರೀಮತಿ ಶಾರದಾ ದಂಪತಿಗಳ ಸುಪುತ್ರನಾಗಿದ್ದು, ಪ್ರಾರ್ಥಮಿಕ ಶಿಕ್ಷಣವನ್ನು ನಯನಾಡಿನಲ್ಲಿ ಹಾಗೇ ಪ್ರೌಢಶಿಕ್ಷಣವನ್ನು ವಿಠಲ ವಿದ್ಯಾಸಂಸ್ಥೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ನಯನಾಡಿನಲ್ಲಿ ಮುಗಿಸಿ ನಂತರ ಕಲೆಯಲ್ಲಿ ಪದವೀದರನಾಗಿ ಪ್ರಸ್ತುತ ಎಸ್.ಎಲ್.ಎನ್.ಪಿ ಶಾಲೆ ಪಾಣೆಮಂಗಳೂರಿನಲ್ಲಿ ಕಲಾಶಿಕ್ಷಕನಾಗಿ, ಮಕ್ಕಳಿಗೆ ಕಲೆ, ಸಂಗೀತ ಇವುಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಸುಪ್ತ  ಪ್ರತಿಭೆಗಳನ್ನು ಕಲಾ ಭೂಮಿಗೆ ಪರಿಚಯಿಸಿದ ಕೀರ್ತಿ ಇವರದ್ದು.


ಕಲಾ ಶಿಕ್ಷಕ, ಸಂಗೀತ ಕ್ಷೇತ್ರದ ಸಾಧಕ:

ಸಂಗೀತ ಕ್ಷೇತ್ರದ ಆಕರ್ಷಣೆಯಿಂದ ತನ್ನ ಹಿರಿಯ ಕಲಾವಿದರ, ಹಿತೈಷಿಗಳ ಪ್ರೇರಣೆಯಿಂದ ಬಂಟ್ವಾಳ, ಪಾಣೆಮಂಗಳೂರು ಮತ್ತು ಮೊಡಂಕಾಪುವಿನ್ನಲ್ಲಿ "ಮೆಲುದನಿ" ಎನ್ನುವ ಸುಗಮ ಸಂಗೀತ ತರಗತಿಗಳನ್ನು ನಡೆಸುತ್ತಾ  ತನ್ನದೇ,'ನಾದಂ ಕ್ರಿಯೇಷನ್ಸ್' ಯೂಟ್ಯೂಬ್ ಚಾನೆಲ್ ಆರಂಭಿಸಿ ಹೊಸ ಹೊಸ ಕಲಾವಿದರು, ಕಲಾಪ್ರಕಾರಗಳನ್ನು ಹರಡುತ್ತಿದ್ದಾರೆ. ಮೆಲುದನಿ ಎನ್ನುವ ಸುಗಮ ಸಂಗೀತ ತರಗತಿ, ಕಲಾತಂಡವನ್ನು ನಡೆಸುತ್ತಾ ಹಲವಾರು ಸಂಗೀತ ಪ್ರತಿಭೆಗಳು ಇವರಿಂದ ಗುರುತಿಸಲ್ಪಟ್ಟಿದ್ದಾರೆ.


ಇದಲ್ಲದೇ ಉತ್ತಮ ರಸಮಂಜರಿ, ಭಕ್ತಿಗೀತೆ ಸುಗಮ ಸಂಗೀತ, ಮತ್ತು ಭಜನ ಕ್ಷೇತ್ರದ ಸಾಧಕನಾಗಿದ್ದು ಇವರಿಗೆ ಚೈತನ್ಯ ಇಂಟರ್ ನ್ಯಾಷನಲ್‌ ಆರ್ಟ್ ಅಕಾಡೆಮಿ ಟ್ರಸ್ಟ್ ಬೆಂಗಳೂರು ಇವರು "ಚಾಣಕ್ಯ ಪ್ರಶಸ್ತಿ"ಯನ್ನು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಸಂಘ ಸಂಸ್ಥೆಗಳು ಕಲಾ ಸೇವೆಯನ್ನು ಗುರುತಿಸಿ ಸನ್ಮಾನಗಳನ್ನೂ ಮಾಡಿದ್ದಾರೆ. ಕಾರ್ಟೂನ್, ವರ್ಲಿ ಆರ್ಟ್, ಮಧುಭನಿ ಆರ್ಟ್, ಗೋಡೆಯ ಚಿತ್ರಕಲೆ, ಪ್ರತಿಮೆ ತಯಾರಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ಜೊತೆಯಲ್ಲಿ ರಿದಂ‌ಪ್ಯಾಡ್ ಪ್ಲೇ, ರಸಮಂಜರಿಗಳಲ್ಲಿ ಗಾಯನ, ಆಲ್ಬಂ ಹಾಡುಗಳ ಗಾಯನ, ಸಂಗೀತ ನಿರ್ದೇಶನ, ಹಾಡುಗಳ ಸಾಹಿತ್ಯ, ರಾಗಸಂಯೋಜನೆ, ಧ್ವನಿಮುದ್ರಣ, ಹಲವು ಶಾಲೆಗಳಲ್ಲಿ ಬ್ಯಾಂಡ್, ಸಂಗೀತ, ಚಿತ್ರಕಲೆಗಳಲ್ಲಿ ಮಕ್ಕಳನ್ನು ತರಬೇತುಗೊಳಿಸಿದ್ದಾರೆ. ಹಾಗೆಯೇ ಹಲವು ಸಂಘ ಸಂಸ್ಥೆಗಳು, ಶಾಲೆಗಳಲ್ಲಿ ಸ್ಪರ್ದೆಗಳ ತೀರ್ಪುಗಾರರ ಸ್ಥಾನದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಗೇ "ಳ" ಎನ್ನುವ ಕಿರುಚಿತ್ರದಲ್ಲಿ ನಟನೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.


"ಸಾಧ್ಯವಿಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು" 

ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ ಅಗತ್ಯವಾದದ್ದು. ಒಂದು ಬಂಡೆ ಕಲ್ಲು ಶಿಲೆಯಾಗಿ ರೂಪುಗೊಳ್ಳಬೇಕಾದರೆ ಉಳಿಪೆಟ್ಟು ಸತತವಾದದ್ದು, ಅದೇ ರೀತಿ ಸಾಧನೆ ಎಂದು ಬರುವಾಗ ಸೋಲು-ಗೆಲುವು ಎರಡನ್ನೂ ಸಹ ಸರಿಸಮಾನ ಸ್ವೀಕರಿಸಬೇಕು. ಗೆದ್ದಾಗ ಸಂತೋಷಪಡಬೇಕು, ಸೋತಾಗ ಮುಂದಿನ ಪ್ರಯತ್ನಕ್ಕೆ ಅಣಿಯಾಗಬೇಕು, ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ಸಾಧಿಸುವ ಛಲ, ಹಠ ನಮ್ಮಲ್ಲಿ ಮನೆ ಮಾಡಿರಬೇಕು.

ನನಗೆ ತಂದೆ-ತಾಯಿ ಬದುಕನ್ನು ನೀಡಿ ಹಲವಾರು ಕನಸುಗಳನ್ನು ತುಂಬಿದ್ದಾರೆ. ಎಳೆಯ ವಯಸ್ಸಿನಿಂದಲೂ ನನ್ನ ಕೈಹಿಡಿದು ಭವಿಷ್ಯ ಕಟ್ಟುವ ಭರವಸೆ ತುಂಬಿದ್ದಾರೆ. ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿಸಿದ್ದಕ್ಕೆ ಸದಾ  ಅಭಿನಂದನೀಯ.

 - ಯಶು ಸ್ನೇಹಗಿರಿ 


ಪೋಷಕರ ಮನದಾಳದ ಮಾತು:

ನಾವು ಎಷ್ಟೇ ಬಡವರಾದ್ದರೂ ನಮ್ಮ ಮಗ ಇದಕ್ಕೆಲ್ಲ ಕುಗ್ಗಲಿಲ್ಲ. ಅವನ  ಇನ್ನಷ್ಟು ಕನಸುಗಳೆಲ್ಲ ಈಡೇರಲಿ. ಕಲೆ ಎಂಬುದು ಮಗನನ್ನು ಅರಸಿ ಬಂದ ಪರಿಣಾಮ ಇಂದು ಊರಿಗೆ ಹೆಮ್ಮೆ ತಂದಿದ್ದಾನೆ ಎನ್ನುತ್ತಾರೆ.

ಬದುಕೆಂಬ ಪಯಣದಲ್ಲಿ ಅದೆಷ್ಟೊ ಕಷ್ಟಗಳನ ಮೆಟ್ಟಿ ಮನೆ ಪರಿಸ್ಥಿತಿ ಬಡತನವಿದ್ದರೂ ತನ್ನ ಊರಿನಲ್ಲಿ ಸಮಾಜದಲ್ಲಿ ಅಪಾರ, ಪ್ರೀತಿ, ಸ್ನೇಹಪರ ವ್ಯಕ್ತಿತ್ವದಲ್ಲಿ ಶ್ರೀಮಂತವಾಗಿರುವ 'ಯಶುಸ್ನೇಹಗಿರಿ' ಇವರ ಎಲ್ಲ ಕನಸುಗಳೆಲ್ಲವೂ ಆದಷ್ಟು ಬೇಗ ಈಡೇರಲಿ.


-ದೀಕ್ಷಿತ ಗಿರೀಶ್ 

 ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ 

 ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post