ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

Upayuktha
0



ಅಮ್ಮ ನೀನೆಂದು ನನ್ನವಳು

ನಾನೆಂದು ನಿನ್ನವಳು

ಬೇಸರಿಸಬೇಡ ಎಂದಿಗೂ

ನಾನಿರುವೆ ನಿನ್ನೊಂದಿಗೆ ಕೊನೆವರೆಗೂ


ಅಮ್ಮ ಅಂದರೆ ಅರ್ಥನೇ ಸಿಗದೆ ಇರೋ ಒಂದು ದೊಡ್ಡ ಪದ. ಎಲ್ಲಾ ನೋವನ್ನು ಸಹಿಸಿಕೊಂಡು ಜೀವನವನ್ನು ನಡೆಸುತ್ತಾ ಬರುವ ಮೊದಲ ದೇವತೆ. ಸಣ್ಣ ಮಕ್ಕಳು ತೊದಲು ನುಡಿ ಮಾತನಾಡಲು ಶುರು ಮಾಡಿದಾಗ ಹೆಚ್ಚಾಗಿ ಅಮ್ಮ ಎಂಬ ಪದವೇ ಬಾಯಲ್ಲಿ ನುಸುಳುತ್ತದೆ. ನಾವು ಹೆದರಿದಾಗ ಬಿದ್ದಾಗ ಅಮ್ಮ ಎಂದು ಕರೆಯುತ್ತೇವೆ.


ಬಹಳ ದಿನದಿಂದ ಅಮ್ಮ ಎಂಬ ಪದದಲ್ಲಿ ಅಡಗಿರುವ ಮಾಯೆಯಾದರೂ ಏನು? ಯಾಕೆ ಪ್ರಪಂಚದಲ್ಲಿ ಅಮ್ಮನಿಗೆ ಇಷ್ಟು ಬೆಲೆ ಕೊಡುತ್ತಾರೆ ಎಂಬ ಪ್ರಶ್ನೆಗಳು ಕಾಡುತ್ತಲೆ ಇತ್ತು. ಆಗ ನಾನು ನನ್ನ ಅಮ್ಮನನ್ನು ನೆನಪಿಸಿಕೊಂಡೆ.ಪ್ರತಿಯೊಬ್ಬ ಹೆಣ್ಣು ಮುಂದೆ ಅಮ್ಮನಾಗುತ್ತಾಳೆ. ತಮ್ಮ ಮಕ್ಕಳ ಬಗ್ಗೆ ಸಾವಿರಾರು ಕನಸುಗಳನ್ನು ಕಾಣುವುದರಲ್ಲಿ ನನ್ನ ಅಮ್ಮನು ಒಬ್ಬಳು.ನಾನು ಹುಟ್ಟಿದ ನಂತರದಿಂದ ನನ್ನ ಅಮ್ಮನನ್ನು ಗಮನಿಸಿದರೆ ಬಹಳಷ್ಟು ಕಷ್ಟ ಪಟ್ಟಿದ್ದಾಳೆ. ಈಗಲೂ ಪಡುತ್ತಿದ್ದಾಳೆ. ನಾವು ಮಧ್ಯಮ ವರ್ಗದವರು. ನಮಗೆ ಕೂತು ತಿನ್ನುವಷ್ಟು ಆಸ್ತಿ ಪಾಸ್ತಿ ಇಲ್ಲ. ಕೇವಲ ಇಪ್ಪತ್ತು ರೂಪಾಯಿಂದ ನನ್ನ ಅಮ್ಮ ದುಡಿಯುತ್ತಿದ್ದಳಂತೆ. ಆ ಹಣದಿಂದ ನಾವು ಮೂರು ಮಂದಿ ಮಕ್ಕಳನ್ನು ಸಾಕಿಕೊಂಡು ಬಂದಿದ್ದಾಳೆ. ನನ್ನ ಅಮ್ಮ ಯಾವ ರೀತಿಯಲ್ಲಿ ಕಷ್ಟ ಪಡಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅವಳ ಜೀವನದಲ್ಲಿ ಎಲ್ಲಾ ನೋವು, ಅವಮಾನ, ಕಷ್ಟವನ್ನು ಅನುಭವಿಸಿದ್ದಾಳೆ. ಆದರೆ ಅವಳೆಂದಿಗೂ ಕುಗ್ಗಲಿಲ್ಲ. ಜನರಾಡುವ ಮಾತನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಗೆದ್ದೆ ಗೆಲ್ಲುತ್ತೇನೆ ಎಂಬ ಧೈರ್ಯವನ್ನು ಅವಳ ಮನದಲ್ಲಿ ಹುಟ್ಟಿಸಿಕೊಂಡಳು. ನಾನು ಹುಟ್ಟುವುದಕ್ಕಿಂತ ಮೊದಲೇ ಕಣ್ಣೀರಿನಲ್ಲೇ ಕೈ ತೊಳೆದವಳು.


ಅವಳಿಗೆ ಅವಳ ತಾಯಿ ಮನೆಯಲ್ಲಿ ಕಷ್ಟಗಳಿದ್ದರು ನೆಮ್ಮದಿ ಇತ್ತು. ಆದರೆ ಮದುವೆ ಆದ ನಂತರ ನೋವಿನ ಜೊತೆಗೆ ನೆಮ್ಮದಿ ಕೂಡ ಗೆಳೆತನ ಬೆಳೆಸಿತು. ಹಾಗಂತ ನನಗೆ ಯಾವ ರೀತಿಯಲ್ಲು ಏನನ್ನು ಕಮ್ಮಿ ಮಾಡಲಿಲ್ಲ. ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ ಅವಳಿಗೆ ನಿಮೊನ್ಯ ಜ್ವರ ಬಂದಿತ್ತಂತೆ. ಆಗ ನಾನು ಅಮ್ಮ ಕೊನೆಗೂ ಬದುಕುಳಿದದ್ದೆ ಕಷ್ಟ ಎಂದು ಹೇಳುತ್ತಿದರು. ಇದನ್ನೆಲ್ಲ ಕೇಳಿದಾಗ ಕರುಳು ಚುರ್ ಅನ್ನುತಿತ್ತು. ಈಗಲೂ ನನ್ನ ಅಮ್ಮ ಮುನ್ನೂರು ರೂಪಾಯಿಗೆ ದುಡಿದು ನನ್ನ ವಿಧ್ಯಾಭ್ಯಾಸಕ್ಕೆ ಮತ್ತು ಅನೇಕ ವಹಿವಾಟುಗಳಿಗೆ ಅಪ್ಪನಿಗೆ ನೆರವಾಗುತ್ತಿದ್ದಾಳೆ. ನಾನು ಹಾಸ್ಟೆಲ್ನಲ್ಲಿ ಇದ್ದರೂ ದಿನಕ್ಕೆ ಮೂರು ನಾಲ್ಕು ಬಾರಿ ಕರೆ ಮಾಡಿ ಮಾತನಾಡುವುದು ಅವಳ ಅಭ್ಯಾಸ. ಇದರಿಂದ ನಾನು ಬಹಳಷ್ಟು ಬಾರಿ ರೇಗಾಡಿದ್ದೇನೆ. ಆದರೆ ಅವಳು ತುಂಬಾ ಮುಗ್ಧ ಮನಸ್ಸಿನವಳು. ಅದನ್ನೆಲ್ಲ ಯಾವುದು ಲೆಕ್ಕಿಸದೆ ಮಗಳು ಎಂದು ದಿನಾಲು ಮಾತನಾಡುತ್ತಾಳೆ. ನಾನು ಅವಳಿಂದ ದೂರವಿದ್ದೇನೆ ಎಂಬ ದುಃಖವಿದೆ. ಆದರೆ ಅವಳಿಗೆ ನನ್ನ ವಿಧ್ಯಾಭ್ಯಾಸ ಮುಂದುವರೆಯಬೇಕು. ನಾಲ್ಕು ಮಾತುಗಳನ್ನಾಡುವ ಜನರ ಮುಂದೆ ನಾನು ನನ್ನ ಮಕ್ಕಳಿಗೆ ಒಳ್ಳೆಯ ಜೀವನ ಕೊಡಿಸಬೇಕೆಂಬುದು ಅವಳ ದೊಡ್ಡ ಬಯಕೆ. ನಾನು ಕಷ್ಟ ಬಂದ ಹಾಗೆ ನನ್ನ ಮಕ್ಕಳು ಎಲ್ಲಿಯೂ ಕಷ್ಟ ಪಡಬಾರದೆಂಬುದು ಅವಳ‌ ಮನಸ್ಸು.


ನಾವು ಮಧ್ಯಮ ವರ್ಗದವರಾಗಿದ್ದರೂ ನಮ್ಮನ್ನು ಅಮ್ಮ ಶ್ರೀಮಂತ ಮಕ್ಕಳಂತೆ ಬೆಳೆಸಿದ್ದಾಳೆ. ಪ್ರತಿದಿನ ಅವಳು ಅನುಭವಿಸಿದ ನೋವುಗಳನ್ನು ನೆನೆದು ಅಳುತ್ತಾಳೆ. ನನಗೆ ಏನೆ ಕಷ್ಟ ನೋವು ಬಂದರು ನನ್ನ ಅಮ್ಮನೆ ನನಗೆ ಸ್ಪೂರ್ತಿ ಅವಳ ಪ್ರತಿಯೊಂದು ನೋವು ಏನೆಂದು ಈಗ ತಿಳಿಯುತ್ತದೆ. ಆಕೆಯ ನೋವನ್ನು ಮರೆಸಿ ಅವಳ ಖುಷಿಗೆ ನಾನು ಕಾರಣಳಾಗುತ್ತಾ ಸಾಕಿ ಸಲಹಿದ ನನ್ನ ಅಮ್ಮನಿಗೆ ನಾನೆಂದಿಗೂ ಧನ್ಯಳು.



- ನಿರೀಕ್ಷಾ.ಸಿ

ದ್ವಿತೀಯ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು

ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top