ಮಂಗಳೂರು: ಪಿಅರ್‌ಸಿಐ ದಕ್ಷಿಣ ವಲಯದಿಂದ ಜುಲೈ 16ರಂದು ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆ

Upayuktha
0

ಮಂಗಳೂರು: ದಕ್ಷಿಣ ವಲಯದ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ವತಿಯಿಂದ ಜು.16ರ ಶನಿವಾರ ಸಂಜೆ 5.00 ಗಂಟೆಗೆ ಮಂಗಳೂರಿನ ಹೊಟೆಲ್ ಓಶಿಯನ್ ಪರ್ಲ್ ನಲ್ಲಿ ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆಯನ್ನು ಆಯೋಜಿಸಲಾಗಿದೆ.


ನವೆಂಬರ್ 11, 2022 ರಂದು ಕೋಲ್ಕತಾದಲ್ಲಿ ನಡೆಯಲಿರುವ ಪಿಆರ್ ಸಿಐ ನ 16ನೇ ಜಾಗತಿಕ ಸಂವಹನ ಸಮಾವೇಶದ 'ಥೀಮ್ ಲೋಗೋ'ವನ್ನು ಪಿಆರ್ ಸಿ ಐ ರಾಷ್ಟ್ರೀಯ ಅಧ್ಯಕ್ಷ ಡಾ.ಟಿ. ವಿನಯಕುಮಾರ್ ಅವರು ಬಿಡುಗಡೆಗೊಳಿಸುವರು.


ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಪಿಆರ್ ಸಿ ಐ ಮತ್ತು ವೈಸಿಸಿ ಮುಖ್ಯ ಮಾರ್ಗದರ್ಶಕ ಮತ್ತು ಅಧ್ಯಕ್ಷ ಎಮೆರಿಟಸ್ ಎಂ.ಬಿ.ಜಯರಾಂ, ಯೆನೆಪೋಯದ ವಿಶ್ವವಿದ್ಯಾಲಯದ ಉಪಕುಲಪತಿ  ಡಾ.ಎಂ. ವಿಜಯಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಬಿ.ಕೆ.ರವಿ, ಪಿಆರ್ ಸಿಐ ದಕ್ಷಿಣ ವಲಯದ ಅಧ್ಯಕ್ಷೆ ಡಾ.ಟಿ.ಎಸ್.ಲತಾ, ವೈಸಿಸಿ ರಾಷ್ಟ್ರೀಯ ಮುಖ್ಯಸ್ಥ ಚಿನ್ನಮಯಿ ಪ್ರವೀಣ್ ಉಪಸ್ಥಿತರಿರುತ್ತಾರೆ.


ಕಾರ್ಯಕ್ರಮದಲ್ಲಿ, ದಕ್ಷಿಣ ಭಾರತದ ಸಾಧಕರಿಗೆ 'ವಲಯ ಪಿಆರ್ ಪ್ರಶಸ್ತಿಗಳು' ಮತ್ತು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಸಾಧಕರಿಗೆ 'ರಾಜ್ಯ ಪಿಆರ್ ಪ್ರಶಸ್ತಿ' ಪ್ರದಾನ ನಡೆಯಲಿದೆ.

ವಿಶ್ವೇಶ್ವರ ಭಟ್ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಎಂ.ಬಿ.ಜಯರಾಂ ಅಧ್ಯಕ್ಷ ಭಾಷಣ ನೀಡಲಿದ್ದು, ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಡಾ.ಎಂ.ವಿಜಯಕುಮಾರ್ ಬಿ.ಕೆ.ರವಿ ಹಾಗೂ ಟಿ.ವಿನಯಕುಮಾರ್ ಭಾಷಣ ಮಾಡಲಿದ್ದಾರೆ. ವೈಸಿಸಿ ರಾಷ್ಟ್ರೀಯ ಮುಖ್ಯಸ್ಥೆ ಚಿನ್ನಮಯಿ ಪ್ರವೀಣ್  ಅವರು ಪಿಆರ್ ಸಿಐ, ವೈಸಿಸಿ ಮತ್ತು ವರ್ಲ್ಡ್ ಪಿಆರ್ ಡೇ ಬಗ್ಗೆ ಮಾತನಾಡಲಿದ್ದಾರೆ.


ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಬಗ್ಗೆ 

ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ಸಿಐ) ಪ್ಯಾನ್-ಇಂಡಿಯಾ ಕಮ್ಯುನಿಕೇಷನ್ ಎಕ್ಸ್ಚೇಂಜ್ ಫೋರಂ ಆಗಿದ್ದು, 38 ಭಾರತೀಯ ನಗರಗಳು ಮತ್ತು ಪಟ್ಟಣಗಳಲ್ಲಿ ತನ್ನ ಉಪಸ್ಥಿತಿಯನ್ನು ಹೊಂದಿದೆ. ಈ ಪ್ರಮುಖ ಜಾಲವು ಪಿಆರ್, ಮಾಧ್ಯಮ, ವಾಣಿಜ್ಯ ಮತ್ತು ಸಾರ್ವಜನಿಕ ಸೇವಾ ಜಾಹೀರಾತು, ಮಾರ್ಕಾಮ್, ಸಂವಹನದಲ್ಲಿ ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತದೆ.


ಪಿ.ಆರ್.ಸಿ.ಐ. ಉದ್ಯಮದ ವೃತ್ತಿಪರರಿಗೆ ತಮ್ಮ ಕೆಲಸದ ಕ್ಷೇತ್ರಗಳಲ್ಲಿ ಉನ್ನತ ನೈತಿಕ ಮಾನದಂಡಗಳನ್ನು ಉತ್ತೇಜಿಸುವ ಮೂಲಕ ತಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಒಂದು ಅವಕಾಶವನ್ನು ಒದಗಿಸುತ್ತದೆ ಮತ್ತು ಸ್ಟ್ರೀಮ್ ನಲ್ಲಿರುವ ವೃತ್ತಿಪರರಿಗೆ ಮಾನ್ಯತೆ ನೀಡುವ ಮೊದಲ ವೇದಿಕೆಯಾಗಿದೆ. 


ಏಪ್ರಿಲ್ 3, 2004 ರಂದು ಜನಿಸಿದ ಪಿಆರ್ಸಿಐ ವೃತ್ತಿಪರ ಅಭಿವೃದ್ಧಿಯನ್ನು ಶ್ರೀಮಂತಗೊಳಿಸಲು ಶ್ರಮಿಸುತ್ತದೆ ಮತ್ತು ವೃತ್ತಿಯ ಉದ್ದೇಶವನ್ನು ಮುಂದುವರಿಸಲು ನೆಟ್ವರ್ಕಿಂಗ್ ಅವಕಾಶಗಳಿಗೆ ಸಹಾಯ ಮಾಡುತ್ತದೆ. ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top