ಬೆಂಗಳೂರು: ಶ್ರೀ ಬಸವೇಶ್ವರ ಪ್ರಚಾರ ಸಮಿತಿ (ರಿ), ಬೆಂಗಳೂರು ಇವರು ವಿಶ್ವಗುರು ಬಸವೇಶ್ವರರ 889ನೆ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಅಂತಾರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನಂಜನಗೂಡಿನ ಲೇಖಕಿ ಶ್ರೀಮತಿ ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ಅವರು ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಸಮಿತಿಯ ಮುಖ್ಯಸ್ಥರಾದ ಶ್ರೀಯುತ ಧ್ರುವಕುಮಾರ್ ತಿಳಿಸಿದ್ದಾರೆ.




