ಮೇ 27ರಂದು ಖ್ಯಾತ ಸ್ಯಾಕ್ಸೋಫೋನ್ ವಾದಕ ಡಾ. ಮಚ್ಚೇಂದ್ರನಾಥ್ ಅವರ ಪ್ರಥಮ ಸಂಸ್ಮರಣಾ ಕಾರ್ಯಕ್ರಮ

Upayuktha
0


ಮಂಗಳೂರು: ಅಂತಾರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕ ಡಾ. ಮಚ್ಚೇಂದ್ರನಾಥ್ ಮಂಗಳಾದೇವಿ ಅವರ ಪ್ರಥಮ ಸಂಸ್ಮರಣಾ ಕಾರ್ಯಕ್ರಮ ಹಾಗೂ ಅವರ ಶಿಷ್ಯವೃಂದದಿಂದ ಸ್ಯಾಕ್ಸೋಫೋನ್ ಗಾನ ನಮನ ಕಾರ್ಯ ಕ್ರಮ ಶ್ರೀ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಮೇ 27ರಂದು ಸಂಜೆ 5.30 ಗಂಟೆಗೆ ನಡೆಯಲಿದೆ.


ಸಂಸ್ಮರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ. ರಮಾನಾಥ ಹೆಗ್ಡೆ, ಮಾಜಿ ಮೇಯರ್ ಹರಿನಾಥ ಜೋಗಿ, ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕದ್ರಿ ದೇವಸ್ಥಾನದ ಮೊಕ್ತೇಸರರಾದ ಎಚ್. ಕೆ ಪುರುಷೋತ್ತಮ್ ಭಾಗವಹಿಸಲಿದ್ದಾರೆ.


ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಮಾಡುತ್ತಾ, ತನ್ನ ಅಪ್ಪಟ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮಟ್ಟದ ಸ್ಯಾಕ್ಸೋಫೋನ್ ಕಲಾವಿದರಾಗಿ ಮಿಂಚಿದ್ದ ಮಚ್ಚೇಂದ್ರನಾಥ ಅವರು ವರ್ಷದ ಹಿಂದೆ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ  ಅವರ ಶಿಷ್ಯರು ಅವರ ಸ್ಮರಣಾರ್ಥ ಗಾನ ನಮನ ಸಲ್ಲಿಸಲಿದ್ದಾರೆ.


ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಸಮಿತಿ, ಶ್ರೀ ಮಚ್ಚೇಂದ್ರನಾಥ್ ಅವರ ಶಿಷ್ಯವೃಂದ ಹಾಗೂ ಅವರ ಮಕ್ಕಳಾದ ಲಕ್ಷ್ಮೀ ಚರಣ್ ಮತ್ತು ಶ್ರೀಮತಿ ಸಿಂಧೂ ಭೈರವಿ ಅವರು ಈ ಕಾರ್ಯ ಕ್ರಮವನ್ನು ಆಯೋಜಿಸಿದ್ದಾರೆ.


ಡಾ. ಮಚ್ಚೇಂದ್ರನಾಥ್ ಅವರ ಪ್ರಥಮ ಸಂಸ್ಮರಣೆ ಪ್ರಯುಕ್ತ ಮೇ 27ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top