ಸಾಹಿತ್ಯ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತದೆ: ಡಾ. ವಸಂತಕುಮಾರ ಪೆರ್ಲ

Upayuktha
0

ಮನೆಯಂಗಳದಲ್ಲಿ ಮಾತುಕತೆ- ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ


ಮಂಗಳೂರು: ಸಾಹಿತ್ಯದ ಅಧ್ಯಯನ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತದೆ. ಮನುಷ್ಯನ ಈ ಸಂಸ್ಕರಣ ಪ್ರಕ್ರಿಯೆಯು ನಿಸರ್ಗ ಸಹಜವಾದುದಾಗಿದೆ. ನಿಸರ್ಗದ ಶಕ್ತಿಗಳನ್ನು ಅರ್ಥೈಸಿಕೊಳ್ಳುವ ಆತನನ್ನು ವೈಚಾರಿಕವಾಗಿ ಬೆಳೆಸುವ ಮಾಧ್ಯಮವೇ ಸಾಹಿತ್ಯವಾಗಿದೆ ಎಂದು ಹಿರಿಯ ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕವು ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ಕುಂಜತ್ತಬೈಲಿನ ನಿವಾಸ ಭೂಮಿಗೀತದಲ್ಲಿ ಏರ್ಪ ಡಿಸಿದ ಮನೆಯಂಗಳದಲ್ಲಿ ಮಾತುಕತೆ - ಸಾಹಿತಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡುತ್ತಿದ್ದರು.


ಸಂವಾದದಲ್ಲಿ ಪ್ರೊ. ಕೃಷ್ಣಮೂರ್ತಿ ಪಿ. ಸುರತ್ಕಲ್, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ರಘು ಇಡ್ಕಿದು, ವಿಜಯಲಕ್ಷ್ಮಿ ಕಟೀಲು ಮತ್ತು ಪ್ರಶಾಂತಿ ಶೆಟ್ಟಿ ಇರುವೈಲು ಭಾಗವಹಿಸಿ ಡಾ. ಪೆರ್ಲರ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ಪರಿಚಯಿಸಿ ಸಂವಾದ ನಡೆಸಿಕೊಟ್ಟರು.  ಸಂಯೋಜಕರಾದ ಡಾ. ಸುಧಾರಾಣಿ ಅವರು ಮಾತಾಡಿ ಸಾಹಿತ್ಯದೊಂದಿಗೆ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ, ಚಾರಣ, ಸ್ಥಳನಾಮಗಳ ಅಧ್ಯಯನ ಮೊದಲಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ಡಾ. ಪೆರ್ಲರ ಕೊಡುಗೆಗಳನ್ನು ವಿವರಿಸಿದರು.  


ಸಾಹಿತ್ಯ ಪರಿಷತ್ತಿನ ಜಿಲ್ಲಾಅಧ್ಯಕ್ಷ ಡಾ. ಎಂ. ಪಿ ಶ್ರೀನಾಥ್ ಮಾತಾಡಿ ಡಾ. ಪೆರ್ಲ ಅವರು ಓರ್ವ ಕವಿಯಾಗಿ ವಿದ್ವಾಂಸರಾಗಿ ನಾಡಿಗೆ ಪರಿಚಿತರು. ಅವರ ಮುಖ್ಯ ಭೂಮಿಕೆ ಕಾವ್ಯವಾಗಿದೆ ಎಂದರಲ್ಲದೆ ಸಾಹಿತಿಗಳ ಸಾಧನೆಯನ್ನು ನಾಡಿಗೆ ಪರಿಚಯಿಸುವ ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ತು ಮುಂದುವರಿಸಿಕೊಂಡು ಬರಲಿದೆ ಎಂದರು.


ಕಾರ್ಯಕ್ರಮದಲ್ಲಿ ಡಾ. ಪೆರ್ಲ ದಂಪತಿಗಳನ್ನು ಸಾಹಿತ್ಯ ಪರಿಶಷತ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ಕೆ. ವಿ. ಸ್ವಾಗತಿಸಿ ನಿರೂಪಿಸಿದರು. ವಿದುಷಿಯರಾದ ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಪ್ರಾರ್ಥಿಸಿದರು. ಇನ್ನೋರ್ವ ಗೌರವ ಕಾರ್ಯದರ್ಶಿ ವಿನಯ ಆಚಾರ್ ವಂದಿಸಿದರು.


ಅನಂತರ ಗ್ರಾಮೀಣ ಬದುಕು ಮತ್ತು ಶಿಕ್ಷಣ ನೀತಿ ಎಂಬ ವಿಷಯದ ಕುರಿತು ಶ್ರೀಪಾದ ಕೃಷ್ಣ ರೇವಣಕರ್ ದತ್ತಿ ಉಪನ್ಯಾಸವನ್ನು ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಕೃಷ್ಣ ಭಟ್ ಬೆಳಾಲು ನಡೆಸಿಕೊಟ್ಟರು. 


ಬಳಿಕ ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಿತು. ಕವಿಗಳಾದ ಡಾ. ಮೀನಾಕ್ಷಿ ರಾಮಚಂದ್ರ, ಡಾ. ಬಾಲಕೃಷ್ಣ ಭಾರಧ್ವಾಜ್, ಚಂದ್ರಶೇಖರ ಎಸ್. ಅಂತರ, ಕೆ. ಶೈಲಾಕುಮಾರಿ, ಬದ್ರುದ್ದೀನ್ ಕೂಳೂರು, ಪ್ರಮೀಳಾ ದೀಪಕ್ ಪೆರ್ಮುದೆ ಮತ್ತು ಅಂಡಾಲ ಗಂಗಾಧರ ಶೆಟ್ಟಿ ಸ್ವರಚಿತ ಕವನಗಳನ್ನು ವಾಚಿಸಿದರು. ತಾಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ಜಿ. ಕವಿಗೋಷ್ಠಿ ನಡೆಸಿಕೊಟ್ಟರು. ಅಕ್ಷತಾ ಕುಡ್ಲ ಕನ್ನಡದ ಭಾವಗೀತೆ ಮತ್ತು ರಂಗಗೀತೆಗಳನ್ನು ಹಾಡಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ. ಪೆರ್ಲ ಅವರು ಜಿಲ್ಲೆಯಾದ್ಯಂತ ಇಂತಹ ಸಾಹಿತ್ಯ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ಎಂ. ಪಿ ಶ್ರೀನಾಥ್ ಅವರು ಮನೆಮನೆಗೆ ಮತ್ತು ಪ್ರತಿ ಬಡಾವಣೆಗೆ ಸಾಹಿತ್ಯದ ತೇರನ್ನು ಒಯ್ಯುವುದು ನಮ್ಮ ಧ್ಯೇಯ ಎಂದರು.  ಕಾರ್ಯದರ್ಶಿ ವಿನಯ ಆಚಾರ್ ವಂದಿಸಿದರು.

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top