|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಸುಜ್ಞಾನ ಕಲ್ಪತರು

ಕವನ: ಸುಜ್ಞಾನ ಕಲ್ಪತರುಅದ್ವೈತ ಸಿದ್ಧಾಂತ ಸಾರಿದರು ಶಂಕರರು

ಭಾರತದ ಎಲ್ಲಕಡೆ ಸಂಚರಿಸುತ|

ಸದ್ವಿದ್ಯೆ ಸಾಧಕರು ಸುಜ್ಞಾನ ಕಲ್ಪತರು

ಆತ್ರೇಯ ಗೋತ್ರಜರು ಶಿವಗುರುಸುತ||


ವಿಭವಸಂವತ್ಸರದೆ ಜನಿಸಿದರು ಗುರುವರ್ಯ

ಆರ್ಯಾಂಬೆ ಗರ್ಭಸಂಜಾತರಿವರು|

ಪ್ರಭೆಯುತುಂಬಿದ ಮೂರ್ತಿ ಅಧ್ಯಾತ್ಮ ಚಿಂತಕರು

ಬಾಲ್ಯದಲೆ ಸಂನ್ಯಾಸ ಹೊಂದಿದವರು||


ಗುರುವು ಗೋವಿಂದಭಗವತ್ಪಾದರನು ಕಂಡು

ಶಿಷ್ಯತ್ವ ಸ್ವೀಕರಿಸಿ ಕಲಿತರಿವರು|

ಪರಮವೇದದ ಸಾರ ಲೋಕಕ್ಕೆ ತಿಳಿಸಿದರು

ಯೋಗ, ವೇದಾಂತಕ್ಕೆ ಶರಣಾದರು||


ಬಹುಸಂಖ್ಯೆ ಅನುಯಾಯಿಗಳ ಪಡೆದ ಶಂಕರರು

ಕೀರ್ತಿಯನು ಗಳಿಸುತ್ತ ಗುರುವಾದರು|

ಮಹನೀಯ ಶ್ರೇಷ್ಠಗುರು ಬ್ರಹ್ಮಸೂತ್ರಕೆ ಭಾಷ್ಯ

ಬರೆದವರು ಅತ್ಯಂತ ಪ್ರಖ್ಯಾತರು||


ಮಂಡನಾಮಿಶ್ರರನು, ಶಾಸ್ತ್ರವೇತ್ತರ ಜಯಿಸಿ

ಸರ್ವಜ್ಞ ಪೀಠವನು ಏರಿದವರು|

ದಂಡವನು ಹಿಡಿಯುತ್ತ ಶಿಷ್ಯರಿಗೆ ಬೋಧಿಸುತ

ಅಧ್ಯಾತ್ಮ ತತ್ತ್ವವನು ಸಾರಿದವರು||


ನನ್ನೊಳಿಹ ಆತ್ಮವೇ ಪರಮಾತ್ಮ ಎಂದೆನುತ

ಅದ್ವೈತ ಸಾರಾಂಶ ಅರುಹಿದವರು|

ಉನ್ನತರು ಆಚಾರ್ಯ, ತಾತ್ತ್ವಿಕದ ನೆಲೆಗಟ್ಟು

ಒದಗಿಸುತ ದರ್ಶನವ ತೋರಿದವರು||


(ಪಂಚಮಾತ್ರಾಗಣ ಛಂದಸ್ಸು)

ಅಶ್ವತ್ಥನಾರಾಯಣ, ಮೈಸೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post