ನಿಟ್ಟೆ: ಪ್ರತಿಷ್ಟಿತ ಫ್ಲುಯಿಡ್ ಪವರ್ ಸೊಸೈಟಿ (ರಿ) ಸಂಘಟಿಸಿದ ತಾಂತ್ರಿಕ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ "ಮ್ಯಾನುವಲ್ ಥರ್ಮೋಫಾರ್ಮರ್ ಮೆಷಿನ್"ಗೆ ಫ್ಲುಯಿಡ್ ಪವರ್ ಚಾಲೆಂಜ್ 2022 ಕಾರ್ಯಕ್ರಮದಲ್ಲಿ ಎಂ.ಎಸ್. ಯೋಗನರಸಿಂಹ ಪ್ರೈಜ್ ಫಾರ್ ಇನ್ನೋವೇಶನ್ 2022 ಎಂಬ ಪ್ರಶಸ್ತಿ ವಿಭಾಗದಲ್ಲಿ ದ್ವಿತೀಯ ಬಹುಮಾನವಾಗಿ ರೂ.5,000 ನಗದು ಮತ್ತು ಪ್ರಶಸ್ತಿಪತ್ರ ಲಭಿಸಿದೆ.
ಜೂನ್ ಮೂರನೇ ವಾರದಲ್ಲಿ ಬೆಂಗಳೂರಿನ ಕ್ಯಾಪಿಟಲ್ ಹೋಟೇಲ್‍ನಲ್ಲಿ ನಡೆದ ಫ್ಲುಯಿಡ್ ಪವರ್ ಪ್ರೊಫೆಶನಲ್ ದಿನದ ಆಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು.
ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಶಶಿಕಾಂತ್ ಕರಿಂಕ ಅವರ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆಶಿತ್ ಪ್ರಜ್ವಲ್, ಅಗಸ್ತ್ಯ ಗಂಗಾಧರ್, ಭರತ್ ವಿ ನಾಯ್ಕ್ ಮತ್ತು ಅನಂತನಾರಾಯಣ ಎಂ ಈ ಉಪಕರಣವನ್ನು ತಯಾರಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ