ಉಜಿರೆ: ಎಸ್. ಡಿ. ಎಂ. ಕಾಲೇಜಿನ ಪ್ರಕೃತಿ ಚಿಕಿತ್ಸಾಲಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬಿವೋಕ್ ನ ರಿಟೇಲ್ ಸಪ್ಲೈ ಆ್ಯಂಡ್ ಮ್ಯಾನೇಜ್ಮೆಂಟ್ ವಿಭಾಗವು ಶನಿವಾರ ‘ಎಕ್ಸಪ್ಲೋರಿಕ’ ಶೀರ್ಷಿಕೆಯೊಂದಿಗೆ ಏರ್ಪಡಿಸಿದ್ದ ಒಂದು ದಿನದ ಕಾಮರ್ಸ್- ಮ್ಯಾನೇಜ್ಮೆಂಟ್ ಫೆಸ್ಟಿವಲ್‌ಗೆ ಎಸ್.ಡಿ.ಎಂ ಕಾಲೇಜಿನ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್ ಎಂ.ವೈ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷಿಸುವ ಅಗತ್ಯತೆಯನ್ನು ಮನಗಾಣಿಸಿದರು. ಓದುವ ಕಾಲಕ್ಕೆ ಮಕ್ಕಳಿಗೆ ಹೊರಗಿನ ಉದ್ಯಮವಲಯಲ್ಲಿ ಇರುವ ಅವಕಾಶಗಳನ್ನು ತಿಳಿಸುವುದು ಇಂತಹ ರಚನಾತ್ಮಕ ಕಾರ್ಯಕ್ರವiಗಳಿಂದ ಸಾಧ್ಯ ಎಂದು ಹೇಳಿದರು.
ಒಳ್ಳೆಯ ವಿವೇಚನೆಯಿಂದ ಉದ್ಯೋಗ ಅವಕಾಶಗಳನ್ನು ಸಕಾಲಿಕವಾಗಿ ಬಳಸಿಕೊಳ್ಳುವ ಶಕ್ತಿ ಬರುತ್ತದೆ. ಪದವೀಧರರು ವ್ಯವಾಹಾರಿಕ ಉದ್ಯಮ ಪ್ರವೇಶಿಸುವಾಗ ಗುಣಮಟ್ಟದ ಮಾದರಿಗಳ ಕಲಿಕೆಯ ಕಡೆಗೆ ಗಮನವಿರಬೇಕೆ ಹೊರತು, ಹಣ ಗಳಿಕೆ ಒಂದೇ ಉದ್ದೇಶವಾಗಿರಬಾರದು ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಅಗ್ರಿಲೀಫ್‌ನ ವಾಣಿಜ್ಯೋದ್ಯಮಿ ಅವಿನಾಶ್ ರಾವ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯಚಂದ್ರ ಪಿ.ಎನ್ ಮಾತನಾಡಿ ಎಲ್ಲರೊಂದಿಗೆ ಬೆರೆತು ಕೆಲಸ ಮಾಡಿದರೆ ಉತ್ತಮ ಅವಕಾಶಗಳು ದೊರೆಯುತ್ತವೆ ಎಂದರು. ಕಾರ‍್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಾಲೇಜಿಗಳಿಂದ ಒಟ್ಟು 400 ವಿದ್ಯಾರ್ಥಿಗಳು ಕಾರ‍್ಯಕ್ರಮಕ್ಕೆ ನೊಂದಣಿ ಮಾಡಿಸಿದ್ದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ್ ಪಿ ಹಾಗೂ ಬಿವೋಕ್ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾನಸ ಶ್ರೀಷಾ ಕಾರ‍್ಯಕ್ರಮವನ್ನು ನಿರೂಪಿದರು. ಬಿ.ವೋಕ್ ವಿಭಾಗದ ಸಂಯೋಜಕರಾದ ಸುವೀರ್ ಜೈನ್ ಸ್ವಾಗತಿಸಿದರು. ಪ್ರಾಧ್ಯಾಪಕ ಶಶಾಂಕ್ ಬಿ.ಎನ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ