ಪರಿಚಯ: ಯಕ್ಷ ಪ್ರತಿಭಾಪೂರ್ಣೆ ಶ್ರೀಮತಿ ಚಂದ್ರಿಕಾ

Upayuktha
0

ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ  ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಮಹಿಳಾ ಕಲಾವಿದೆ ಶ್ರೀಮತಿ ಚಂದ್ರಿಕಾ.


ಉಡುಪಿ ಜಿಲ್ಲೆಯ ಪೆರ್ಡೂರಿನ ಶ್ರೀಯುತ ಹಯವದನ ಭಟ್ ಹಾಗೂ ಶ್ರೀಮತಿ ಸುಮ ಇವರ ಮಗಳಾಗಿ 30.06.1979 ರಂದು ಜನನ. ಡಿಗ್ರಿ ವರೆಗೆ ವಿದ್ಯಾಭ್ಯಾಸ. ಶ್ರೀನಿವಾಸ್ ಸಾಸ್ತಾನ ಯಕ್ಷಗಾನ ಗುರುಗಳು. ಚಿಕ್ಕದಿಂದ ಯಕ್ಷಗಾನ ವೀಕ್ಷಣೆ ಹೋಗುತ್ತಿದ್ದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಚಂದ್ರಿಕಾ ಹೇಳುತ್ತಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಭಾಗವತರು, ಹಿರಿಯ ಕಲಾವಿದರು, ಸಹ ಕಲಾವಿದರಲ್ಲಿ ಚರ್ಚಿಸಿ ಮತ್ತು ಪಾತ್ರದ ಭಾವವನ್ನು ಮನಸಿನಲ್ಲಿ ತುಂಬಿಕೊಳುತ್ತೇನೆ.


ಸುಧನ್ವ ಕಾಳಗ, ಅಭಿಮನ್ಯು ಕಾಳಗ, ಕಂಸ ವಧೆ ನೆಚ್ಚಿನ ಪ್ರಸಂಗಗಳು.

ಪ್ರಭಾವತಿ, ಅಭಿಮನ್ಯು, ಕಂಸ ಇವರ ನೆಚ್ಚಿನ ವೇಷಗಳು.



ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನಕ್ಕೆ ಈಗ ವಿದ್ಯಾವಂತರು ತುಂಬಾ ಬರುತ್ತಿದ್ದಾರೆ. ಮಹಿಳಾ ಕಲಾವಿದರಿಗೂ ಪ್ರೋತ್ಸಾಹ ಸಿಗುತ್ತಿದೆ. ಹಿಂದೆ ಅಭಿನಯಕ್ಕೆ ಪ್ರಾಶಸ್ತ್ಯವಿತ್ತು, ಈಗ ಕುಣಿತಕ್ಕೆ ಇದೆ.


ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಕಾಲಮಿತಿಗೆ ಈಗಿನ ಪ್ರೇಕ್ಷಕರ ಪ್ರಾಶಸ್ತ್ಯವಿದೆ. ಪೌರಾಣಿಕ ಪ್ರಸಂಗವನ್ನು ಬೆರಳೆಣಿಕೆ ಜನ ಮಾತ್ರ ಬಯಸುತ್ತಾರೆ. ಹೊಸ ಪ್ರಸಂಗಗಳನ್ನು ಹೆಚ್ಚಾಗಿ ನೋಡಲು ಬಯಸುತ್ತಾರೆ.


ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ವಿಭಿನ್ನ ರೀತಿಯ ಪಾತ್ರ ನಿರ್ವಹಣೆ ಮಾಡಿ ಅನುಭವ ಪಡೆಯುವ ಆಸೆ. ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯನ್ನು ಕಲಿಸುವ ಆಸೆ. ಹೊರ ರಾಜ್ಯಗಳಲ್ಲಿಯೂ ಪ್ರದರ್ಶನ ನೀಡಿ ಅಲ್ಲಿಯೂ ಯಕ್ಷಗಾನದ ಆಸಕ್ತಿ ಮೂಡಿಸುವ ಯೋಚನೆ ಇದೆ. ಭಾಗವತಿಕೆಯನ್ನು ಕಲಿಯುವ ಆಸೆ.


ಎಸ್.ವ್ಯಾಸ ಯೂನಿವರ್ಸಿಟಿಯಲ್ಲಿ ಯೋಗ ತರಬೇತಿಯನ್ನು ಪಡೆದಿದ್ದಾರೆ. ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಓಟಗಾರಿಕೆಯಲ್ಲಿ ರಾಜ್ಯ ಮಟ್ಟದಲ್ಲಿ ಆಯ್ಕೆ ಆಗಿದ್ದರು. ಯಕ್ಷಗಾನ ವೀಕ್ಷಣೆ, ಸಂಗೀತ ಕೇಳುವುದು, ಯಕ್ಷಗಾನ ಅಭ್ಯಾಸ ಇವರ ಹವ್ಯಾಸಗಳು.


29.04.1999 ರಂದು ಧರ್ಮೇಂದ್ರ ಇವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top