ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 12 ದಿನಗಳ 'ಯುರೇಕಾ -2022' ರಾಜ್ಯ ಮಟ್ಟದ ವಿಜ್ಞಾನ ಶಿಬಿರ

Upayuktha
0

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ ವಿಜ್ಞಾನ ವಿಭಾಗ ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರವನ್ನು ದೀಪ ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಹಾಗೂ ಸಣ್ಣ ಪ್ರಯೋಗದ ಮೂಲಕ ಪ್ರಾಯೋಗಿಕವಾಗಿ ಉದ್ಘಾಟಿಸಲಾಯಿತು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣಭಟ್ ಇವರು ಕಾರ್ಯಕ್ರಮ ಉದ್ಘಾಟಿಸಿ, ಜೀವನವೆಂಬುದು ದೊಡ್ಡ ಪ್ರಯಾಣ ಅದರಲ್ಲೂ ಪಿಯುಸಿ ಪ್ರಮುಖವಾದ ಘಟ್ಟ. ನಾವು ಮುಂದೆ ಜೀವನದಲ್ಲಿ ಏನಾಗಬೇಕೋ ಅದನ್ನು ಈ ಘಟ್ಟದಲ್ಲಿ ನಿರ್ಧರಿಸಿ, ಅದರಲ್ಲಿ ಪರಿಪೂರ್ಣರಾಗಲು ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯುರೇಕಾ -12 ದಿನಗಳ ಶಿಬಿರ ತುಂಬಾ ಸಹಕಾರಿ ಹಾಗೂ ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆದುಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ. ಪಿ ಇವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಮುಂದಿನ ತಮ್ಮ ಜೀವನ ಅಸ್ಥಿತ್ವಕ್ಕಾಗಿಯೋ ಅಥವಾ ವ್ಯಕ್ತಿತ್ವಕ್ಕಾಗಿಯೋ ಎಂದು ನಿರ್ಣಯ ಮಾಡುವ ಸಮಯ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳ ಜೊತೆಗೆ ಗೊಂದಲಗಳಿರುತ್ತವೆ. ಈ ಎಲ್ಲ ಗೊಂದಲಗಳಿಗೆ 12 ದಿನಗಳ  ಈ ಶಿಬಿರದಲ್ಲಿ ಪರಿಹಾರ ಸಿಗಲಿದೆ ಎಂದರು.


ವಿವೇಕಯುಕ್ತ ಜ್ಞಾನವನ್ನು ಒದಗಿಸುವುದೇ ವಿವೇಕಾನಂದ ವಿದ್ಯಾಸಂಸ್ಥೆಯ ಗುರಿ. ಪ್ರಧಾನ ಮಂತ್ರಿಯವರ ಮಾತಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಅವನಾಗಬೇಕು ಇವನಾಗಬೇಕು ಎಂದು ಯೋಚಿಸದೆ ನಾನೇನಾಗಬೇಕು ಅದಕ್ಕಾಗಿ ನಾನು ಏನು ಮಾಡಬೇಕೆಂದು ಯೋಚಿಸಬೇಕು ಆಗ ಮಾತ್ರ ತನ್ನ ವ್ಯಕ್ತಿತ್ವನ್ನು ಸಮಾಜದಲ್ಲಿ ರೂಪಿಸಿಕೊಳ್ಳಲು ಸಾಧ್ಯ ಎಂದರು.


ವಿಜ್ಞಾನಿಗಳಾದ ಡಾ . ಕೆ. ಎನ್. ಸುಬ್ರಮಣ್ಯ (Senior Lead Scientist (Retd.), ITC Ltd, Senior Scientist (Retd) ICAR-Central Tobacco Research Institute , Govt. of India) ಇವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಐಚ್ಚಿಕ ವಿಷಯವನ್ನು ಆಯ್ಕೆ ಮಾಡುವ ಘಟ್ಟ ಈ ನಿಟ್ಟಿನಲ್ಲಿ 12 ದಿನಗಳ ಶಿಬಿರ ಹೇಗೆ ಸಹಕಾರಿಯಾಗುವುದು ಎಂದು ಶಿಬಿರದ ಬಗ್ಗೆ ಕಿರು ಪರಿಚಯವನ್ನು ನೀಡಿದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ  ಮಂಡಳಿಯ  ಸಂಚಾಲಕರಾದ ಶ್ರೀಯುತ ಕೃಷ್ಣಪ್ರಸಾದ್ ನಡಸಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವತ್ಸಲಾ ರಾಜ್ಞಿ ಉಪಸ್ಥಿತರಿದ್ದರು. ರಾಜ್ಯದ ಬೇರೆಬೇರೆ  ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.


ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು,  ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹರೀಶ್ ಶಾಸ್ತ್ರೀ ಇವರು ಸ್ವಾಗತಿಸಿದರು, ಸಂಸ್ಥೆಯ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಇವರು ವಂದಿಸಿದರು.

hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top