ಜುಲೈ 11: ರೇಡಿಯೋ ಪಾಂಚಜನ್ಯದಲ್ಲಿ ಆಟಿ- ವಿಶೇಷ ತುಳು ಭಾಷಣ ಸ್ಪರ್ಧೆ

Upayuktha
0

ಪುತ್ತೂರು: ಆಟಿ ತಿಂಗಳ ಆಚರಣೆಯ ವಿಶೇಷತೆ ಮತ್ತು ಮಹತ್ವದ ಬಗ್ಗೆ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ತುಳು ಭಾಷಣ ಸ್ಪರ್ಧೆಯನ್ನು ರೇಡಿಯೋ ಪಾಂಚಜನ್ಯವು ಇನ್ನರ್‌ ವೀಲ್  ಮತ್ತು ಮುಳಿಯ ಜ್ಯುವೆಲ್ಸ್‌  ಸಹಯೋಗದಲ್ಲಿ ಆಯೋಜಿಸುತ್ತಿದೆ.


15 ವರ್ಷ ಮೇಲ್ಪಟ್ಟ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಯ್ಕೆಯಾದ ಭಾಷಣಗಳನ್ನು ರೇಡಿಯೋ ಪಾಂಚಜನ್ಯದಲ್ಲಿ ಪ್ರಸಾರ ಮಾಡಲಾಗುವುದು.


ಜುಲೈ 11ರಂದು ರೇಡಿಯೋ ಪಾಂಚಜನ್ಯದ ಸ್ಟುಡಿಯೋದಲ್ಲಿ ಈ ಸ್ಪರ್ಧೆ ನಡೆಯಲಿದೆ. ಆಸಕ್ತ ಸ್ಪರ್ಧಾಳುಗಳು ನೋಂದಣಿ ಮತ್ತು ಮಾಹಿತಿಗಾಗಿ 8050809885 ಸಂಖ್ಯೆಗೆ ಸಂಪರ್ಕಿಸಬಹುದು.


ರೇಡಿಯೋ ಪಾಂಚಜನ್ಯ 90.8 ಎಫ್‌ಎಂ ತರಂಗಾಂತರದಲ್ಲಿ ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಸುಮಾರು 15,000 ಕೇಳುಗರನ್ನು ಈ ಸಮುದಾಯ ಬಾನುಲಿ ಹೊಂದಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ಭಾಗಗಳಲ್ಲಿ ಪ್ರಸಾರವಾಗುತ್ತಿದೆ.


ರೇಡಿಯೋ ಆಪ್ ಮೂಲಕ ಅಂತರ್ಜಾಲದಲ್ಲೂ ಬಿತ್ತರವಾಗುವ ರೇಡಿಯೋ ಪಾಂಚಜನ್ಯವು ದೇಶ-ವಿದೇಶಗಳಲ್ಲೂ ಸಾಕಷ್ಟು ಶ್ರೋತೃಗಳನ್ನು ತಲುಪುತ್ತಿದೆ.


ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಪ್ರವರ್ತಿತವಾಗಿರುವ ಈ ಸಮುದಾಯ ಬಾನುಲಿಯು ಕೃಷಿಲೋಕ, ವೈದ್ಯದೇವ ಭವ, ಯುವವಾಣಿ, ಪುಟಾಣಿ ಪ್ರಪಂಚ, ಕಲಾಮಹತಿ ಸೇರಿದಂತೆ 43ಕ್ಕೂ ಅಧಿಕ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top