ಸಂಪನ್ನಮ್- ಆಳ್ವಾಸ್ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

Upayuktha
0

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ 2017-18 ರ ಬ್ಯಾಚಿನ 100 ಜನ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ -ಸಂಪನ್ನಮ್ ಗುರುವಾರ ಡಾ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. 


ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ್ ಆಳ್ವ,  ಆಯುರ್ವೇದ ವೈದ್ಯ ಪದ್ದತಿಯನ್ನು ವೈದ್ಯಶಾಸ್ತ್ರದ ತಾಯಿಯೆಂದು ಭಾವಿಸಲಾಗಿದೆ. ಆ ಹಿನ್ನಲೆಯಲ್ಲಿ ಈ ವೈದ್ಯ ಪದ್ದತಿಯನ್ನು ಅನುಸರಿಸುವ ನೀವೆಲ್ಲರೂ ಹೆಮ್ಮೆಪಡಬೇಕು ಎಂದರು.


ವೈದ್ಯಕೀಯ ಅಂತಃಪ್ರಜೆ, ತನ್ನ ವೃತ್ತಿ ಹಾಗೂ ದೇವರ ಮೇಲೆ ನಂಬಿಕೆ, ಸಹಾನುಭೂತಿ, ನಮ್ರತೆ, ದೃಢನಿಷ್ಠೆಯಂತಹ ಒಳ್ಳೆಯ ಗುಣಗಳನ್ನು ಯುವ ವೈದ್ಯರು ತಮ್ಮ ವೃತ್ತಿಯನ್ನು ಪ್ರಾರಂಭಿಸುವ ಮೊದಲು ಆಳವಡಿಸಿಕೊಳ್ಳಬೇಕು. ಅಧ್ಯಯನಶೀಲತೆಯನ್ನು ಎಂದೂ ನಿಲ್ಲಿಸದೆ, ಪ್ರಾಚೀನ ಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಹೊಸ ವಿಷಯಗಳನ್ನು ಕಲಿಯಲು ಸದಾ ಸಿದ್ದರಿದ್ದು, ಸಮಕಾಲೀನ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗಬೇಕು. ಹಿಮಾಲಯ ಡ್ರಗ್ ಕಂಪೆನಿ ಪಾಯೋಜಿತ ನಗದು ಬಹುಮಾನ ಹಾಗೂ ಪುರಸ್ಕಾರವನ್ನು ಈ ಸಂಧರ್ಭದಲ್ಲಿ ನೀಡಿ ಗೌರವಿಸಲಾಯಿತು.


2015-16ನೇ ಬ್ಯಾಚ್‍ನ ಡಾ ದೀಪ್ತಿ ರಾವ್ ಹಾಗೂ ಡಾ ಪವಿತ್ತಾ ಪೈ ರವರಿಗೆ ಜೀವಕ ಹಾಗೂ ಆಯುರ್‍ವಿಷಾರಧ ಪುರಸ್ಕಾರದೊಂದಿಗೆ ಕ್ರಮವಾಗಿ ರೂ 15000 ಹಾಗೂ ರೂ 10000 ಸಾವಿರ ನಗದು ಬಹುಮಾನ ನೀಡಲಾಯಿತು. 2016-17ನೇ ಬ್ಯಾಚ್‍ನ ಡಾ ಸಾಯಿ ಚಿನ್ಮಯಿ ಹಾಗೂ ಡಾ ಪೂಜಾ ಬಿ.ಜಿ.ಯವರಿಗೆ ಜೀವಕ ಹಾಗೂ ಆಯುರ್‍ವಿಷಾರಧ ಪುರಸ್ಕಾರದೊಂದಿಗೆ ನಗದು ಬಹುಮಾನ ನೀಡಲಾಯಿತು.


ಡಾ ಸೀತಾಲಕ್ಷ್ಮಿ ಪಿ ಮೆಮೋರಿಯಲ್ ಎಂಡೋಮೆಂಟ್ ಆ್ಯಂಡ್ ಕ್ಯಾಶ್ ಆವರ್ಡ್‍ನ್ನು 2021-22ರ ಸಾಲಿನ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಷಯದಲ್ಲಿ ಕಾಲೇಜಿಗೆ ಪ್ರಥಮ ಬಂದ ಅಪರ್ಣಾ ಸುನೀಲ್ ಕುಮಾರ ಹಾಗೂ ವಿಶ್ಮಿತಾ ಪಿ ಶೆಟ್ಟಿ ಯವರಿಗೆ ನಗದು ಬಹುಮಾನ ರೂ 5000 ನೀಡಿ ಗೌರವಿಸಲಾಯಿತು.  

ಕಾಲೇಜಿನ ಕಿರಿಯ ವಿದ್ಯಾರ್ಥಿಗಳಿಂದ ಲಕ್ಷ್ಯ 2022 ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.  


ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ ಸಜಿತ್ ಎಂ, ಯುಜಿ ವಿಭಾಗದ ಡೀನ್ ಡಾ ಪ್ರಶಾಂತ ಜೈನ್, ಪಿಜಿ ವಿಭಾಗದ ಡೀನ್ ಡಾ ರವಿಪ್ರಸಾದ ಹೆಗ್ಡೆ, ಸಹಾಯಕ ಪ್ರಾಧ್ಯಪಕಿ ಡಾ ನಿಕೆಲ್, ಹಿಮಾಲಯ ಡ್ರಗ್ ಕಂಪೆನಿಯ ಫಾರ್ಮಾಸಿಟಿಕಲ್ ವಿಭಾಗದ ವೈಜ್ಞಾನಿಕ ಸೇವೆಗಳ ಮ್ಯಾನೇಜರ್ ಡಾ ಮೊಹಮ್ಮದ್ ಉಸಿನಿ ಉಪಸ್ಥಿತರಿದ್ದರು. ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಸುಶೀಲ್ ಶೆಟ್ಟಿ,  ಸಹ ಪ್ರಾಧ್ಯಪಕಿ ಡಾ ರೋಹಿಣಿ ಪುರೋಹಿತ್ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top