|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಟ್ಸಾಪ್‌ ಗುಂಪುಗಳ ಸದಸ್ಯರ ಸಂಖ್ಯಾ ಮಿತಿ 512ಕ್ಕೆ ಏರಿಕೆ

ವಾಟ್ಸಾಪ್‌ ಗುಂಪುಗಳ ಸದಸ್ಯರ ಸಂಖ್ಯಾ ಮಿತಿ 512ಕ್ಕೆ ಏರಿಕೆ

ಡೆಸ್ಕ್‌ಟಾಪ್‌ ಆವೃತ್ತಿ ಮಾತ್ರ ಇನ್ನೂ ಪೂರ್ಣಪ್ರಮಾಣದಲ್ಲಿ ಬಳಕೆದಾರಸ್ನೇಹಿ ಆಗಿಲ್ಲ


ಮಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗುಂಪುಗಳಲ್ಲಿ ಸದಸ್ಯರ ಸಂಖ್ಯಾ ಮಿತಿಯನ್ನು ಹೆಚ್ಚಿಸಿದೆ. ಇದುವರೆಗೆ ಪ್ರತಿ ಗ್ರೂಪ್‌ನಲ್ಲಿ ಗರಿಷ್ಟ 256 ಸದಸ್ಯರು ಮಾತ್ರ ಇರಲು ಅವಕಾಶವಿತ್ತು. ಆದರೆ ಇದೀಗ ಈ ಸಂಖ್ಯೆಯನ್ನು 512ಕ್ಕೆ ಹೆಚ್ಚಿಸಿದೆ ವಾಟ್ಸಾಪ್. ಇದರ ಪ್ರತಿಸ್ಪರ್ಧಿ ಟೆಲಿಗ್ರಾಂನಲ್ಲಿ ಒಂದು ಗುಂಪಿನಲ್ಲಿ 20,000ದ ವರೆಗೂ ಸದಸ್ಯರು ಸೇರಲು ಅವಕಾಶವಿದೆ. ಅದಕ್ಕೆ ಹೋಲಿಸಿದರೆ ಈಗಲೂ ವಾಟ್ಸಾಪ್‌  ಗುಂಪುಗಳ ಸದಸ್ಯರ ಸಂಖ್ಯೆ ತೀರಾ ಕಡಿಮೆಯೇ ಇದೆ.


ಇತ್ತೀಚೆಗಷ್ಟೇ  ಮೊಬೈಲ್‌ ವಾಟ್ಸಾಪ್‌ ಗೆ ಇಂಟರ್‌ನೆಟ್‌ ಸಂಪರ್ಕವಿಲ್ಲದಿದ್ದರೂ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಕನೆಕ್ಟ್‌ ಆಗಿರುವಂತಹ ಫೀಚರ್‌ ಅನ್ನು ಬಿಡುಗಡೆಗೊಳಿಸಿದೆ. ಆದರೆ ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿಯೇ ಇದ್ದಂತೆ ತೋರುತ್ತದೆ. ಏಕೆಂದರೆ ಡೆಸ್ಕ್‌ಟಾಪ್‌ ಮೂಲಕ ವಾಟ್ಸಾಪ್‌ ಬಳಸುವವರಿಗೆ ಮೊದಲ ಸಲ ಲಾಗಿನ್ ಆಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಪದೇ ಪದೇ Refresh ಆಗುವಾಗ ಮತ್ತೆ ಅದೇ ಸ್ಲೋಡೌನ್‌ ಕಾಣಿಸಿಕೊಳ್ಳುತ್ತದೆ.


ಬ್ರೌಸರ್‌ ಮೂಲಕ  web.whatsapp.com ಬಳಸುವಾಗ ಯಾವುದಾದರೂ ಲಿಂಕ್‌ ಹಂಚಿಕೊಳ್ಳಬೇಕೆಂದರೆ ಅದರ ಚಿತ್ರಗಳು  Fetch ಆಗುವುದಿಲ್ಲ.  ವಿಂಡೋಸ್ ಆವೃತ್ತಿಯನ್ನು ಡೆಸ್ಕ್‌ಟಾಪ್‌ಗೆ ಅಳವಡಿಸಿಕೊಂಡರೆ ಲಿಂಕ್‌ಗಳ್ನು ಹಂಚಿಕೊಳ್ಳುವಾಗ ಚಿತ್ರಗಳು ಕಾಣಿಸುತ್ತವೆಯಾದರೂ ನಿಧಾನಗತಿಯ ಸಮಸ್ಯೆಗೆ ಪರಿಹಾರ ದೊರೆತಿಲ್ಲ.


ವೃತ್ತಿಪರರು ವಾಟ್ಸಾಪ್‌ ಅನ್ನು ಮೊಬೈಲ್‌ನಲ್ಲಿ ಬಳಸುವುದಕ್ಕಿಂತಲೂ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸಲು ಇಷ್ಟಪಡುತ್ತಾರೆ. ಯಾಕೆಂದರೆ ತಮ್ಮ ಗ್ರಾಹಕರ ಜತೆಗೆ ಅಥವಾ ಗುಂಪುಗಳ ಜತೆಗೆ ಮೊಬೈಲ್‌ ಅನ್ನು ಪದೇ ಪದೇ ಮುಟ್ಟದೆಯೇ  ಸುಲಭ ಸಂವಹನವನ್ನು ಕಂಪ್ಯೂಟರ್‌ನಿಂದಲೇ ಮಾಡಬಹುದು ಎಂಬ ಕಾರಣಕ್ಕೆ ಇದನ್ನು ಇಷ್ಟಪಡುತ್ತಾರೆ. ಹಾಗಿದ್ದರೂ ವಾಟ್ಸಾಪ್‌ ಈ ಫೀಚರ್‌ನಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬಂದಿಲ್ಲ.


ಟೆಲಿಗ್ರಾಂಗೆ ಹೋಲಿಸಿದರೆ ವಾಟ್ಸಾಪ್ ನ ಡೆಸ್ಕ್‌ಟಾಪ್‌ ಆವೃತ್ತಿ ಇನ್ನೂ ಶೈಶವಾವಸ್ಥೆಯಲ್ಲೇ ಇದೆ. ಟೆಲಿಗ್ರಾಂ ಅನ್ನು ಮೊಬೈಲ್‌ನಲ್ಲಿ ಆಪ್ ಹಾಕಿರದಿದ್ದರೂ ಕಂಪ್ಯೂಟರ್ ಮೂಲಕ ಸುಲಭವಾಗಿ ಬಳಸಬಹುದಾಗಿದೆ. ಅಲ್ಲದೆ ಕನೆಕ್ಟ್ ಆಗಿ ಲೋಡ್ ಆಗಲು ಕ್ಷಣಮಾತ್ರದ ಸಮಯ ಸಾಕು.  


ವಾಟ್ಸಾಪ್‌ ಅಪ್ಲಿಕೇಶನ್ 2011 ರಲ್ಲಿ ಗುಂಪು ಚಾಟ್‌ಗಳನ್ನು ಪ್ರಾರಂಭಿಸಿತ್ತು.  ಅಲ್ಲಿಂದೀಚೆಗೆ  WhatsApp ದೊಡ್ಡ ಗುಂಪುಗಳು ಮತ್ತು ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಗುಂಪಿನಲ್ಲಿರುವ ಸದಸ್ಯರಿಗೆ ಮಿತಿಯನ್ನು ಈಗತಾನೇ  ಹೆಚ್ಚಿಸಿದೆ. ಮಿತಿ ಹೆಚ್ಚಳವನ್ನು ಮೇ 5, 2022 ರಂದು WhatsApp ಬ್ಲಾಗ್ ಪೋಸ್ಟ್‌ನಲ್ಲಿ ಘೋಷಿಸಿದೆ. ಇದು ಹಂತ ಹಂತವಾಗಿ ಎಲ್ಲ ಬಳಕೆದಾರರಿಗೂ ಲಭ್ಯವಾಗಲಿದೆ.


ಗುಂಪು ಚಾಟ್‌ಗಳಿಗೆ ಹೆಚ್ಚಿನ ಸಾಮರ್ಥ್ಯದ ಜೊತೆಗೆ, WhatsApp ಎಮೋಜಿ ಪ್ರತಿಕ್ರಿಯೆಗಳನ್ನು ಸಹ ಸೇರಿಸಿದೆ. ಇದು ದೊಡ್ಡ ಗುಂಪುಗಳಲ್ಲಿ ಸೂಕ್ತವಾಗಿ ಬರುತ್ತದೆ ಏಕೆಂದರೆ ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಪ್ರಮುಖ ಸಂದೇಶಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.


WhatsApp ನ ಇತ್ತೀಚಿನ ಲೇಟೆಸ್ಟ್‌ ಅಪ್‌ಡೇಟ್‌ ನಿಮ್ಮ ಮೊಬೈಲ್‌ನಲ್ಲಿ ಅಳವಡಿಸಿದ್ದರೆ ಗುಂಪಿನ ಸದಸ್ಯರ ಮಿತಿ ಹೆಚ್ಚಳಗೊಂಡಿರುವ ಫೀಚರ್ ಶೀಘ್ರವೇ ನಿಮಗೂ ಲಭ್ಯವಾಗಬಹುದು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post