ಕಾರ್ಯಕ್ರಮವನ್ನು ದಕ್ಷಿಣ ಭಾರತ ಈ.ಬಿ.ಎ.ಎಲ್ ಇದರ ಅಧ್ಯಕ್ಷ ಡಾ. ಎಂ.ಕೆ. ಕೃಷ್ಣ ಇವರು ಉದ್ಘಾಟಿಸಿ ನೇತ್ರದಾನ ಮಾಡುವುದು ಜಗತ್ತಿನಲ್ಲಿ ಅತ್ಯುತ್ತಮವಾದ ಸೇವಾ ಕಾರ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ನೇತ್ರದಾನ ಮಾಡುವ ಸೇವಾ ಮನೋಭಾವವು ಯುವಕರಲ್ಲಿ ಹೆಚ್ಚಾಗಬೇಕು ಮತ್ತು ಕಣಿನ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಲ್.ಸಿ.ಬಿ.ಸಿ.ಎಸ್ ಅಧ್ಯಕ್ಷ ಲಯನ್ ಮಣಿ. ವಿ, ವೀರೇಶ್, ಡಾ. ರಾಜ್‌ಕುಮಾರ್ ನೇತ್ರ ಬ್ಯಾಂಕ್, ಡಾ.ಕೃತಿಕ, ನೇತ್ರ ತಜ್ಞರು, ನಾರಾಯಣ ನೇತ್ರಾಲಯ ಹಾಗೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಎಸ್. ಸತೀಶ್, ಆಂತರಿಕ ಗುಣಮಟ್ಟ ಹಾಗೂ ಭರವಸಾ ಸಮಿತಿಯ ಸಂಚಾಲಕರಾದ ನಾಗಸುಧಾ ಆರ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ವಿನಯ್ ಸಾಗರ್ ಎಲ್.ಎಸ್. ಯೂತ್ ರೆಡ್ ಕ್ರಾಸ್ ಸಂಚಾಲಕರಾದ ಮೋಹನ್.ಟಿ ಇವರುಗಳು ಭಾಗವಹಿಸಿದ್ದರು.