ಮಂಗಳೂರು: ನಗರದ ಅತೀ ಪುರಾತನ ಯಕ್ಷಗಾನ ಮೇಳ ಹೊಂದಿದ್ದ ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಶ್ರೀ ಸರಸ್ವತೀ ಯಕ್ಷಗಾನ ಸಂಘವು ಸಂಕ್ರಾಂತಿಯಂದು ಪುನರಾರಂಭಗೊಂಡಿತು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗಂಗಾಧರ ಕೋಟ್ಯಾನ್, ಸುಭಾಷ್ಚಂದ್ರ ಕಾಂಚನ್, ಕೇಶವ ಶೆಟ್ಟಿ, ಮಾಜಿ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ, ಸುರಭಿ ಸಂಸ್ಥೆಯ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಹಾಗೆ ಮಾರಿಯಮ್ಮನ ಸಾನಿಧ್ಯದಲ್ಲಿ ಯಕ್ಷಗಾನ ಸೇವೆಗಳನ್ನು ನಿರಂತರ ನಡೆಸಲು ವ್ಯವಸ್ಥಾಪನಾ ಸಮಿತಿಯು ಸಂಕಲ್ಪಿಸಿದ್ದು ಪಾಕ್ಷಿಕ ಕೂಟಗಳನ್ನು ಆಹ್ವಾನಿತ ಯಕ್ಷಗಾನ ಸಂಘಗಳ ಮೂಲಕ ನಡೆಸಲಾಗುವುದು ಎಂದು ಅಧ್ಯಕ್ಷ ಬಿ. ಅಶೋಕ್ ಕುಮಾರ್ ತಿಳಿಸಿದ್ದಾರೆ.
ಆಹ್ವಾನಿತ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಸಂಘದ ಕಲಾವಿದರಿಂದ "ಶ್ರೀ ರೇಣಕಾ ಮಹಾತ್ಮೆ" ಯಕ್ಷಗಾನ ತಾಳಮದ್ದಳೆ ಜರಗಿತು. ಯುವ ಭಾಗವತ ಐಕಳ ದೇವರಾಯ ಆಚಾರ್ಯ, ಖ್ಯಾತ ಸ್ತ್ರೀ ವೇಷಧಾರಿ ಗೋಣಿಬೀಡು ಸಂಜಯ ಕುಮಾರ್ ಅತಿಥಿ ಕಲಾವಿದರಾಗಿ ಪಾಲ್ಗೊಂಡಿದ್ದರು.
ಅಶೋಕ್ ಶೆಟ್ಟಿ ಮಾರಿಗುಡಿ ಸ್ವಾಗತಿಸಿದರು. ಭುಜಂಗ ಕೊಟ್ಟಾರಿ ಮಾರಿಗುಡಿ ನಿರ್ವಹಿಸಿದರು. ಸಂಜಯ ಕುಮಾರ್ ರಾವ್ ಧನ್ಯವಾದ ಸಮರ್ಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ