ಮುಂಬಯಿ: ಇಲ್ಲಿಯ ಸಯಾನ್ ಗೋಕುಲದ ಗೋಪಾಲಕೃಷ್ಣ ದೇವರ ಪುನಃ ಪ್ರತಿಷ್ಠೆ- ಬ್ರಹ್ಮಕಲಶಾಭಿಷೇಕ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಷಣ್ಮುಖಾನಂದ ಸಭಾಗೃಹದಲ್ಲಿ ನಡೆಯಿತು.
ಬೃಹನ್ಮುಂಬಯಿ ಗೋಕುಲ ಪುನರುತ್ಥಾನ ಸ್ಮರಣೆಯ ಸಂಪುಟ "ಶ್ರೀಕೃಷ್ಣ ದರ್ಶನ"ವನ್ನು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ಅವರು 'ಶ್ರೀಕೃಷ್ಣ ದರ್ಶನ'ದ ಪ್ರಧಾನ ಸಂಪಾದಕರು.
ಕೇಂದ್ರ ವಿತ್ಥ ಖಾತೆ ರಾಜ್ಯ ಸಚಿವ ಭಾಗವತ್ ಕಿಶನ್ ರಾವ್ ಕರಾಡ್, ಲೋಕಸಭಾ ಸದಸ್ಯ ರಾಹುಲ್ ಆರ್.ಶಿವಾಲೆ, ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್, ಮಧುಸೂದನ ಅಗರ್ ವಾಲ್, ಐಕಳ ಹರೀಶ್ ಶೆಟ್ಟಿ, ಸುಧೀರ್ ಶೆಟ್ಟಿ, ಆನಂದ ಪೇಜಾವರ, ಬಿ ಎಸ್ ಕೆ.ಬಿ. (ಗೋಕುಲ) ಅಧ್ಯಕ್ಷ ಡಾ. ಸುರೇಶ ರಾವ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ