ಐನೂರರ ಒಳಗೆ ಮೂರು ವಿದ್ಯಾರ್ಥಿಗಳಿಗೆ ಮತ್ತುಸಾವಿರದೊಳಗೆ ಏಳು ವಿದ್ಯಾರ್ಥಿಗಳಿಗೆ ರ‍್ಯಾಂಕ್
ಪುತ್ತೂರು, ಜು 30: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ-2022 ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಶ್ರೀನಿಧಿ ಐ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 64 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 184 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 294ನೇ ರ‍್ಯಾಂಕ್, ವೆಟರ್ನರಿಯಲ್ಲಿ 315 ನೇ ರ‍್ಯಾಂಕ್ ಗಳಿಸಿದ್ದಾರೆ. ಈತ ಕಾಸರಗೊಡಿನ ಪೆರ್ಲದ ಹರೀಶ್ ಐ ಮತ್ತು ಜಯಪ್ರದ ಕೆ ದಂಪತಿ ಪುತ್ರ.
ಮನ್ವಿತ ಎನ್ ಪಿ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 177 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 859ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 367 ನೇ ರ‍್ಯಾಂಕ್, ಫಾರ್ಮಾದಲ್ಲಿ 1118 ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. ಈಕೆ ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾ ದಂಪತಿ ಪುತ್ರಿ.
ವಿಶಾಖ್ ಕಾಮತ್ ಇಂಜಿನಿಯರಿಂಗ್ ನಲ್ಲಿ 350ನೇ ರ‍್ಯಾಂಕ್, ಫಾರ್ಮಾದಲ್ಲಿ 1848ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಜೆಇಇ ಮೈನ್ಸ್ ಪರೀಕ್ಷೆಯಲ್ಲಿ 99.33 % ಅಂಕ ಗಳಿಸಿದ್ದನು. ಈತ ಪುತ್ತೂರಿನ ಬೊಳುವಾರಿನ ಎಂ. ವಿದ್ಯಾಧರ್ ಕಾಮತ್ ಮತ್ತು ಎಂ. ಮುಕ್ತ ಕಾಮತ್ ದಂಪತಿ ಪುತ್ರ.
ವಿನೀತ್ ಜೆ ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 535 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 768 ನೇ ರ‍್ಯಾಂಕ್, ವೆಟರ್ನರಿಯಲ್ಲಿ 1139 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 2237ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಪುತ್ತೂರಿನ ಜಯಂತ ಮತ್ತು ಸರೋಜಿನಿ ಎನ್ ದಂಪತಿ ಪುತ್ರ.
ಕೀರ್ತನ್ ಅಡಿಗ ಇಂಜಿನಿಯರಿಂಗ್ ನಲ್ಲಿ 658ನೇ ರ‍್ಯಾಂಕ್, ಫಾರ್ಮಾದಲ್ಲಿ 3401 ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಕಾಸರಗೋಡಿನ ಬಾಲಕೃಷ್ಣ ಅಡಿಗ ಮತ್ತು ಸುಲೋಚನಾ ದಂಪತಿ ಪುತ್ರ.
ಸ್ತುತಿ ಎಂ. ಎಸ್ ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 687 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 735 ನೇ ರ‍್ಯಾಂಕ್, ವೆಟರ್ನರಿಯಲ್ಲಿ 1740 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 2304ನೇ ರ‍್ಯಾಂಕ್, ಫಾರ್ಮಾದಲ್ಲಿ 2047 ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಪುತ್ತೂರಿನ ನೆಹರೂನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರಿ.
ಸಾತ್ವಿಕ್ ಶಿವಾನಂದ್ ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 699 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 773 ನೇ ರ‍್ಯಾಂಕ್, ವೆಟರ್ನರಿಯಲ್ಲಿ 1526 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 2547ನೇ ರ‍್ಯಾಂಕ್, ಫಾರ್ಮಾದಲ್ಲಿ 1929 ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಸುಳ್ಯದ ಶ್ರೀರಾಮ ಪಿ ಸಿ ಮತ್ತು ಶಿಲ್ಪಾ ಪಿ. ಎಸ್ ದಂಪತಿ ಪುತ್ರ.
ಕೆ. ಎ. ಅನನ್ಯ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1245 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1277 ನೇ ರ‍್ಯಾಂಕ್, ವೆಟರ್ನರಿಯಲ್ಲಿ 3296 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 4009ನೇ ರ‍್ಯಾಂಕ್, ಫಾರ್ಮಾದಲ್ಲಿ 4151 ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಸುಳ್ಯದ ಡಾ. ಅಚ್ಯುತ ಪೂಜಾರಿ ಕೆ ಮತ್ತು ಸುನಂದ ದಂಪತಿ ಪುತ್ರಿ.
ಪವನ್ ವೈ.ಡಿ.ಜೆ ಇಂಜಿನಿಯರಿಂಗ್ ನಲ್ಲಿ 1840ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3252 ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಪುತ್ತೂರು ಪಡ್ನೂರಿನ ದೇವಪ್ಪಗೌಡ ವೈ ಮತ್ತು ಕುಸುಮ ಬಿ ದಂಪತಿ ಪುತ್ರ.
ಬಿ ರಿಯಾ ಶೆಟ್ಟಿ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1964 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 2191 ನೇ ರ‍್ಯಾಂಕ್, ವೆಟರ್ನರಿಯಲ್ಲಿ 5913 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 4305ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಪುತ್ತೂರಿನ ಬಿ. ರಾಜೇಂದ್ರ ಪ್ರಸಾದ್ ಶೆಟ್ಟಿ ಮತ್ತುಅನಿತಾ ಆರ್ ಶೆಟ್ಟಿ ದಂಪತಿ ಪುತ್ರಿ.
ಅಪೂರ್ವ ಎಸ್ ಪಿ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 2287 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 2595 ನೇ ರ‍್ಯಾಂಕ್, ಮತ್ತು ಇಂಜಿನಿಯರಿಂಗ್ ನಲ್ಲಿ 4304ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಸುಳ್ಯದ ಸೋಮಶೇಖರ್ ಮತ್ತು ಪೂರ್ಣಿಮ ಎಂ. ಆರ್ ದಂಪತಿ ಪುತ್ರಿ.
ಪ್ರತಿಕಾ ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 2805 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3088 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 5804ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಮಾಣಿಯ ನಾಗಪ್ಪ ಕುಲಾಲ್ ಮತ್ತು ಶೀಲಾವತಿ ದಂಪತಿ ಪುತ್ರಿ.
ವಸುಧಾ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3846 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 4836ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಮಂಜೇಶ್ವರದ ಲಕ್ಷ್ಮೀಶ ಕೆ ಪಿ ಮತ್ತು ವಿಜಯಶ್ರೀ ದಂಪತಿ ಪುತ್ರಿ.
ಆದಶ್ ಹೆಗ್ಡೆ ಇಂಜಿನಿಯರಿಂಗ್ ನಲ್ಲಿ 4036ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಪುತ್ತೂರಿನ ದಿ.ಅನಿಲ್ ಕುಮಾರ್ ಮತ್ತು ಧನಲಕ್ಷ್ಮಿ ದಂಪತಿ ಪುತ್ರ.
ಅನನ್ಯ ಎಸ್ ಇಂಜಿನಿಯರಿಂಗ್ ನಲ್ಲಿ 4252ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಪುತ್ತೂರಿನ ಶಿವಪ್ರಸಾದ್ ಕೆ.ಎಸ್ ಮತ್ತು ನಂದಾ ದಂಪತಿ ಪುತ್ರಿ.
ಅದ್ವೈತ್ ಶೆಟ್ಟಿ ಇಂಜಿನಿಯರಿಂಗ್ ನಲ್ಲಿ 4359ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಪುತ್ತೂರಿನ ಎ. ಸೀತಾರಾಮ ಶೆಟ್ಟಿ ಮತ್ತು ಸುಷ್ಮಾ ಎಸ್ ಶೆಟ್ಟಿ ದಂಪತಿ ಪುತ್ರ.
ಚೈತನ್ಯ ಎಸ್ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 4821 ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಬಂಟ್ವಾಳದ ನೇರಳಕಟ್ಟೆಯ ಈಶ್ವರ ನಾಯ್ಕ ಎಸ್ ಮತ್ತು ಗೀತಾ ಜಿ ದಂಪತಿ ಪುತ್ರಿ.
ಸುದರ್ಶನ್ ಇಂಜಿನಿಯರಿಂಗ್ ನಲ್ಲಿ 4977ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಪೆರ್ಲದ ಮುರಳೀಕೃಷ್ಣ ಬಿ ಮತ್ತು ನಯನಾ ದಂಪತಿ ಪುತ್ರ.
ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.