ಬೆಂಗಳೂರು: ಇನ್ನು ಮುಂದೆ ವನ್ಯಜೀವಿಗಳ ಮೃತದೇಹಗಳನ್ನು ಸುಡುವಂತಿಲ್ಲ, ಹಾಗೆಯೇ ಹೂಳುವಂತೆಯೂ ಇಲ್ಲ. ವನ್ಯಜೀವಿಗಳ ಮೃತದೇಹಗಳನ್ನು ಕೊಳೆಯಲು ಬಿಟ್ಟು ಇತರ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿಸಬೇಕು. ಏಕೆಂದರೆ, ವನ್ಯಪ್ರಾಣಿಗಳ ಮೃತದೇಹಗಳು ಕೊಳೆತ ನಂತರ ಪೋಷಕಾಂಶಗಳಿಂದ ಸಮೃದ್ಧವಾಗುತ್ತವೆ.
ಹೀಗೆಂದು ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ವನ್ಯಜೀವಿ ತಜ್ಞ ಡಾ| ಸಂಜಯ್ ಗುಬ್ಬಿ ಅವರ ಮನವಿಯಂತೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಈ ಮಾರ್ಗಸೂಚಿಗಳು ರಾಷ್ಟ್ರೀಯ ಪ್ರಾಣಿಯಾದ ಹುಲಿಗೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ