|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ- ಭಾಗ- 7

ಕಿರು ಕಾದಂಬರಿ: ದೊಂಬಿ- ಭಾಗ- 7



ಒಂದು ದಿನ ಊರಿನಿಂದ ಬಂದ ಮಾಲತಿ ಮತ್ತು ಕಣ್ಣ, ಬಸ್ಯ ವಾಸವಿದ್ದ ಗುಡಿಸಲ ಹತ್ತಿರ ಬಂದು ಕಮ್ಲಿಯನ್ನು ವಿಚಾರಿಸಿದ್ದರಂತೆ, ಬಸ್ಯ ಕೂಲಿಗೆ ಹೋಗಿದ್ದ, ಅಕ್ಕಪಕ್ಕ ಗುಡಿಸಲವರು ಕಮ್ಲಿಯ ಸಾವಿನ ಸುದ್ದಿಯನ್ನು ತಿಳಿಸಿದರು. ಅಲ್ಲದೆ ಮಾಲಿಯನ್ನು ಬಹುವಾಗಿ ಬೈದು ಮೂದಲಿಸಿದ್ದರು. ನೀನು ಅಪ್ಪ ಅಮ್ಮನಿಗೆ ಮಗಳಾಗಲಿಲ್ಲವೆಂದು ಬಿರುನುಡಿಗಳನ್ನಾಡಿದ್ದರು. ಮಾಲತಿ ಗೋಳೋ ಎಂದು ಅಳಲಾರಂಭಿಸಿದರು. ಅವಳು ಅಳುತ್ತಿದ್ದಂತೆ ಕಣ್ಣ ಸಮಾಧಾನ ಮಾಡಲೆತ್ನಿಸಿದ. ಅವನೇ ಅವಳನ್ನು ಬಸ್ಯ ಕೆಲಸಮಾಡುತ್ತಿದ್ದ ಎಡೆಗೆ ಕರೆದುಕೊಂಡು ಬಂದರೆ ಅವನಿಗೆ ಅವಳ ಮುಖವನ್ನೂ ನೋಡುವ ಮನಸ್ಸಾಗಲಿಲ್ಲ. ”ಕೊಂದೆ ನೀನು ಅಪ್ಪ ಅಮ್ಮನನ್ನು.... ಕೊಂದೆ ........ಇನ್ನೇನು ಬಾಕಿ ಇದೆ” ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ. ಮಾಲತಿ ಏನನ್ನೂ ಮಾತನಾಡಲಿಲ್ಲ. ಸುಮ್ಮನೆ ಮುಸು ಮುಸು ಅಳುತ್ತಳೇ ಇದ್ದಳು. ಕಣ್ಣನೇ ತಾನು ವಾಸವಾಗಿರುವ ವಠಾರದ ವಿಳಾಸವನ್ನು ಬಸ್ಯನಿಗೆ ತಿಳಿಸಿ ಮನೆಗೆ ಬರುವಂತೆ ಆಹ್ವಾನವನ್ನು ಕೊಟ್ಟು ಹೆಂಡತಿಯನ್ನು ಕರೆದುಕೊಂಡು ಹೋಗಿದ್ದ.

ಒಂದು ಭಾನುವಾರ ಸಂಜೆ ಬಸ್ಯ ಮಾಲತಿಯ ಮನೆಯನ್ನು ಹುಡುಕಿಕೊಂಡು ಹೋಗಿದ್ದ, ರಾಜಾಜಿನಗರದ ಬಡ ವರ್ಗದವರು ವಾಸಿಸುವ ಪ್ರದೇಶದಲ್ಲಿ ಮಾಲತಿಯ ಗುಡಿಸಲು ಸಿಕ್ಕಿತು. ಆಣ್ಣ ಬಂದನೆಂಬ ಸಂತಸದಲ್ಲಿ ಮಾಲತಿ ಆಗಲೆ ಚಹ ಮಾಡಿ ತಿಂಡಿಕೊಟ್ಟು ಸತ್ಕರಿಸಿದಳು. ಎಷ್ಟಾದರೂ ತನ್ನ ಅಣ್ಣ, ಈಗ ತನಗೆ ಸ್ವಂತದವರೆನ್ನುವವರು ಈ ಅಣ್ಣ ಮಾತ್ರ ಎಂದು ಪ್ರೀತಿಯಿಂದಲೇ ಮಾತನಾಡಿಸಿದ್ದಳು. ಬಸ್ಯ ಮಾತ್ರ ಅನ್ಯಮನಸ್ಕನಾಗಿ ಏನನ್ನೋ ಗುನಗುಣಿಸುತ್ತಿದ್ದ. ಅದೇ ಸಮಯಕ್ಕೆ ಕಣ್ಣ ಬಂದ. ಕಣ್ಣನೂ ಸಂತೋಷವನ್ನೇ ವ್ಯಕ್ತ ಪಡಿಸಿದ. ಅದೂ ಇದೂ ಮಾತನಾಡುತ್ತ ಸ್ವಲ್ಪ ಸಮಯ ಕಳೆದ ಮೇಲೆ ಕಣ್ಣ ಚಿಕನ್ ಖರೀದಿಸಲೆಂದು ಹೊರಗೆ ಹೋಗುವಾಗ ಬಸ್ಯನನ್ನೂ ಕರೆದು ”ಸ್ವಲ್ಪ ಹಾಕುವ...  ಬಾ” ಎಂದು ಕರೆದಾಗ ಬಸ್ಯ್ ನಿಗೆ ತಿರಸ್ಕರಿಸಲಾಗಲಿಲ್ಲ. ಹಾಗೆಯೆ ಅವರು ಚಿಕನ್, ಮತ್ತು ಅದರ ಮಸಾಲೆ, ದನಿಯ ಮತ್ತು ಮೆಣಸಿನ ಪುಡಿ ಮತ್ತೆ ಇಪ್ಪತ್ತು ರುಪಾಯಿಯ ಅಡಿಗೆ ಮಾಡುವ ಎಣ್ಣೆ ಪಾಕೆಟ್ ಕೊಂಡುಕೊಂಡು ಒಂದು ಬಾರಿಗೆ ನುಗ್ಗಿ ಅಲ್ಲಿ ನೈಂಟಿ ನೈಂಟಿ ಹಾಕಿ ಮತ್ತೆ ಸ್ವಲ್ಪ ಬಾಟ್ಲಿಯಲ್ಲಿ ತುಂಬಿ ಮನೆಗೆ ಬಂದರು. ಮಾಲತಿ ಕೊಳಿ ಸಾರು, ರಾಗಿ ಮುದ್ದೆ ಮತ್ತು ಅನ್ನವನ್ನು ಮಾಡುವ ತಯಾರಿಯಲ್ಲಿದ್ದರೆ ಭಾವ ಮೈದನರು ಹೊರಗಡೆ ಮಾತನಾಡುತ್ತಾ ಕುಳಿತರು. ಬಸ್ಯನಿಗೆ ಯಾಕೊ ಆ ವಾತಾವರಣ ಸಹಿಸಲಾಗುತ್ತಿರಲಿಲ್ಲ. ತನ್ನಲ್ಲಿ ಕಣ್ಣನ ಬಗ್ಗೆ ಯಾಕೆ ಕೋಪ ಮೂಡುತ್ತದೆ ಎಂದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಆದರೂ ಅವನಿಗೆ ಕಣ್ಣನ ಮೇಲೆ, ಅವನಮೇಲಿನ ಕೋಪದಿಂದಾಗಿ ಮಾಲತಿಯ ಮೇಲೂ ಕೋಪ. ಎಲ್ಲಕ್ಕೂ ಮೇಲಾಗಿ ತನ್ನ ತಂದೆ ಮತ್ತು ತಾಯಿ ಕಾಲವಾದುದು ಆತನಿಗೆ ಭರಿಸಲಾಗದ ದು:ಖವೇ ಆಗಿತ್ತು.  

ರಾತ್ರಿಯಾಗುತ್ತಿದ್ದಂತೆ ಮಾಲತಿಯ ಅಡಿಗೆಯೂ ಮುಗಿಯಿತು. ಗಂಡ ಮತ್ತು ಅಣ್ಣನಿಗೆ ಊಟ ಬಡಿಸಿದ ಅವಳು  ಬಸ್ಯನ ಊಟ ವಸತಿಯ ಬಗ್ಗೆ ವಿಚಾರಿಸಿದಳು, ಮುಂದೆ ಏನೂ ಮಾಡಬೇಕು ಎಂಬುದರ ಬಗ್ಗೆ ವಿಚಾರಿಸಿದಳು. ಎಲ್ಲಾಕ್ಕೂ ಹೂಂ ಹೂಂ ಎಂದು ಮಾತ್ರ ಉತ್ತರಿಸುತ್ತಿದ್ದ. ನಿಜವಾಗಿಯೆಂದರೆ ಅವನಿಗೆ ನಾನು ಇನ್ನು ಮುಂದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಅವನು ಚಿಂತಿಸಿದ್ದೇ ಇಲ್ಲ. ಚೆನ್ನಾಗಿ ಕೆಲಸ ಮಾಡುವುದು, ಚೆನ್ನಾದ ಊಟ ಮತ್ತೆ ಕುಡಿತ, ಇಷ್ಟೇ ಅವನ ಬಾಳು. ಊಟದ ವೇಳೆ ಕಣ್ಣ ಬಾಟಲಿನಲ್ಲಿ ತಂದಿದ್ದುದನ್ನು ಬಸ್ಯನಿಗು ಕೊಟ್ಟು ತಾನೂ ಕುಡಿಯ ತೊಡಗಿದ. ಕಂಠ ಪೂರ್ತಿ ತಿಂದು ಕುಡಿದ ಬಸ್ಯ ನಾನಿನ್ನು ಹೋಗುತ್ತೇನೆಂದು ಹೊರಡಲುನುವಾದರೆ ಅವನ ಕಾಲುಗಳು ಸಹಕರಿಸುತ್ತಿರಲಿಲ್ಲ. ಅಲ್ಲಿ ಇಲ್ಲಿ ತೂರಾಡುತ್ತಾ ಇರುವವನನ್ನು ನೋಡಿ ಮಾಲತಿ ಅಲ್ಲೇ ಇರುವಂತೆ ಒತ್ತಾಯಿಸಿದಳು. ಅಂತೂ ಆ ದಿನ ಅವನು ಅಲ್ಲಿ ಮನಸ್ಸಿಲ್ಲದಿದ್ದರೂ ನಿಲ್ಲಬೇಕಾಯಿತು.

ಭಾಗ-6ನ್ನು ಓದಲು ಇಲ್ಲಿ ಕ್ಲಿಕ್ಕಿಸಿ


ಬಸ್ಯ ಕೆಲವೊಮ್ಮೆ ಭಾನುವಾರಗಳಂದು ಸಂಜೆ ಬರುತ್ತಿದ್ದ, ಕುಡಿದು ಬಂದ ದಿನ ಅವನು ಮಾಲತಿಗೂ ಕಣ್ಣನಿಗೂ ಮನೆಯ ಹೊರಗೆ ನಿತ್ತು ಬೈಯುತಿದ್ದ. ನೆರೆಹೊರೆಯವರಿಗೆ ಇದು ಅಭ್ಯಾಸವಾಗಿಹೋಗಿತ್ತು. ಬಸ್ಯ ಕುಡಿಯದಿದ್ದರೆ ತಂಗಿಯ ಮನೆಗೆ ಬಂದು ಊಟಮಾಡುವಾಗ ಕಣ್ಣನ ಜೊತೆಗೆ ಕುಡಿದು ಹೋಗುತ್ತಿದ್ದ. ಅವನೇ ಕುಡಿದು ಬಂದರೆ ಇಬ್ಬರಿಗೂ ಮನೆ ಮುಂದೆ ನಿಂತು ಚೆನ್ನಾಗಿ ಬೈದು ಸುಸ್ತಾದಾಗ ಹೋಗುತ್ತಿದ್ದ. ಒಂದೆರಡು ಬಾರಿ ಕಣ್ಣ ಮತ್ತು ಬಸ್ಯ ಕುಡಿದು ಹೊಡೆದಾಡಿದ್ದೂ ಇದೆ. 

ಹೀಗೆ ನಡೆಯುತ್ತಿತ್ತು ಬಸ್ಯನ ದಿನಗಳು.


ಬಸ್ಯ ಒಂದು ದಿನ ಬಹಳ ಕುಡಿದಿದ್ದ, ಬರುವಾಗಲೇ ತೂರಾಡುತ್ತಿದ್ದ, ಬಂದವನೇ  ಮಾಲತಿಗೆ ವಾಮಗೋಚರವಾಗಿ ಬೈಯ್ಯತೊಡಗಿದೆ. ಕಣ್ಣನಿಗೆ ತಡೆಯಲಾಗಲಿಲ್ಲ. ಎಬ್ಬಿಸಿ ಎರಡು ಬಾರಿಸಿದ. /p>


ಬಸ್ಯನಿಗೆ ಪ್ರತಿಕ್ರಿಯೆ ನೀಡಲೂ ಆಗುತಿರಲಿಲ್ಲ. ಬಾಯಿಯಲ್ಲಿ ಎನೋ ವಟಗುಟ್ಟತ್ತಾ ಮನೆಯ ಹೊರಗಡೆಯೇ ಬಿದ್ದಿದ್ದ. ಅಕ್ಕ ಪಕ್ಕವರಿಗೆ ಅವನ ಅವಸ್ಥೆ ಗೊತ್ತಿದ್ದುದರಿಂದ   ಅವನ ಕಡೆ ಯಾರೂ ಗಮನ ಕೊಡಲಿಲ್ಲ. ಸ್ವಲ್ಪ ಸಮಯದ ಮೇಲೆ ಮಾಲತಿಯೆ ಬಂದು ಎಬ್ಬಿಸ ಹೊರಟರೆ ಅವಳಿಗೂ ಎರಡು ಬಾರಿಸಿ ಎದ್ದು ತೂರಾಡುತ್ತಾ ಬಯ್ಯುತ್ತಾ ಹೊರಟುಹೋಗಿದ್ದ. ಅಂದಿನಿಂದ ಅವನು ಆ ಕಡೆ ಬಂದದ್ದು ಬಹಳ ಕಡಿಮೆ. ಆದರೆ ಅವನಿಗೆ ಮಾಲತಿ ಮತ್ತು ಕಣ್ಣನ ಮೇಲಿನ ಕೋಪ ತಣ್ಣಗಾಗಲಿಲ್ಲ.


ಮಾಲತಿ ಈಗ ಗರ್ಭಿಣಿ. ಐದು ತಿಂಗಳು, ಕಣ್ಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೇಕಾದ ಪೌಷ್ಟಿಕ ಆಹಾರದ ಮಾಹಿತಿ ಪಡೆದು ಅದರಂತೆ ಚೆನ್ನಾಗಿ ನೋಡುತ್ತಿದ್ದ. ಅದಕ್ಕೆ ಕಾರಣವೂ ಇತ್ತು, ಬೆಂಗಳೂರಿನ ತಮಿಳು ಮತ್ತು ಕನ್ನಡದ ಬಳಗಗಳಲ್ಲಿ ಈ ತರದ ದಾಂಪತ್ಯ ಸಂಬಂಧಗಳು ನಡೆಯುತ್ತಿದ್ದುದು ಬಹಳ ಕಡಿಮೆ. ಅವರೊಳಗೆ ಅದೇನೋ ಭ್ರಮಿತ ಅಹಂ. ಅವರಿಗಿಂತ ತಾವು ಮೇಲೆ ಎಂದು ಕನ್ನಡದವರಾದರೆ, ನಾವೇನೂ ಕಡಿಮೆ ಎಂದು ಗಿರಿಜಾ ಮೀಸೆ ತಿರುವುವವರು ತಮಿಳರು. ಆದರೆ ಆರ್ಥಿಕವಾಗಿ ಕನ್ನಡದವರು ಮುಂದಾದರೆ ಕಠಿಣ ಶ್ರಮ ಮತ್ತು ದುಡಿಮೆ  ವ್ಯವಹಾರದಲ್ಲಿ ತಮಿಳಿನವರು ಮುಂದು. ಹಾಗೆಂದು  ಕಣ್ಣನ ಬಳಗದಲ್ಲಿ ಮಾಲತಿಗೆ ವಿಶೇಷ ಗೌರವ ಮತ್ತು ಅಭಿಮಾನ. ಅಲ್ಲದೆ ಮಾಲತಿ ಈಗ ತಮಿಳು ಕಲಿತಿದ್ದಾಳೆ ಸ್ವಲ್ಪ ಅಪ್ಪಿ ತಪ್ಪಿ ಮಾತನಾಡುತ್ತಿದ್ದಾಳೆ, ಅದೂ ತಮಿಳರಿಗೆ ಒಂದು ಅಭಿಮಾನದ ಮಾತು. ತಮಿಳರಿಗೆ ಅವರ ಭಾಷೆಯ ಬಗ್ಗೆ ದೊಡ್ಡ ಅಭಿಮಾನ. ಅವರ ಮತ್ತೊಬ್ಬ ತಮಿಳನು ಸಿಕ್ಕಿದರೆ ಇಂಗ್ಲಿಷ್ ಗೊತ್ತಿದ್ದರೂ ತಮಿಳಿನಲ್ಲಿಯೇ ಮಾತನಾಡುತ್ತಾರೆ. ಆದರೆ ಕನ್ನಡದವರು ಹಾಗಲ್ಲ, ಅಲ್ಪ ಸ್ವಲ್ಪ ಇಂಗ್ಲಿಷ್ ಗೊತ್ತಿದ್ದರೆ ಸಾಕು, ಅದರಲ್ಲೆ ಅವರು ಇನ್ನೊಬ್ಬ ಕನ್ನಡಿಗನನ್ನು ಮಾತನಾಡಿಸುವ ಪರಿ ಇದು ” ಹಲೊ ಹೌ ಅರ್ ಯು ಬ್ರೊ”

ಅದಕ್ಕೆ ಅವನು ಇಂಗ್ಲಿಷ್ ನಲ್ಲೇ ಉತ್ತರಿಸಬೇಕು ”ಯ ..ಯ...ಫೈನ್...” ಇನ್ನೂ ಏನೇನೋ...ಅಯ್ಯೋ.... ಖರ್ಮ.

(ಮುಂದುವರಿಯುವುದು)

(ಶಂಕರ ಭಟ್)

web counter

0 Comments

Post a Comment

Post a Comment (0)

Previous Post Next Post