ಪುತ್ತೂರು: 2022ನೇ ಸಾಲಿನಲ್ಲಿ ಕೇದ್ರ ಸರಕಾರದ ಲೋಕ ಸೇವಾ ಆಯೋಗ ನಡೆಸಿದ ಎನ್.ಡಿ.ಎ. (ನ್ಯಾಷನಲ್ ಡಿಫೆನ್ಸ್ ಅಕಾಡಮಿ) ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಪಿಜ್ಞಾನ ವಿಭಾಗದ ವಿದ್ಯಾರ್ಥಿ ತಿಯಾನಂದ್ ಎಂ ಉತ್ತೀರ್ಣರಾಗಿ, ಮುಂದಿನ ಹಂತವಾದ ದೈಹಿಕ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ, ಸರ್ವಿಸ್ ಸೆಲೆಕ್ಷನ್ ಬೋರ್ಡ್ (SSB) ನಡೆಸುವ ಮೌಖಿಕ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಈತನು ಚಿನ್ನಾಲಪಟ್ಟಿಯ ಪಿ. ಮುರುಗನ್ ಮತ್ತು ರೇಣುಕಾ ಎಂ ದಂಪತಿಗಳ ಪುತ್ರ. ರಾಷ್ಟ್ರಮಟ್ಟದಲ್ಲಿ ಈ ಸಂದರ್ಶನಕ್ಕೆ ಆಯ್ಕೆಯಾಗುವ ಕೇವಲ 900 ವಿದ್ಯಾರ್ಥಿಗಳಲ್ಲಿ ಇವರೊಬ್ಬರಾಗಿರುವುದು ಗಮನಾರ್ಹ ಅಂಶ.
ತಿಯಾನಂದ್ ಎಂ. ರವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಯಾಗಿದ್ದು, ಕಾಲೇಜಿನ ಕೋಚಿಂಗ್ ಸೆಲ್ ನಡೆಸುವ ತರಗತಿಗಳಲ್ಲಿ ತರಬೇತಿ ಪಡೆದಿದ್ದರು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸಾಮಾನ್ಯ ಅರ್ಹತಾ ಪ್ರಶ್ನೆಗಳು ಮತ್ತು ಗಣಿತಶಾಸ್ತ್ರದ ಪ್ರಶ್ನೆಗಳನ್ನು ಒಳಗೊಂಡಿತ್ತು.
ವಿದ್ಯಾರ್ಥಿಯ ಈ ವಿಶೇಷ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ