ರಾಮಸೇತು ವೈಜ್ಞಾನಿಕ ಸತ್ಯ

Upayuktha
0

ರಾಮಲೀಲಾ ಮೈದಾನ (ಮೂರೂರು): ರಾಮಸೇತು ವೈಜ್ಞಾನಿಕ ಸತ್ಯ. ಇದು ಕೇವಲ ಕಾಲ್ಪನಿಕವಲ್ಲ. ವಾಲ್ಮೀಕಿ ರಾಮಾಯಣದಲ್ಲಿ ವರ್ಣನೆಯಾದ ಅದ್ಭುತ ಸಾಗರಸೇತು ಆಧುನಿಕ ವಿಜ್ಞಾನದ ವಿಶ್ಲೇಷಣೆಯಲ್ಲೂ ಅಂತೆಯೇ ಇದೆ ಎಂದು ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.


ಮೂರೂರು ರಾಮಲೀಲಾ ಮೈದಾನದಲ್ಲಿ ನಡೆದ ರಾಮಕಥೆ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, "ತಳದಲ್ಲಿ ಮರ, ಎರಡನೇ ಸ್ತರದಲ್ಲಿ ಬಂಡೆ ಮತ್ತು ಮೇಲೆ ಮರಳಿನಿಂದ ಸಾಗರಸೇತು ನಿರ್ಮಾಣವಾಗಿದೆ ಎಂಬ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ. ವಿಶ್ವದ ಏಕೈಕ ಸಾಗರಸೇತುವನ್ನು ವಿಜ್ಞಾನದ ವಿಶ್ಲೇಷಣೆಗೆ ಒಳಪಡಿಸಿದಾಗ ಕೂಡಾ ಇಂದೇ ಅಂಶಗಳು ದೃಢಪಟ್ಟಿವೆ" ಎಂದು ಪ್ರತಿಪಾದಿಸಿದರು.


ರಾಮಾಯಣ ವಿವರಣೆ ಪ್ರಕಾರ ಸಾಗರ ಸೇತು ನೂರು ಯೋಜನ ಉದ್ದ ಹತ್ತು ಯೋಜನ ಅಗಲ ಇದೆ. ಅಂದರೆ ಇದು 35 ಕಿಲೋಮೀಟರ್ ಉದ್ದ. 3.5 ಕಿಲೋಮೀಟರ್ ಅಗಲ ಇದೆ. ವೈಜ್ಞಾನಿಕ ಪರಿಭಾಷೆಗೆ ತಕ್ಕಂತೆ ಅನುಗುಣವಾಗಿ ಇದೆ. ಆಧುನಿಕ ವಿಜ್ಞಾನ ಕೂಡಾ ಸೇತುವೆಯ ಪರಿಮಾಣ, ಉದ್ದ- ಅಗಲದ ಅನುಪಾತ ಇದೇ ಎನ್ನುವುದನ್ನು ದೃಢಪಡಿಸುತ್ತದೆ ಎಂದರು.


ರಾಮಾಯಣದಲ್ಲಿ ಇರುವ ವಿವರಣೆಯಂತೆ ಅದೇ ಜಾತಿಯ ವೃಕ್ಷಗಳನ್ನೂ ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ ಎನ್ನುವುದನ್ನು ವಿಜ್ಞಾನಿಗಳು ಕೂಡಾ ಒಪ್ಪಿದ್ದಾರೆ. ನಾಸಾ ಚಿತ್ರ ಕೂಡಾ ಇದನ್ನು ದೃಢಪಡಿಸಿದೆ. ಅನೇಕ ಚೌಕಾಕಾರದ ನಿರ್ಮಾಣಗಳಿದ್ದು, ಇವು ಪ್ರಾಕೃತಿಕವಾಗಿ ನಿರ್ಮಾಣವಾಗಲು ಸಾಧ್ಯವಿಲ್ಲ. ಇದು ನೆಲ ಸೇತು. ರಾಮಸೇತು. ಆಡಮ್ಸ್ ಬ್ರಿಡ್ಜ್ ಅಲ್ಲ; ಅಥವಾ ಅಲಂ ಸೇತು ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top