ಜೆಇಇ ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾರ್ಥಿಗಳಿಂದ ದಾಖಲೆಯ ಸಾಧನೆ

Upayuktha
0

ತಾಲೂಕಿನಲ್ಲೇ ಅತ್ಯಧಿಕ ಮಂದಿ ವಿದ್ಯಾರ್ಥಿಗಳಿಗೆ 90ಕ್ಕಿಂತಲೂ ಅಧಿಕ ಪರ್ಸಂಟೈಲ್ ಅಂಕ



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ  ಜೆಇಇ ಮೈನ್ಸ್ ಪರೀಕ್ಷೆಯ ಮೊದಲ ಹಂತದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಪರೀಕ್ಷೆ ಬರೆದಿದ್ದ ಒಟ್ಟು 41 ಮಂದಿ ವಿದ್ಯಾರ್ಥಿಗಳಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ತೊಂಬತ್ತಕ್ಕಿಂತಲೂ ಅಧಿಕ ಪರ್ಸಂಟೈಲ್ ಅಂಕ ಹಾಗೂ ಎಂಟು ಮಂದಿ ವಿದ್ಯಾರ್ಥಿಗಳು 85ರಿಂದ 90ರ ನಡುವಿನ ಪರ್ಸಂಟೈಲ್ ಅಂಕ ದಾಖಲಿಸಿದ್ದಾರೆ. ತನ್ಮೂಲಕ ಪುತ್ತೂರು ತಾಲೂಕಿನಲ್ಲೇ 90ರ ಮೇಲೆ ಹಾಗೂ 85-90ರ ನಡುವೆ ಅತ್ಯಧಿಕ ಮಂದಿ ಅಂಕ ಗಳಿಸಿದ ದಾಖಲೆ ಬರೆದಿದ್ದಾರೆ. 

ಬಾಯರಿನ ವಿಘ್ನೇಶ್ವರ ಕೆದುಕೋಡಿ, ವಸಂತಿ ಎಂ. ದಂಪತಿ ಪುತ್ರ ವಿಶ್ವಜಿತ್ ಕೆ 98.14, ಮಡಿಕೇರಿಯ ಕೃಷ್ಣಮೂರ್ತಿ ಎಮ್ ಎಸ್ ಮತ್ತು ಪರಿಮಳ ಎಂ ಎಸ್ ದಂಪತಿಯ ಪುತ್ರ ಶ್ರೀವತ್ಸ ಎಂ ಕೆ 96.49, ಬೊಳ್ವಾರಿನ ಎಚ್ ಸತ್ಯ ಪ್ರಕಾಶ್ ಮತ್ತು ಸುರೇಖ ದಂಪತಿಯ ಪುತ್ರ ವರುಣ್ ಎಸ್ 94.77, ಪಂಜದ ರಾಧಾಕೃಷ್ಣ ಭಟ್ ಟಿ ಮತ್ತು ವಿದ್ಯಾ ದಂಪತಿಯ ಪುತ್ರ ಆಶ್ಲೇಷ ಟಿ  94.72, ಕಡಬದ ಲೋಕೇಶ್ ಎ ಹಾಗೂ  ಉಷಾ ಬಿ. ದಂಪತಿ ಪುತ್ರ ಅನುಶ್ ಎ.ಎಲ್ 94.55, ಬೆಂಗಳೂರಿನ ನಿಂಗೇಗೌಡ ಹಾಗೂ ಸುನಿತಾ ಪಿ.ಕೆ ದಂಪತಿ ಪುತ್ರ ಶ್ರೇಯಸ್ ಗೌಡ  ಬಿ.ಎನ್ 94.18, ರಾಮಕುಂಜದ ಚಿತ್ತರಂಜನ್ ಮತ್ತು ಸಂಧ್ಯಾ ದಂಪತಿ ಪುತ್ರ ಕೌಶಿಕ್ ರಾವ್ ಕೆ 92.97, ಮೈಸೂರಿನ ಬಸವರಾಜಪುರದ ಚಂದ್ರಶೇಖರ ಹಾಗೂ ರತ್ನಮ್ಮ ದಂಪತಿ ಪುತ್ರ ಸುದೀಪ್ ಎಲ್.ಸಿ 90.46, ಸುಳ್ಯದ ಮುಳ್ಳೇರಿಯ ನಿವಾಸಿಗಳಾದ ರವೀಶ ಬಿ ಹಾಗೂ ಜಯಲಕ್ಷ್ಮೀ ಬಿ ದಂಪತಿ ಪುತ್ರ ಚಿರಂತನ್ ಬಾರಧ್ವಾಜ್ ಬಿ 89.59, ಬೆಳ್ಳಾರೆಯ ಬಾಳಿಲದ ಎನ್ ಈಶ್ವರ ಭಟ್ ಹಾಗೂ ಅನಿತಾ ಐ ಭಟ್ ದಂಪತಿ ಪುತ್ರ ಅನೀಶ್ ರಾಮ್ ಎನ್ 88.90, ಪುತ್ತೂರಿನ ಹೊಸಗದ್ದೆಯ ತಿರುಮೂರ್ತಿ ಮತ್ತು ಟಿ ಕನ್ನಗಿ ದಂಪತಿಯ ಪುತ್ರಿ ಟಿ ನಿಕ್ಷಿತಾ 87.94, ಮಡಿಕೇರಿಯ ಅರವತ್ತೊಕ್ಲು ನಿವಾಸಿಗಳಾದ ಟಿ.ಕೆ ದಿನೇಶ್ ಕುಮಾರ್ ಹಾಗೂ ಕೆ.ಎಂ.ಕುಸುಮ ದಂಪತಿ ಪುತ್ರ ಟಿ.ಡಿ. ವಿಕ್ರಂ ಕರುಂಬಯ್ಯ 87.87,  ಶಿವಮೊಗ್ಗದ ಬಿ.ಇ. ರವಿ ಹಾಗೂ ಡಿ.ಪಿ. ಚಂದ್ರಕಲಾ ದಂಪತಿ ಪುತ್ರ ಆರ್.ಸಿ.ವಿನೀತ್ ಬಾವಿಮನೆ 87.55, ಪುತ್ತೂರಿನ ಬೊಳ್ವಾರು ನಿವಾಸಿಗಳಾದ ಸುಖೇಶ್ ಪಿ ಹಾಗೂ ವಿದ್ಯಾ ಪಿ ದಂಪತಿ ಪುತ್ರ ವಿಖ್ಯಾತ್ ಕಡಂಬಳಿತ್ತಾಯ 86.44, ಕಾಸರಗೋಡಿನ ಕಾಟುಕುಕ್ಕೆಯ ಬಿ.ಎಸ್ ಪ್ರಸನ್ನ, ಬಿ.ಎಸ್ ವಾಣಿ ದಂಪತಿ ಪುತ್ರಿ ಬಿ. ಎಸ್. ಅವನಿ 86.10, ಪುತ್ತೂರಿನ ದರ್ಭೆ ನಿವಾಸಿಗಳಾದ ಅರುಣ ಕುಮಾರ ರೈ ಎ ಹಾಗೂ ಉಷಾಕಿರಣ್ ಕೆ ದಂಪತಿ ಪುತ್ರ ಅದ್ವಿಕ್ ಎ ರೈ 85.90 ಪರ್ಸಂಟೈಲ್ ಅಂಕಗಳನ್ನು ದಾಖಲಿಸಿ ಉತ್ಕೃಷ್ಟತೆ ಸಾಧಿಸಿದ್ದಾರೆ. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top