ಮಿಸ್ರಿ (ಮುಜಂಟಿ) ಜೇನುನೊಣಗಳು ಇತರೇ ಜೇನುನೊಣಗಳಂತೆ ಸ್ವಯಂ ಪಾಲಾಗಿ ಪ್ರಕೃತಿಯಲ್ಲಿ ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ತುಡುವೆ ಜೇನುನೊಣಗಳಲ್ಲಿ ಪಾಲಾಗಿ ಹೋಗುವಾಗ ಹಳೇಯ ರಾಣಿ ಹೋದಂತೆ ಮುಜಂಟಿಯಲ್ಲಿ ಮಾತ್ರ ಹೊಸರಾಣಿ (ಗೈನಿ) ಹೊರ ಹೋಗುತ್ತದೆ. ನಂತರ ಒಂದುಕಡೆಯಲ್ಲಿ ನೆಲೆಸುತ್ತವೆ ಹಾಗೂ ಒಂದು ವಾರದಲ್ಲಿ ಹೊಸರಾಣಿಯು ಜೋಡಿಯಾಗಿ ಮೊಟ್ಟೆಗಳನ್ನಿಡಲು ಪ್ರಾರಂಭಿಸುತ್ತದೆ. ವ್ಯವಸ್ಥಿತವಾದ ಪೆಟ್ಟಿಗೆಯಲ್ಲಾದರೆ ಇದರ ಬದಲಾಗಿ ನಾವೇ ಕೃತಕವಾಗಿ ಪಾಲು ಮಾಡಬಹುದು.
ಆದರೆ... ಗೋಡೆ, ಮಾಡಿನ ಶೀಟ್ ಗೆ ಅಳವಡಿಸಿದ ಕಬ್ಬಿಣದ ಪೈಪು ಇನ್ನಿತರ ಕಿರಿದಾದ ಜಾಗದಲ್ಲಿ ನೆಲೆಸಿರುವ ಕುಟುಂಬಗಳು ಅಲ್ಲಿನ ಸ್ಥಳಾವಕಾಶದ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲಾಗುತ್ತಲೇ ಇರುತ್ತವೆ. ಈ ರೀತಿ ಪಾಲಾಗಿ ಬರುವಂತಹ ತಾಜಾ ಕುಟುಂಬಗಳು ಹೊಸ ಜಾಗದಲ್ಲಿ ಬಂದು ನೆಲೆಸುತ್ತವೆ. ಇದಕ್ಕಾಗಿಯೇ ಮುಜಂಟಿ ಗೂಡುಗಳನ್ನು ಸ್ಥಾಪಿಸಿದ ಆಸುಪಾಸಿನಲ್ಲಿ "ಕೆಣಿಕ್ಕೂಡು"(ಮಲಯಾಳಂ ಹೆಸರು) ಎಂದು ಖಾಲಿ ಗೂಡುಗಳನ್ನು ಅಲ್ಲಲ್ಲಿ ತೂಗಿ ಇಡುವ ಕ್ರಮ ಇದೆ. ಈ ರೀತಿ ತೂಗಿ ಇಡುವ ಖಾಲಿ ಪೆಟ್ಟಿಗೆಗಳಿಗೆ ಸ್ವಲ್ಪ ಒಳಗೂ ಹೊರಗೂ (ಪ್ರವೇಶ ದ್ವಾರಕ್ಕೆ) ಮುಜಂಟಿ ಮೇಣವನ್ನು ಸವರಿ ಲೇಪಿಸಿಡುವುದು. ಇದರ ಮೇಣದ ಆಕರ್ಷಣೆಗೆ ಒಳಗಾಗಿ, ಪಾಲಾಗಿ ಬಂದ ಮುಜಂಟಿ ಕುಟುಂಬಗಳು ಇಂತಹ ಪೆಟ್ಟಿಗೆಯಲ್ಲಿ ವಾಸಿಸುತ್ತವೆ.
ಈ ಪದ್ಧತಿಯಿಂದ ಹೆಚ್ಚಿನ ಕುಟುಂಬಗಳನ್ನು ಪಡೆಯಬಹುದು, ಮುಜಂಟಿಯಲ್ಲಿ ಪಾಲಾಗಿ ಬಂದ ನೊಣಗಳು ಹೆಚ್ಚು ದೂರ ಹೋಗದೆ ಆಸುಪಾಸಿನಲ್ಲೇ ಜಾಗ ಹುಡುಕುತ್ತಿರುತ್ತಾವೆ! ಈ ರೀತಿಯಾಗಿ ಸಿಗುವ ಹೊಸ ಕುಟುಂಬಗಳು ಬಹು ಬೇಗನೆ ಅಭಿವೃದ್ಧಿ ಹೊಂದುತ್ತವೆ, ಯಾಕೆಂದರೆ ಅದರಲ್ಲಿ ಇರುವುದು ಹೊಸರಾಣಿ!! ಕೆಲವೊಮ್ಮೆ ಇತರೆ ಮುಜಂಟಿ ಗೂಡಿಗೆ ಆಕ್ರಮಿಸುವುದು ಇದೆ ಈ ಸಂದರ್ಭದಲ್ಲಿ ಮೂಲಗೂಡನ್ನು ತೆಗೆದು ಈ ತರಹ ಮೇಣ ಹಚ್ಚಿದ ಗೂಡನ್ನು ಅಲ್ಲಿ ಇಡಬೇಕು, ಆವಾಗ ಹೊಸ ಕುಟುಂಬ ಆ ಗೂಡಿಗೆ ಸೇರುತ್ತವೆ. ಈ ರೀತಿಯಾಗಿ ಸುಲಭದಲ್ಲಿ ಮುಜಂಟಿ ಕುಟುಂಬಗಳನ್ನು ಸಂಗ್ರಹಣೆ ಮಾಡಬಹುದು. ಮಾತ್ರ ಆಸು ಪಾಸಿನಲ್ಲಿ ಮುಜಂಟಿ ಕುಟುಂಬಗಳು ಇರಬೇಕು!!
-ಪುದ್ಯೋಡು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ