ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ (ಯುಇಐಜಿಬಿ) ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು (ಯುಟಿಪಿಸಿ), ಮಂಗಳಾ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಶನಿವಾರ ಮತ್ತು ಭಾನುವಾರ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಉದ್ಯೋಗ ಮೇಳ ಯಶಸ್ಸು ಕಂಡಿದೆ.
ಸುಮಾರು 60 ಕಂಪನಿಗಳು ಭಾಗವಹಿಸಿದ್ದ ಮೇಳದ ಆಯೋಜಕರ ಮಾಹಿತಿಯ ಅನುಸಾರ ಸುಮಾರು 1801 ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದು, 745 ಮಂದಿಗೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಜನಪ್ರಿಯ ಕಂಪನಿಗಳಲ್ಲಿ ಟೆಕ್ ಮಹೇಂದ್ರ 18 ಮಂದಿಗೆ ಉದ್ಯೋಗ ಖಾತ್ರಿಪಡಿಸಿದ್ದರೆ, ಟೀಮ್ ಲೀಸ್ ನ 54, ಹೆಚ್ಜಿಎಸ್ನ 26, ಹೆಕ್ಸಾವೇರ್ ಟೆಕ್ನಾಲಜೀಸ್ ನ 8 ಮಂದಿಗೆ ಸೇರಿದಂತೆ ಸಾಕಷ್ಟು ಮಂದಿಗೆ ಉದ್ಯೋಗ ದೊರೆಯಲಿದೆ.
ಇನ್ನೂ ಕೆಲವು ಉದ್ಯೋಗದಾತ ಕಂಪನಿಗಳಿಗೆ ಉದ್ಯೋಗಾಕಾಂಕ್ಷಿಗಳ ಅಗತ್ಯತೆಯಿದ್ದು ವಿಶ್ವವಿದ್ಯಾನಿಲಯದ ಯುಇಐಜಿಬಿ ಹಾಗೂ ಯುಟಿಪಿಸಿಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಯುಇಐಜಿಬಿ ಹಾಗೂ ಯುಟಿಪಿಸಿ ಮುಖ್ಯಸ್ಥ ಪ್ರೊ. ಕೆ ಎಸ್ ಜಯಪ್ಪ, ಕುಲಪತಿ, ಕುಲಸಚಿವರ ಅನುಮತಿಯೊಂದಿಗೆ ಡಿಸೆಂಬರ್ನಲ್ಲಿ ವಿವಿಧ ಕಾಲೇಜುಗಳ ಸಹಕಾರದೊಂದಿಗೆ ಬೃಹತ್ ಉದ್ಯೋಗ ಮೇಳ ನಡೆಸುವ ಯೋಜನೆಯಿದೆ, ಎಂದರು.
ಯುಟಿಪಿಸಿ ಯೋಜನೆ ಆಧರಿತ ಸಲಹೆಗಾರ್ತಿ ಶಾರದಾ ಹೆಚ್ ಎಸ್ ಮೇಳ ಆಯೋಜನೆಗೆ ನೆರವಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ