|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜುಲೈ 2ರಂದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್- 2022: ಯೋಚಿಸಿ, ಅನ್ವೇಷಿಸಿ, ಭೇಟಿ ಮಾಡಿ

ಜುಲೈ 2ರಂದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್- 2022: ಯೋಚಿಸಿ, ಅನ್ವೇಷಿಸಿ, ಭೇಟಿ ಮಾಡಿ


ಮಂಗಳೂರು, ಜೂನ್ 30, 2022: ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್, ಒಂದು ದಿನದ ಈ ಕಾರ್ಯಕ್ರಮವು ನಿಟ್ಟೆ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ (ಪನೀರ್) ಜುಲೈ 2, 2022 ರಂದು ನಡೆಯಲಿದೆ.  


ಇದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್ ನ  ಮೊದಲನೇ ಆವೃತ್ತಿಯಾಗಿದೆ. ಇದೊಂದು ಸೃಜನಾತ್ಮಕ ಸಭೆಯಾಗಿದ್ದು, ಇಲ್ಲಿ ಕಲಾವಿದರು ಮತ್ತು ಕಲಾಪೋಷಕರು ವಿವಿಧ ಕ್ಷೇತ್ರಗಳ ಅನುಭವಿ ವ್ಯಕ್ತಿಗಳು ತಮ್ಮ ಕಲಾಪ್ರಕಾರದ ತಾಂತ್ರಿಕ ಮತ್ತು ಕಲಾತ್ಮಕ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಎಲ್ಲರಿಗೂ ಉತ್ತಮವಾದ ಅನುಭವ ಮತ್ತು ವಿವಿಧ ಕಲಾಪ್ರಕಾರದ ಒಳನೋಟವನ್ನು ನೀಡಲು ಪ್ರಯತ್ನಿಸುತ್ತದೆ.


ಈ ಸಲದ ಅತಿಥಿಗಳ ಸಾಲಿನಲ್ಲಿ ಖ್ಯಾತ ದೃಶ್ಯ ಕಲಾವಿದ ಬಾದಲ್ ನಂಜುಂಡಸ್ವಾಮಿ, ಮೆಟ್ರೋ ಸಾಗಾ ಚಾನೆಲ್ ನ ಉಪ ವ್ಯವಸ್ಥಾಪಕರು ಆಕರ್ಷ ಕಮಲ, ಪ್ರಸಿದ್ಧ ಲೇಖಕ ಶಶಿ ವಾರಿಯರ್, ಮತ್ತು ಬರಹಗಾರ, ಶೈಕ್ಷಣಿಕ ಮತ್ತು ಅನುವಾದಕರಾಗಿರುವ ಡಾ. ಚಂದನ್ ಗೌಡ ಮುಂತಾದ ಹೆಸರುಗಳು ಇವೆ.


ಇದರ ಜೊತೆ ಜೊತೆಗೆ ಸಂತೋಷ್ ಅಂದ್ರಾದೆ ಮತ್ತು ಕಾಮಿಲ್ಸ್ ಆರ್ಟ್ ಗ್ಯಾಲರಿಯಿಂದ ಚಿತ್ರಕಲಾ ಪ್ರದರ್ಶನವೂ ಇರಲಿದೆ. ಸಂಪನ್ಮೂಲ ವ್ಯಕ್ತಿಗಳ ಮಾತುಕತೆಯ ನಂತರ ಪ್ರಶ್ನೋತ್ತರ ಹಾಗೂ ಚರ್ಚೆಗೂ ಅವಕಾಶ ಇರುತ್ತದೆ. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಪ್ರೇಕ್ಷಕರು /ಭಾಗವಹಿಸುವವರು ಮುಕ್ತವಾಗಿ ಸಂವಾದ  ನಡೆಸಬಹುದು.


ನಿಟ್ಟೆ ಕ್ರಿಯೇಟಿವ್ ಫೆಸ್ಟ್ ನ ಇನ್ನೊಂದು ವಿಶೇಷವೆಂದರೆ ಸಂವಾದ, ಚರ್ಚೆಯ ನಂತರ ಕೆಲ ವಿಶಿಷ್ಟ ಪ್ರದರ್ಶನಗಳೂ ನಡೆಯಲಿವೆ. ಅಭಿನವ್ ಗ್ರೋವರ್- ಯಕ್ಷಗಾನ ಮತ್ತು ರಂಗಭೂಮಿ ಕಲಾವಿದ ಒಂದು ಅತ್ಯಾಕರ್ಷಕ ಪ್ರದರ್ಶನ ನೀಡಲಿದ್ದಾರೆ. ಅದರೊಂದಿಗೆ ತ್ರಿಶಾ ಶೆಟ್ಟಿ ಅವರಿಂದ ಭರತನಾಟ್ಯ ಆಧಾರಿತ ಪ್ರದರ್ಶನ ಮತ್ತು ಡಿಪಾರ್ಟ್ಮೆಂಟ್ ಆಫ್ ಕಲ್ಚರ್ ಎಂಬ ತಂಡದ ಕಾರ್ಯಕ್ರಮವೂ ನಡೆಯಲಿದೆ.  


ಕೆನರಾ ಬ್ಯಾಂಕ್ ಅಸೋಸಿಯೇಟ್ ಪ್ರಾಯೋಜಕತ್ವದ ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್ 2ನೇ ಜುಲೈ 2022 ರಂದು ಬೆಳಿಗ್ಗೆ 11 ಗಂಟೆಗೆ ನಿಟ್ಟೆ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ (ಪನೀರ್) ನಡೆಯಲಿದೆ. ಮುಖ್ಯ ಅತಿಥಿ ಡಾ. ಚಂದನ್ ಗೌಡ ಮತ್ತು ಗೌರವ ಅತಿಥಿ, ಪ್ರೊ. ವಿನೋದ್ ಅರಾನ್ಹಾ, ನಿರ್ದೇಶಕರು, ನಿಟ್ಟೆ ಇನ್ ಸ್ಟೇಟ್ಯೋಟ್ ಆಫ್ ಆರ್ಕಿಟೆಕ್ಚರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನ ಅಂತಿಮ ವರ್ಷದ ಎಂ.ಎ (ಕಾರ್ಪೊರೇಟ್ ಕಮ್ಯುನಿಕೇಷನ್) ವಿದ್ಯಾರ್ಥಿಗಳು ತಮ್ಮ ಈವೆಂಟ್ ಮ್ಯಾನೇಜ್ ಮೆಂಟ್ ಕಲಿಕೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಈ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದೆ.


ಈ ಕಾರ್ಯಕ್ರಮದಲ್ಲಿ ಆಸಕ್ತರು ಪಾಲ್ಗೊಳ್ಳಬಹುದು ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ:

95384 45779

events.nico@nitte.edu.in

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post