ಆಳ್ವಾಸ್ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

Upayuktha
0

ಮೂಡುಬಿದಿರೆ: ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಮತ್ತು ಆಳ್ವಾಸ್ ಇನ್‍ಸ್ಟಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸ್‍ನ ಸಂಯೋಜನೆಯಲ್ಲಿ ಆಳ್ವಾಸ್ ಸಂಸ್ಥೆಯ ವೈದ್ಯಕೀಯ ಹಾಗೂ ಅರೆವೈದ್ಯಕೀಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಅಡ್ಯಂತಾಯ, "ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಮುಂದಿನ ಭವಿಷ್ಯದ ಪ್ರಯತ್ನಗಳಲ್ಲಿ ಗೆಲ್ಲುವ ಉತ್ಸಾಹವವನ್ನು ಹುಟ್ಟುಹಾಕುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು ಹಾಗೂ ಗೆಲ್ಲುವ ಸ್ಫೂರ್ತಿ ಹೆಚ್ಚುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಎಂ ಮೋಹನ್ ಆಳ್ವ, ಆಳ್ವಾಸ್‍ನ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಆಳ್ವಾಸ್ ಸಂಸ್ಥೆಯು ದೇಶದಲ್ಲಿಯೇ ಕ್ರೀಡೆಗೆ ಅತೀ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿದೆ. ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವರು ತಮ್ಮ ಕಾರ್ಯ ಬದ್ಧತೆಯನ್ನು ಮಕ್ಕಳಾದ ವಿವೇಕ್ ಹಾಗೂ ವಿನಯ್ ಮೂಲಕವೂ ಬೆಳೆಸುತ್ತಿದ್ದಾರೆ.

- ಅಶೋಕ್ ಅಡ್ಯಂತಾಯ


ಮೇಘನಾ ಆರ್ ನಾಯಕ್ ಸ್ವಾಗತಿಸಿ ಉಪನ್ಯಾಸಕಿ ಶೈಲಾ ಮೆಂಡೀಸ್ ವಂದಿಸಿದರು.


ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ, ಕ್ರೀಡಾಕೂಟಗಳಲ್ಲಿ ನಮ್ಮ ತಂಡದ ಸಾಮರ್ಥ್ಯ, ಏಕತೆಯನ್ನು ಪ್ರದರ್ಶಿಸಲು ಸಾಧ್ಯ. ತಂಡದಲ್ಲಿ ಒಗ್ಗಟ್ಟು ಇದ್ದಾಗ ಮಾತ್ರ ಸಾಧಿಸಲು ಸಾಧ್ಯ. ಹಾಗೆಯೇ ನಮ್ಮಲ್ಲಿರುವ ಒಗ್ಗಟ್ಟು ಮುರಿದು ಬಿದ್ದಾಗ ದುರ್ಬಲರಾಗುತ್ತೇವೆ ಎಂದರು.


ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ನಸಿರ್ಂಗ್ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡವು. ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ಫಿಸಿಯೋಥೆರಫಿ ಕಾಲೇಜು ಗೆದ್ದುಕೊಂಡಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top