|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆಯಲ್ಲಿ ಯೋಗ ತರಬೇತಿ ಉದ್ಘಾಟನೆ

ನಿಟ್ಟೆಯಲ್ಲಿ ಯೋಗ ತರಬೇತಿ ಉದ್ಘಾಟನೆ


ನಿಟ್ಟೆ: ʼಯೋಗಾಭ್ಯಾಸವೆಂಬುದು ಪ್ರತಿಯೋವ೯ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವೃದ್ಧಿಯಲ್ಲಿ ಬಹಳಷ್ಟು ಉಪಯುಕ್ತವಾದ ಅಂಶವಾಗಿದೆʼ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್‌ ಎನ್‌ ಚಿಪ್ಳೂಣ್ಕರ್‌ ಅಭಿಪ್ರಾಯಪಟ್ಟರು.


ನಿಟ್ಟೆ ತಾಂತ್ರಿಕ ಕಾಲೇಜು ಹಾಗೂ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾಥಿ೯ನಿಲಯದ ಸಹಯೋಗದಲ್ಲಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ೨೧ ದಿನಗಳ ಯೋಗ ತರಬೇತಿ ಶಿಬಿರ ʼಯೋಗ ಉತ್ಸವʼದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ʼಜೂ.೨೧ ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ಶಿಬಿರದ ಪೂಣ೯ ಪ್ರಯೋಜನವನ್ನು ವಿದ್ಯಾಥಿ೯ಗಳು ಪಡೆದುಕೊಳ್ಳಬೇಕುʼ ಎಂದು ಅವರು ಹೇಳಿದರು.


ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‌ನ ಮೈಟೆನೆನ್ಸ್‌ & ಡೆವಲ್ಮೆಂಟ್‌ ನಿದೇ೯ಶಕ ಶ್ರೀ ಯೋಗೀಶ್‌ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ʼನಿಟ್ಟೆ ಕ್ಯಾಂಪಸ್‌ನಲ್ಲಿ ನಡೆಸಲಾಗುತ್ತಿರುವ ಈ ಶಿಬಿರವು ವಿದ್ಯಾಥಿ೯ಗಳಲ್ಲಿ ದೈಹಿಕ ಆರೋಗ್ಯ ಮಾನಸಿಕ ನೆಮ್ಮದಿ ಹಾಗೂ ಆಧ್ಯಾತ್ಮಿಕ ಅಂಶವನ್ನು ವೃದ್ಧಿಸುವ ಕೆಲಸ ಮಾಡಲಿದೆ. ಮುಂಬರುವ ಜೂ.೨೧ ರಂದು ನಿಟ್ಟೆ ಕ್ಯಾಂಪಸ್‌ನಲ್ಲಿ ನೂರಾರು ಮಂದಿಗಳನ್ನು ಒಟ್ಟುಗೂಡಿಸಿಕೊಂಡು ಒಂದು ಉತ್ತಮ ರೀತಿಯ ವಿಶ್ವ ಯೋಗದಿನಾಚರಣೆಯನ್ನು ಹಮ್ಮಿಕೊಳ್ಳುವ ಯೋಜನೆಯಿದೆʼ ಎಂದರು.


ತರಬೇತಿ ಶಿಬಿರದ ಉದ್ಘಾಟನಾ ಕಾಯ೯ಕ್ರಮದ ಸಲುವಾಗಿ ನೆರೆದ ವಿದ್ಯಾಥಿ೯ಗಳು ಕೆಲವಾರು ಯೋಗ ಪ್ರಕ್ರಿಯೆಗಳನ್ನು ಮಾಡಿದರು.


ಯೋಗ ಶಿಬಿರದ ಸಂಯೋಜಕ ಡಾ.ಅಜಿತ್‌ ಹೆಬ್ಬಾಳೆ ಸ್ವಾಗತಿಸಿ ಯೋಗ ಉತ್ಸವದ ಬಗೆಗೆ ಪ್ರಾಸ್ತಾವಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಯೋಗ ತಂಡವಾದ ಯುಜ್‌ ಫಾರ್‌ ಲೈಫ್‌ ನ ವಿದ್ಯಾಥಿ೯ ನಾಯಕಿ ಶ್ರೀವಾಣಿ ಬಾಯರಿ ವಂದಿಸಿದರು.

web counter


0 Comments

Post a Comment

Post a Comment (0)

Previous Post Next Post