||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಬೆನ್ನು ಕೆರೆಯುತ್ತಿದ್ದಾರೆ ಪರಸ್ಪರ

ಕವನ: ಬೆನ್ನು ಕೆರೆಯುತ್ತಿದ್ದಾರೆ ಪರಸ್ಪರತಿರುಗಾ ಮುರುಗಾ ನಿಂತಿದ್ದಾರೆ ಇಬ್ಬರೂ

ಇವನ ಬೆನ್ನನ್ನು ಅವನು

ಅವನ ಬೆನ್ನನ್ನು ಇವನು

ಪರಸ್ಪರ


ಆಹಾ! ಎಂತಹ ಹೃದಯಸ್ಪರ್ಶಿ

ನಾಲಗೆಯ ಜಾಲ

ಚಪ್ಪರಿಕೆಯ ಸಿಹಿಲೇಪ

ಹೊಗಳಿಕೆಯ ಹೋಳಿಗೆಯನ್ನೆ

ಮತ್ತೆ ಮತ್ತೆ ಮೆಲ್ಲುವ ಚಪಲ

ಎತ್ತರದಿಂದ ಕೆಳಗೆ ಬೀಸಿ ಒಗೆವಂಥ ಭಾವ

ಮುಸುಕಲ್ಲೆ ಹಳ್ಳಕ್ಕೆ ನೂಕಿ

ಸಂಭಾವಿತರಾಗುವ ಲೋಕ

ಆಹಾ! ನೋಡುಗರಿಗೆ 

ಅರ್ಥವೇ ಇರದ ಧ್ವನಿಗಳ ಸಮೂಹ


ಕೆರೆಯುತ್ತಿದ್ದಾರೆ ಪರಸ್ಪರ ಕರಕರ

ನವೆಯೇಳುವ ಹಾಗೆ

ಮತ್ತೆ ಮತ್ತೆ

ಒದಗುತ್ತಿದೆ ಮನರಂಜನೆ ಸರಾಗ

ನಮಗೆ ನಿಮಗೆ ಬತ್ತೀಸರಾಗ


ಮುಖಾಮುಖಿ ಕುಳಿತು

ಎಲ್ಲಿ ಕಟ್ಟಬೇಕು ಎಲ್ಲಿ ಕೆತ್ತಬೇಕು

ಚಂದ ಹೇಗೆ ಹೇಗೆ ವಿನ್ಯಾಸಗೊಳಿಸಿದರೆ

ದೊರೆಯುತ್ತದೆ ಹೇಗೆ ಕೈಜೋಡಿಸಿದರೆ

ಉತ್ತಮ ಫಲಿತ ಗುಣಮಟ್ಟದಾಕಾರ

ತೀರಾ ಮುಖ್ಯ ಅಂತಿಮ ರೂಪ ಸ್ವರೂಪ


ಅದೆಲ್ಲ ಮುಖ್ಯವೆ ಅಲ್ಲ ನಮಗೆ

ಇವತ್ತಿನ ಹೊಟ್ಟೆ ತುಂಬಿದರೆ ಸಾಕು

ನಾಳೆಯ ಚಿಂತೆ ಯಾಕೆ ಬಿಡಿ

ಉಂಡವನೆ ಜಾಣ ಮಾತಿನರಮನೆಯಲ್ಲಿ

ಹೊಗಳಿಕೆಯನ್ನೆ ತೇಗುವ ಜನ ನಾವು

ಅದನ್ನೇ ಉಂಡು ಮಲಗುವೆವು

ಅದನ್ನೇ ಹಾಸಿ ಹೊದೆಯುವೆವು


ದಾರಿ ಬಿಡಿ ದಾರಿ ಬಿಡಿ

ಭೋ ಪರಾಕು ಭೋ ಪರಾಕು

ಹೊಗಳಿಕೆಯಲ್ಲೆ ನಮ್ಮ ಕಾರುಬಾರು

ಹೊಗಳಿಕೆಯೆ ನಮ್ಮ ತೇರು.

- ಡಾ. ವಸಂತಕುಮಾರ ಪೆರ್ಲ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments

Post a Comment

Post a Comment (0)

Previous Post Next Post