ಎಸ್‌ಡಿಎಂ ಉಜಿರೆ: ಎನ್‌ಸಿಸಿ ವಿದ್ಯಾರ್ಥಿಗಳಿಗೆ ಸೇನೆಯಿಂದ ಒಬ್‌ಸ್ಟಿಕಲ್ಸ್‌ ತರಬೇತಿ

Upayuktha
1 minute read
0


ಉಜಿರೆ: "ನಿಮ್ಮ ಸಾಮರ್ಥ್ಯ ಅರಿತು ಇಲ್ಲಿರುವ ಒಬ್‌ಸ್ಟಿಕಲ್ಸ್‌ ಅನ್ನು ಉಪಯೋಗಿಸಿ, ಅಭ್ಯಾಸ ಮಾಡದೆ ಇದು ಬರುವುದಿಲ್ಲ ಹಾಗಂತ ಅತಿಯಾದ ಸಾಹಸ ಮಾಡಬಾರದು" ಎಂದು 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಆರ್ಮಿ ಸ್ಟಾಫ್ ಹವಲ್ದಾರ್ ರಾಮಚಂದ್ರ ಸಿಂಗ್ ಮಾಹಿತಿ ನೀಡಿದರು.


ಉಜಿರೆಯ ಶ್ರೀ.ಧ.ಮ ಕಾಲೇಜಿನ ಎನ್.ಸಿ.ಸಿ ಆರ್ಮಿ ಘಟಕದ ವತಿಯಿಂದ ಕೆಡೆಟ್‌ಗಳಿಗೆ ಒಬ್ಸ್ಟಿಕಲ್ಸ್ ತರಬೇತಿ ಹಾಗೂ ಟೆಂಟ್ ಕಟ್ಟುವ ಶಿಬಿರವನ್ನು ಇತ್ತೀಚೆಗೆ ಮಹಾವೀರ ಕಾಲೇಜು ಮೂಡಬಿದ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಅವರು ಮಾತನಾಡಿದರು.


ಆರ್ಮಿಯಲ್ಲಿ ಯಾವ ಯಾವ ತರಹದ ಅಡೆತಡೆಗಳು ಬರುತ್ತದೆ ಎಂಬುದರ ಕುರಿತು ಒಂದು ತುಣುಕನ್ನು ಎನ್.ಸಿ.ಸಿ ಯಲ್ಲಿ ಅಳವಡಿಸಲಾಗಿದೆ. ಈ ಶಿಬಿರದಲ್ಲಿ ದೈಹಿಕವಾಗಿ ಹಾಗೂ ಮಾನಸಿಕ ಏಕಾಗ್ರತೆಯಲ್ಲಿ ಎಷ್ಟು ಪ್ರವೀಣರು ಎಂದು ನೋಡಲಾಗುತ್ತದೆ.


ಕೆಡೆಟ್ಸಗಳಿಗೆ ಅಲ್ಲಿರುವ ಮಾನವ ನಿರ್ಮಿತ ಅಡೆತಡೆಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸಿ ತರಬೇತಿ ನೀಡಲಾಯಿತು. ಕೆಡೆಟ್‌ಗಳು ಆಸಕ್ತಿ, ಉತ್ಸಾಹದಿಂದ ಪಾಲ್ಗೊಂಡರು. 


ಈ ಶಿಬಿರದಲ್ಲಿ ಶ್ರೀ.ಧ.ಮ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್‌ ಭಾನುಪ್ರಕಾಶ, ಮಹಾವೀರ ಕಾಲೇಜಿನ ಎನ್‌ಸಿಸಿ ಉಸ್ತುವಾರಿ ಶಿವಪ್ರಸಾದ, 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಆರ್ಮಿ ಸ್ಟಾಫ್ ನಾಯಕ್ ಸೆಂಥಿಲ್ ಕುಮಾರ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top