||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಬಡ್ಡಿ ಅಂಗಣದಲ್ಲಿ ಭರವಸೆ ಮೂಡಿಸಿದ ಹೊಸ ಪ್ರತಿಭೆ- ನವೀನ್‌ ಮಾಣಿ

ಕಬಡ್ಡಿ ಅಂಗಣದಲ್ಲಿ ಭರವಸೆ ಮೂಡಿಸಿದ ಹೊಸ ಪ್ರತಿಭೆ- ನವೀನ್‌ ಮಾಣಿ


ಛಲವೊಂದಿದ್ದರೆ ಏನನ್ನೂ ಕೂಡ ಸಾಧಿಸಬಹುದು. ಛಲದ ಜೊತೆಗೆ ಸಾಧನೆ ಮಾಡಲು ಪರಿಶ್ರಮ ಕೂಡ ಅಗತ್ಯ. ಈ ಎಲ್ಲಾ ಗುಣದೊಂದಿಗೆ, ಪ್ರಸ್ತುತ ಪ್ರಚಲಿತದಲ್ಲಿರುವ ಕಬಡ್ಡಿ ಕ್ರೀಡೆಯಲ್ಲಿ ಮಿಂಚುತ್ತಿರುವವರು ಇವರು. ಕಬಡ್ಡಿ ಅಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಆದರೆ ಕಬಡ್ಡಿ ಕ್ರೀಡೆಯ ನೈಪುಣ್ಯತೆಯನ್ನು ಕರಗತ ಮಾಡಿಕೊಳ್ಳುವುದು ಕೆಲವರಿಂದ ಮಾತ್ರ ಸಾಧ್ಯ. ಯಾವುದೇ ಕ್ಷೇತ್ರವಾಗಲಿ, ನಾವು ಇಷ್ಟಪಟ್ಟು ಮುಂದೆ ನಡೆಯಬೇಕು. ಅಂತೆಯೇ ಕಬಡ್ಡಿಯನ್ನು ಇಷ್ಟಪಟ್ಟು, ಸಾಧನೆ ಮಾಡುತ್ತಿರುವ ಕ್ರೀಡಾಪಟು ನವೀನ ಮಾಣಿ.


ಕಬಡ್ಡಿ ಅನ್ನುವುದು ಒಂದು ಸಾಹಸ ಕ್ರೀಡೆಯಾಗಿದ್ದೂ, ಇವರು ಸುಮಾರು ೧೦ ವರ್ಷಗಳಿಂದ ಸತತವಾಗಿ ಆಡುತ್ತಾ ಬಂದಿದ್ದಾರೆ. ಕಬಡ್ಡಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಶಕ್ತರಾಗಿದ್ದರೆ ಮಾತ್ರ ಆಡಲು ಸಾಧ್ಯ. ಆಡುವಾಗ ಯುಕ್ತಿಯಿಂದ ಆಡಿದರೆ ಮಾತ್ರ ಗೆಲುವು ನಮ್ಮದೇ ಎನ್ನುವುದು ಇವರ ಅಭಿಪ್ರಾಯ.


ಯಾವುದೇ ವಿಷಯದಲ್ಲಿ ಆಸಕ್ತಿ ತೋರಿದಾಗ ಗುರಿ ತಲುಪುವುದು ಕಷ್ಟವೇನಲ್ಲ ಎನ್ನುವುದಕ್ಕೆ ನಿದರ್ಶನ ಇವರು. ಇಲ್ಲಿಯವರೆಗೆ ಸುಮಾರು 400ಕ್ಕೂ ಅಧಿಕ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ 270ಕ್ಕೂ ಹೆಚ್ಚು ಪಂದ್ಯಾವಳಿಗಳಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಇವರಿಗೆ ಕಬಡ್ಡಿ ಆಡುವುದಕ್ಕೆ ಸ್ಪೂರ್ತಿ ತುಂಬಿದ್ದು, ಇವರಿಗೆ ಹಬೀಬ್ ಮಾಣಿ, ಮತ್ತು ಮಜೀದ್ ಮಾಣಿ ಕ್ರೀಡಾ ಮಾರ್ಗದರ್ಶಕರು.


ನವೀನ್ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ರಾಜ್ಯ ಮಟ್ಟದಲ್ಲಿ ನಡೆದ ಬಾಲಕರ ರಾಜ್ಯಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಸರ್ವೋತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ರಾಜ್ಯ ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಟವನ್ನು ಆಡಿದ್ದು. ಮುಂದೆಯೂ ಇನ್ನಷ್ಟೂ ಸಾಧಿಸುವ ಛಲ ಇವರಲ್ಲಿದೆ. ಇಲ್ಲಿಯವರೆಗೆ ಹಲವು ಕ್ರೀಡಾ ಸಂಘಗಳಿಂದ ಆಯೋಜಿಸಿದ ಕಬ್ಬಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, 350ಕ್ಕೂ ಅಧಿಕ ಪ್ರಶಸ್ತಿಯನ್ನು ಪಡೆದ ಗರಿಮೆ ಇವರದ್ದು. ದ ಕ ಜಿಲ್ಲಾ ಅಮೆಚೂರ್‌  ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ದ.ಕ- ಕಾಸರಗೋಡು ಜಿಲ್ಲಾ ಮಟ್ಟದ ಮುಕ್ತ ಹೊನಲು ಕಬಡ್ಡಿ ಪಂದ್ಯಾಟದ ಸಂಧರ್ಭದಲ್ಲಿ ಮತ್ತು ಮಾರ್ಚ್ 2018 ರಲ್ಲಿ ನೇರಳಕಟ್ಟೆ ಶ್ರೀ ಕಲ್ಕುಡ ದೈವದ ಸಾನಿಧ್ಯದಲ್ಲಿ ನಡೆದ ಜಾತ್ರೋತ್ಸವದ ಪ್ರಯುಕ್ತ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ನೇರಳಕಟ್ಟೆ ಇವರ ವತಿಯಿಂದ ಹೈದರ್‌ಬಾದ್ ನಲ್ಲಿ ನಡೆದ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕಾರಣ ಅವರ ಸಾಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸನ್ಮಾನಿಸಿದ್ದಾರೆ.


ಇನ್ನು ಇವರು ಕಬಡ್ಡಿಯ ಜೊತೆ-ಜೊತೆಗೆ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಜೊತೆಗೆ ಕ್ರಿಕೆಟ್ ಆಡುವ ಹವ್ಯಾಸವು ಇವರಿಗಿದೆ. ಇವರು ರೇವತಿ ಮತ್ತು ಜಯ ಪೂಜಾರಿ ಯವರ ಪುತ್ರ.

-ದೀಕ್ಷಿತಾ ಜೇಡರಕೊಡಿ

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post