||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 2022ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆ: ಹುಬ್ಬಳ್ಳಿಯ ಲತಾ ಹೆಗಡೆ ಪ್ರಥಮ

2022ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆ: ಹುಬ್ಬಳ್ಳಿಯ ಲತಾ ಹೆಗಡೆ ಪ್ರಥಮಬದಿಯಡ್ಕ: 2022ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಫಲಿತಾಂಶವು ಪ್ರಕಟವಾಗಿದ್ದು, ಕರ್ನಾಟಕ ರಾಜ್ಯದ ಹುಬ್ಬಳ್ಳಿಯ ಲತಾ ಹೆಗಡೆಯವರು ಪ್ರಥಮ ವಿಜೇತರಾಗಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಇವರು ಗೃಹಿಣಿಯಾಗಿದ್ದಾರೆ. ಬಿ.ಎಸ್.ಎನ್.ಎಲ್‌ನ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಉದಯ ಶಿವರಾಮ ಹೆಗಡೆಯವರ ಪತ್ನಿ.


ಇಬ್ಬರು ಗಂಡುಮಕ್ಕಳ ತಾಯಿಯಾಗಿರುವ ಇವರು ಅಪರಂಜಿ ಮಾಸಪತ್ರಿಕೆಯಲ್ಲಿ ನಗೆ ಲೇಖನದಲ್ಲಿ ಪ್ರಥಮ, ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಪ್ರೇಮಾಭಟ್ ದತ್ತಿನಿಧಿ ಬಹುಮಾನ, ಪ್ರಜಾವಾಣಿ ಹಾಗೂ ಉತ್ಥಾನ ಮಾಸಪತ್ರಿಕೆಯಲ್ಲಿ ವೈಚಾರಿಕ ಲೇಖನಗಳಿಗೆ ಬಹುಮಾನ ಬಂದಿರುವ ಇವರು ಅಡುಗೆ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಪಡೆದಿರುತ್ತಾರೆ. ಸಾಹಿತ್ಯ ಕೃಷಿಯೊಂದಿಗೆ ಸಂಗೀತ, ಚಿತ್ರಕಲೆ, ರಂಗೋಲಿ ಕಲೆಗಳಲ್ಲೂ ಸಾಧಕರಾಗಿರುತ್ತಾರೆ.


ದ್ವಿತೀಯ ವಿಜೇತೆಯಾಗಿ ಮಂಗಳೂರಿನಲ್ಲಿ ವಾಸಿಸುತ್ತಿರುವ ಅಧ್ಯಾಪಕ ಗಣಪತಿಭಟ್ ಅರಂತಾಡಿಯವರ ಪತ್ನಿ ಸಂಧ್ಯಾ ಭಟ್ ಅರಂತಾಡಿ ಹಾಗೂ, ತೃತೀಯ ವಿಜೇತೆಯಾಗಿ ಸತ್ಯವತಿ ಕೊಳಚ್ಚಿಪ್ಪು ಆಯ್ಕೆಯಾಗಿದ್ದಾರೆ. ಹಿರಿಯರಾದ ಬೇ.ಸಿ.ಗೋಪಾಲಕೃಷ್ಣ ಭಟ್ ಬದಿಯಡ್ಕ, ಡಾ| ಹರಿಕೃಷ್ಣ ಭರಣ್ಯ ಕುಂಬಳೆ, ಲಲಿತಾಲಕ್ಷ್ಮಿ ಸಿದ್ದಾಪುರ ಮೌಲ್ಯಮಾಪನ ಮಾಡಿದ್ದರು ಎಂದು ಸಂಚಾಲಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post