ನಂಜನಗೂಡು: ಇಂದು ರಾಜ್ಯ ಬಿಜೆಪಿ ಸರ್ಕಾರವಿರುವುದಕ್ಕೆ 2019ರ 13 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿ ವೈ ವಿಜಯೇಂದ್ರ ಅವರ ಪಾತ್ರವೇ ಕಾರಣ ಎಂದು ನಂಜನಗೂಡು ಶಾಸಕ ಬಿ ಹರ್ಷವರ್ಧನ್ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯನಾಗುವುದಕ್ಕಿಂತ ದೊಡ್ಡ ಪಾತ್ರವನ್ನು ವಿಜಯೇಂದ್ರ ಅವರು ಕರ್ನಾಟಕ ರಾಜಕೀಯದಲ್ಲಿ ನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಮುಂಬರುವ ಎಂಎಲ್‌ಸಿ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯೇಂದ್ರ ಅವರಿಗೆ ಅವಕಾಶ ಸಿಗದಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ಷವರ್ಧನ್, “ಮುಂದಿನ ದಿನಗಳಲ್ಲಿ ಅವರು ದೊಡ್ಡ ಪಾತ್ರವನ್ನು ನಿರ್ವಹಿಸಬೇಕಾಗಿದೆ. ವಿಧಾನ ಪರಿಷತ್ತಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಖಂಡಿತವಾಗಿಯೂ ಅವರಿಗೆ ಅವಕಾಶ ನೀಡದಿರುವುದು ನಮಗೆ ನಿರಾಶೆಯಾಗಿದೆ. ಅದೇ ಸಮಯದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾದಿ ಸುಗಮವಾಗಿದ್ದು, ವರುಣಾದಿಂದ ಕಣಕ್ಕಿಳಿಯಬೇಕು ಎಂಬುದು ನಮ್ಮ ಆಶಯ. ಅವರು ಅಭ್ಯರ್ಥಿಯಾಗುತ್ತಾರೆ ಎಂದು ಈ ಭಾಗದ ಜನರು ಕಾಯುತ್ತಿದ್ದಾರೆ'' ಎಂದು ಹರ್ಷವರ್ಧನ್ ಹೇಳಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಈ ಬೆಳವಣಿಗೆಯಿಂದ ಅವರಿಗೆ ಈಗ ಹಿನ್ನಡೆ ಆಗಿರಬಹುದು. ಆದರೆ ಅವರು ನಮ್ಮ ಭವಿಷ್ಯದ ನಾಯಕ. ಪಕ್ಷ ಅವರಿಗೆ ಅವಕಾಶ ನೀಡಲಿದೆ. ಶ್ರೀ ವಿಜಯೇಂದ್ರ ಇನ್ನೂ ಚಿಕ್ಕವರು. ನಾವು ಅವರೊಂದಿಗಿದ್ದೇವೆ. ಯುವಕರಿಗೆ ಪಕ್ಷ ಅವಕಾಶ ನೀಡಲಿದೆ ಎಂದು ಹರ್ಷವರ್ಧನ್ ಹೇಳಿದರು.