|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಮಾಜಶಾಸ್ತ್ರ- ಸಮಾಜದ ಅಧ್ಯಯನ ಏಕೆ ಬೇಕು? ಮುಂದೆ ಓದಿ...

ಸಮಾಜಶಾಸ್ತ್ರ- ಸಮಾಜದ ಅಧ್ಯಯನ ಏಕೆ ಬೇಕು? ಮುಂದೆ ಓದಿ...


ಏನಾದರೂ ಆಗೂ ಮೊದಲು ಮಾನವನಾಗು ಎಂಬ ಹಿರಿಯರ ಮಾತಿನಂತೆ, ಸಮಾಜಕ್ಕೆ ಉತ್ತಮ ನಾಗರಿಕರನ್ನು ದೊರಕಿಸುವಂತದ್ದು ನಮ್ಮೆಲ್ಲರ ಹೊಣೆ. ವಿಶಿಷ್ಟ ರೀತಿಯಾದ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಘಟನೆಯನ್ನು ಹೊಂದಿರುವ ವಿಸ್ತೃತ ಸಾಮಾಜಿಕ ಗುಂಪೇ ಸಮಾಜ. ಸಮಷ್ಟಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಇರುವ ಸುಂದರ ಅವಕಾಶವೇ ಸಮಾಜಶಾಸ್ತ್ರ. ಈ ಅಧ್ಯಯನವು ಸಮಾಜದ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡುವ ರೀತಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ. ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿರುವ ಸಮಾಜಶಾಸ್ತ್ರದ ಬಗೆಗೆ ತಿಳಿಯುತ್ತ ಹೋದರೆ ಮುಗಿಯದ ಕಥೆಯಾಗಿದೆ. ಆದರೆ ಇತ್ತೀಚಿನ ಸಮಯದಲ್ಲಿ ವಿದ್ಯಾರ್ಥಿಗಳು ಇದರ ಬಗ್ಗೆ ಅರಿಯದೆ ಅವಕಾಶಗಳಿಂದ ವಂಚಿತರಾಗಿರುವುದನ್ನು ಕಾಣಬಹುದಾಗಿದೆ.


ವಿದ್ಯಾರ್ಥಿಗಳಿಗೆ ಸಹಜವಾಗಿ ಮತ್ತು ಜೀವನ ಶೈಲಿಗೆ ಅನುಗುಣವಾಗಿ ಅರ್ಥವಾಗುವ ಈ ಸಮಾಜಶಾಸ್ತ್ರವು ಅವಕಾಶಗಳಿದ್ದರೂ, ವಿದ್ಯಾರ್ಥಿಗಳ ಕೊರತೆಯಿಂದ ದೂರ ಉಳಿದುಬಿಟ್ಟಿದೆ ಹಾಗೂ ಮಾಹಿತಿಗಳ ಕೊರತೆಯಿಂದ ಸಮಾಜಶಾಸ್ತ್ರದಿಂದ ವಂಚಿತರಾಗಿದ್ದಾರೆ ಹಾಗೂ ಉದ್ಯೋಗಗಳ ಕೊರತೆಯಿಂದ ಮರುಗುತ್ತಿದ್ದಾರೆ. ಈ ಸಮಾಜಶಾಸ್ತ್ರವು ಸಮಾಜದ ಬಗೆಗೆ ವಿಭಿನ್ನ ರೀತಿಯಾದ ದೃಷ್ಟಿಕೋನ ಬಳಸುತ್ತದೆ ಹಾಗೂ ಸಮಾಜದಲ್ಲಿ ಉತ್ತಮ ಮತ್ತು ಪರಿಪೂರ್ಣ ಮನುಷ್ಯನ ಸೃಷ್ಟಿಗೆ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಒಬ್ಬ  ಸಾಮಾನ್ಯ ವ್ಯಕ್ತಿ ಅಪಘಾತವಾದ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿಗೂ ಸಮಾಜಶಾಸ್ತ್ರ ವಿದ್ಯಾರ್ಥಿ ಮಾಡುವಂತಹ ಶುಶ್ರೂಷೆಗೆ ಬಹಳಷ್ಟು ವ್ಯತ್ಯಾಸವಿರುತ್ತದೆ. ಅದೇ ರೀತಿ ಒಂದು ಸಣ್ಣ ಸಮಸ್ಯೆ ಬಂದಾಗ ಅದಕ್ಕೆ ಮರುಗಿ ಪ್ರಾಣವನ್ನು ಕಳೆದುಕೊಳ್ಳುವ ಜನರ ನಡುವೆ ಆ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಮತ್ತು ಆ ಸಮಸ್ಯೆಯನ್ನು ಯಾವ ರೀತಿ ಎದುರಿಸಬಹುದಾದ ಅಂತಹ ಜೀವನ ಮೌಲ್ಯಗಳನ್ನು ತಿಳಿಸಿಕೊಡುತ್ತದೆ.


ಸಮಾಜಶಾಸ್ತ್ರದ ಅಧ್ಯಯನ ಯಾತಕ್ಕಾಗಿ:

ಸಮಾಜಶಾಸ್ತ್ರ ಏನನ್ನು ಕಲಿಸಿಕೊಡುತ್ತದೆ, ಎಂಬುದನ್ನು ಅರಿಯದೆ ಸಮಾಜಶಾಸ್ತ್ರದಿಂದ ದೂರ ಉಳಿದಿರುವುದನ್ನು ಕಾಣಬಹುದು. ಸಮಾಜದಲ್ಲಿನ ಏರುಪೇರುಗಳು, ಉದ್ಯೋಗ ಕಲ್ಪಿಸುವಲ್ಲಿ ಸಮಾಜಶಾಸ್ತ್ರದ ಪಾತ್ರ, ಹಿರಿಯರು ಪಾಲಿಸಿಕೊಂಡು ಬಂದಂತಹ ಕಟ್ಟುಪಾಡುಗಳನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಹಾಗೂ ಆಧುನಿಕ ಯುಗದಲ್ಲಿ ಆಗಿರುವಂತಹ ಬದಲಾವಣೆಗಳ ಅಧ್ಯಯನಕ್ಕಾಗಿ ಮತ್ತು ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ. "ಮನುಷ್ಯನು ಸಂಘಜೀವಿ" ಎಂಬ ಮಾತಿನಂತೆ ಸಮಾಜದಲ್ಲಿ ಯಾವ ರೀತಿ ಬೆರೆತು ಬದುಕುತ್ತಾನೆ ಎಂಬುದನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ.


ಸಮಾಜಶಾಸ್ತ್ರ ಅಧ್ಯಯನದಿಂದ ದೊರಕುವಂತಹ ಉದ್ಯೋಗವಕಾಶಗಳು:

ಸಮಾಜಶಾಸ್ತ್ರ ಅಧ್ಯಯನದಿಂದ ಮೊದಲಿಗೆ ಸಮಾಜಕ್ಕೆ ಉತ್ತಮ ನಾಗರಿಕನಾಗಿ ವ್ಯಕ್ತಿಯು ರೂಪುಗೊಳ್ಳುತ್ತಾನೆ. ಇದರ ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಶಿಕ್ಷಕರಾಗಿ ಹಾಗೂ ಪದವಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು.


ಇದರ ಜೊತೆಗೆ ಪದವಿ ಹಂತದಲ್ಲಿ ಸಮಾಜಶಾಸ್ತ್ರ ಅಧ್ಯಯನ ಮಾಡುವುದರಿಂದ ಸ್ವತಹ ತಾವೇ ಐಎಎಸ್, ಕೆಎಎಸ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬಹುದು, ಈ ಪರೀಕ್ಷೆಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಮಾಜಶಾಸ್ತ್ರದ ವಿಷಯದ ಬಗೆಗೆ ಪ್ರಶ್ನೆಗಳು ಬರುವುದರಿಂದ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗುತ್ತದೆ ಹಾಗೂ ಪಂಚಾಯತ್ ಹಂತಗಳಲ್ಲಿ ಅಧಿಕಾರಿಗಳನ್ನು ಸೃಷ್ಟಿಸುವ ಕಾರ್ಯವನ್ನು ಸಮಾಜಶಾಸ್ತ್ರ ಅಧ್ಯಯನ ಕಲ್ಪಿಸುತ್ತದೆ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಮುದಾಯ ಅಭಿವೃದ್ಧಿ ಯೋಜನೆ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಅಧಿಕಾರಿಗಳಾಗಬಹುದು ಹಾಗೂ ಕೌಟುಂಬಿಕ ಸಮಸ್ಯೆ, ಮದ್ಯ ಮತ್ತು ಅಮಲು ಚಟಗಳಿಂದ ದೂರವಿರಿಸಲು ಆಪ್ತ ಸಲಹೆಗಾರ ರಾಗಬಹುದು. ಮತ್ತು ಆರೋಗ್ಯ ಸಲಹೆಗಾರರಾದ ಬಹುದು ಮತ್ತು ಪೊಲೀಸ್ ಅಧಿಕಾರಿಗಳಾಗಲು  ಸಮಾಜಶಾಸ್ತ್ರ ಅಧ್ಯಯನವು ಬಹುಮುಖ್ಯವಾಗಿದೆ ಇದಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ನಿಷ್ಠಾವಂತ ಅಧಿಕಾರಿಗಳನ್ನು ಕಲ್ಪಿಸುವಲ್ಲಿ ಸಮಾಜಶಾಸ್ತ್ರ ಅಧ್ಯಯನವು ಮುಖ್ಯ ಪಾತ್ರವಹಿಸಿದೆ.


ಆದರೆ ಇಷ್ಟೆಲ್ಲಾ ಅವಕಾಶಗಳಿದ್ದರೂ ವಿದ್ಯಾರ್ಥಿಗಳು ಸಮಾಜಶಾಸ್ತ್ರದ ಮಹತ್ವ ಅರಿಯದೆ ಸಮಾಜಶಾಸ್ತ್ರ ದಿಂದ ದೂರ ಉಳಿದಿರುವುದನ್ನು ಕಾಣಬಹುದು ಹಾಗೂ ಇಷ್ಟೆಲ್ಲ ಉದ್ಯೋಗಗಳು ಇದ್ದರೂ ನಿರುದ್ಯೋಗಿಗಳಾಗಿದ್ದಾರೆ. ಇನ್ನಾದರೂ ಸಮಾಜಶಾಸ್ತ್ರ ಅಧ್ಯಯನದ ಮಹತ್ವವನ್ನು ಅರಿತು ಸಮಾಜಕ್ಕೆ ಉತ್ತಮ ಪ್ರಜೆಯಾಗೋಣ.

- ಯಶಸ್ವಿನಿ ಅಜಿರ

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿweb counter

0 Comments

Post a Comment

Post a Comment (0)

Previous Post Next Post