ಗಿರಿನಗರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ತಂಡದಿಂದ 'ಭಕ್ತ ಸುಧನ್ವ' ಪ್ರದರ್ಶನ

Upayuktha
0


ಬೆಂಗಳೂರು: ಗಿರಿನಗರದ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ- ಪುನರ್‌ ಪ್ರತಿಷ್ಠಾ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು- ಇವರ ಸಹಯೋಗದಲ್ಲಿ 'ಭಕ್ತಸುಧನ್ವ' ಪೌರಾಣಿಕ ಯಕ್ಷಗಾನವು ಭಾನುವಾರ ಸಂಜೆ ಪ್ರದರ್ಶನಗೊಂಡಿತು.


ಯಕ್ಷಗಾನ ಗುರುಗಳಾದ ಶ್ರೀಮತಿ ಕೆ ಗೌರಿ ಅವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಲಾದ ಈ ಯಕ್ಷಗಾನ ಕಥಾನಕದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ವಿನಯ್ ಶೆಟ್ಟಿ, ಮದ್ದಳೆಯಲ್ಲಿ ರಾಜೇಶ್ ಆಚಾರ್ ಮತ್ತು ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರ್‌ ಸಹಕರಿಸಿದರು.



ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಶ್ರೀಮತಿಯರಾದ ಕೆ. ಗೌರಿ, ಆಶಾ ರಾಘವೇಂದ್ರ, ಲತಾ ವಿ, ಅನಿತಾ ರಾವ್, ಸುಮಾ ಅನಿಲ್ ಕುಮಾರ್, ಚಂದ್ರಿಕಾ ಧರ್ಮೇಂದ್ರ, ಚೈತ್ರ ರಾಜೇಶ್ ಕೋಟ, ಕುಮಾರಿಯರಾದ ಚೈತ್ರ ಭಟ್, ದೀಕ್ಷಾ ಭಟ್‌, ಸೌಜನ್ಯ ನಾವುಡ, ಧೃತಿ ಅಮ್ಮೆಂಬಳ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು.

ಯಕ್ಷಗಾನ ಗುರು ಶ್ರೀನಿವಾಸ ಸಾಸ್ತಾನ ಮತ್ತು ಸದಾನಂದ ಹೆಗಡೆ ಅವರ ಸಹಕಾರವಿತ್ತು.


ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಈ ಸಾಂಸ್ಕೃತಿಕ ಸಂಜೆಯ ಎಲ್ಲ ಕಾರ್ಯಕ್ರಮಗಳು ನಡೆದವು.

ಯಕ್ಷಗಾನದ ಪ್ರದರ್ಶನಕ್ಕೆ ಮುನ್ನ ಶ್ರೀಮತಿ ಸುಪ್ರೀತಾ ಗೌತಮ್ ಅವರಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top