|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರೇರಣಾ ಪ್ರವಾಹ- ಶಿಕ್ಷಕರ ತರಬೇತಿ ಶಿಬಿರ

ಪ್ರೇರಣಾ ಪ್ರವಾಹ- ಶಿಕ್ಷಕರ ತರಬೇತಿ ಶಿಬಿರ



ಮಂಗಳೂರು: ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಮಂಗಳೂರು ಇದರ ವತಿಯಿಂದ ಶಿಕ್ಷಕರ ತರಬೇತಿ ಶಿಬಿರವನ್ನು ಇಂದು (ಮೇ 9) ಆಯೋಜಿಸಲಾಗಿತ್ತು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಚಕ್ರವರ್ತಿ ಸೂಲಿಬೆಲೆ ಇವರು ಸುಮಾರು ಮುನ್ನೂರಕ್ಕೂ ಹೆಚ್ಚು ಶಿಕ್ಷಕರಿಗೆ ಈ ವಿಶೇಷ ಕಾರ್ಯಗಾರವನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಿದರು.


ವ್ಯಕ್ತಿ ನಿರ್ಮಾಣದಲ್ಲಿ ಶಿಕ್ಷಕನೊಬ್ಬನ ಆದ್ಯ ಕರ್ತವ್ಯವನ್ನು ವಿವರಿಸುತ್ತಾ ಶಿಕ್ಷಣದ ಪ್ರಕ್ರಿಯೆಯು ವಿದ್ಯಾರ್ಥಿಗಳ ಯೋಚನಾ ಸಾಮರ್ಥ್ಯವನ್ನು ದಹಿಸುವುದರೊಂದಿಗೆ ಸ್ಫೂರ್ತಿ ನೀಡುವಂತಹ ಪ್ರೇರಣಾ ಪ್ರಕ್ರಿಯೆಯು ಆತನಿಂದ ಆಗಬೇಕಿದೆ ಎಂದು ಮನೋಜ್ಞವಾಗಿ ವಿವರಿಸಿದರು. ಮಗುವಿನ ಆಲೋಚನೆಗೆ ಪ್ರೇರಣೆ ನೀಡಬೇಕು. ಮಗುವಿನ ನಂಬಿಕೆಗೆ ನ್ಯಾಯ ಒದಗಿಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದು ನುಡಿದರು.


ಶಿಕ್ಷಕರ ಜವಾಬ್ದಾರಿಯನ್ನು ತಿಳಿಸುತ್ತಾ ವೈದ್ಯನೊಬ್ಬ ಒಂದು ಕ್ಷಣ ಮೈ ಮರೆತರೆ ಒಂದು ಜೀವ ಹಾಳಾಗುವುದು ಆದರೆ ಶಿಕ್ಷಕನೊಬ್ಬ ಆ ಒಂದು ಕ್ಷಣ ಮೈ ಮರೆತರೆ ಒಂದು ಪೀಳಿಗೆಯೇ ಹಾಳಾಗುವುದು ಎಂದು ತರ್ಕಬದ್ಧವಾಗಿ ನುಡಿದರು. ಶಿಕ್ಷಕರು ಮಕ್ಕಳನ್ನು ತಾಯಿಯಂತೆ ಪ್ರೀತಿಸಲು ಸಾಧ್ಯವಾಗಬೇಕು. ಮಾತೃತ್ವ ಭಾವನೆಯಿಂದ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದು ಎಂದು ಈ ಸಂದರ್ಭದಲ್ಲಿ ನುಡಿದರು.


ಉತ್ತಮ ಶಿಕ್ಷಕನಿಗೆ ಇರಬೇಕಾದ ಗುಣಲಕ್ಷಣಗಳ ಬಗ್ಗೆ ತಿಳಿಸುತ್ತಾ ಶಾಸ್ತ್ರ ತಿಳಿಸುವಂತೆ ಪುಟ್ಟ ಮಗುವೊಂದು ನಡೆಯುವಾಗ ತಾಯಿ ಮಗುವನ್ನು ಯಾವ ರೀತಿ ಕೈಹಿಡಿದು ನಡೆಸುವಳೋ ಅದೇ ರೀತಿ ಮಗುವಿನ ಕೈ ಹಿಡಿದು ನಡೆಸುವಷ್ಟು ಆಳಕ್ಕೆ ಇಳಿಯಬೇಕು. ಮಗುವನ್ನು ಮುನ್ನಡೆಸುವಲ್ಲಿ ಆಕೆ ಎಷ್ಟು ಎತ್ತರವಿರಬೇಕು ಮತ್ತು ಎಷ್ಟು ವೇಗವನ್ನು ಬಳಸಿಕೊಳ್ಳಬೇಕು ಎಂಬುವುದರ ಅರಿವು ಮೂಡಿದಾಗ ಮಾತ್ರ ಆ ಮಗುವನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಬಲ್ಲಳು ಎಂದು ತಿಳಿಸಿದರು.


ಕೊನೆಯಲ್ಲಿ ಶಿಕ್ಷಕರೊಡನೆ ಮುಕ್ತ ಸಂವಾದ ನಡೆಸಿ ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳ ಬಗ್ಗೆ ಅವಲೋಕನ ನಡೆಸಲಾಯಿತು. ಶಿಕ್ಷಕನೊಬ್ಬನ ಡೈರಿ ಮುಂದೊಮ್ಮೆ ಡೈಜೆಸ್ಟ್ ಆಗಿ ಬಳಸುವಂತಿರಬೇಕು ಎಂದು ನುಡಿಯುತ್ತಾ ಶಿಕ್ಷಕರು ನೀಡುವ ಶಿಕ್ಷಣದಿಂದಾಗಿ ಅವರನ್ನು ಬೆಳಕು ನೀಡುವ ಗುರುವಾಗಿ ಲೋಕವೆಲ್ಲ ಗುರುತಿಸುವಂತಿರಬೇಕು ಎಂದು ನುಡಿದರು.


ಈ ತರಬೇತಿ ಕಾರ್ಯಗಾರದಲ್ಲಿ ವಿಶೇಷ ಅತಿಥಿಗಳಾಗಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಡಳಿತ ಮಂಡಳಿಯ ಸದಸ್ಯರಾದ ನರೇಶ್ ಶೆಣೈ, ಕೆನರಾ ವಿದ್ಯಾಸಂಸ್ಥೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕೆನರಾ ಹೈಸ್ಕೂಲ್ ಸಿಬಿಎಸ್ ಇ ಇಲ್ಲಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಆರ್ ಶೆಣೈಯವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post