|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ; ಕಾಣಿಯೂರು ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ

ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ; ಕಾಣಿಯೂರು ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ


ಮಂಗಳೂರು: ನಗರದ ಶ್ರೀನಿವಾಸ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವ ಮುಕ್ಕದಲ್ಲಿರುವ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಅವರಣದಲ್ಲಿ ಜರುಗಿತು.


ಶ್ರೀನಿವಾಸ ವಿಶ್ವವಿದ್ಯಾಲಯದ ಸನ್ಮಾನ್ಯ ಸಹ ಕುಲಾಧಿಪತಿಗಳಾದ ಡಾ.ಎ. ಶ್ರೀನಿವಾಸ್ ರಾವ್ ಗೌರವ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀ ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವುದರ ಮೂಲಕ ಗೌರವಿಸಲಾಯಿತು.


ಎ ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಶ್ರೀನಿವಾಸ ವಿವಿ ಉಪಕುಲಪತಿಗಳಾದ ಡಾ. ಪಿ.ಎಸ್ ಐತಾಳ್ ವಾರ್ಷಿಕ ವರದಿ ನೀಡಿ, ಶ್ರೀನಿವಾಸ ವಿಶ್ವವಿದ್ಯಾಲಯವು ಬೆಳೆದು ಬಂದ ಹಾದಿಯ ಯಶೋಗಾಥೆಯನ್ನು ಹಾಗೂ ವಿಶ್ವವಿದ್ಯಾಲಯದ ಸಾಧನೆಯನ್ನು ತಿಳಿಸಿದರು.


ವಿಶ್ವವಿದ್ಯಾಲಯದ ಕುಲಸಚಿವರಾದ (ಪರೀಕ್ಷಾಂಗ ಮತ್ತು ಮೌಲ್ಯಮಾಪನ) ಡಾ. ಶ್ರೀನಿವಾಸ್ ಮಯ್ಯ ರವರು ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಸಾಧನೆಯ ಕಿರುಚಿತ್ರಣ ನೀಡಿದರು.


ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ತನಗೆ ಪ್ರಧಾನ ಮಾಡಿದ ಗೌರವ ಡಾಕ್ಟರೇಟ್ ಪದವಿಯು ತನ್ನ ಗುರುಗಳಿಗೆ ಸಂದ ಗೌರವ. ತಿರುಪತಿ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್ ಹಾಗೂ ತಮ್ಮ ಗುರುಗಳ ಪರಿಚಯವು ಆಗಿ, ತದನಂತರ ಅವಿನಾಭಾವ ಸಂಬಂಧವು ಮುಂದುವರೆದು, ಡಾ. ಸಿಎ ಎ. ರಾಘವೇಂದ್ರ ರಾವ್ ರವರು 2014ರಲ್ಲಿ ತನ್ನ ಎರಡನೇ ಪರ್ಯಾಯ ಮಹೋತ್ಸವದ ಗೌರವ ಅಧ್ಯಕ್ಷರಾಗಿ ಶ್ರೀ ಕಾಣಿಯೂರು ಮಠ ಹಾಗೂ ಶ್ರೀ ಕೃಷ್ಣ ಮಠಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಡಾ. ಸಿಎ ಎ ರಾಘವೇಂದ್ರ ರಾವ್ ರವರ ಸತತವಾದ ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಫಲವಾಗಿ ಇಂದು ಶ್ರೀನಿವಾಸ್ ವಿಶ್ವವಿದ್ಯಾಲಯ ಹಾಗೂ ಶ್ರೀನಿವಾಸ್ ಸಮೂಹ ಶೈಕ್ಷಣಿಕ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು, ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ವ್ರತ್ತಿಪರ ಜೀವನವನ್ನು ನೀಡಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.


ಸಹಸಾ ವಿದದಿತಾ ನ ಕ್ರೀಯಾಂ ವಿವೇಕಹ ಪರಮಾಪದಾಂ ಪದಂ, ಅಂದರೆ, ಆತುರದಿಂದ, ತಾಳ್ಮೆ ಇಲ್ಲದೆ, ಕ್ಷಣಮಾತ್ರದಲ್ಲಿ ತೆಗೆದುಕೊಂಡ ತರಾತುರಿಯ ನಿರ್ಣಯವು ಹಾಗೂ ಅವಿವೇಕದಿಂದ ಮಾಡಿದ ಕೆಲಸವು ವ್ಯಕ್ತಿಯ ಅಧಃಪತನಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಮನುಷ್ಯನಿಗೆ ತಾಳ್ಮೆಯು ಅತೀ ಮುಖ್ಯ. ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ತಾಳ್ಮೆಯ ಕೊರತೆ ಎದ್ದು ಕಾಣುತ್ತಿದೆ. ತಾಳ್ಮೆಗಿಂತ ಮತ್ತೊಂದು ತಪಸ್ಸು ಇಲ್ಲ. ಹೊಗಳಿಕೆಯು ಮನುಷ್ಯನಲ್ಲಿ ಅಹಂಕಾರವನ್ನು ಉಂಟು ಮಾಡಬಾರದು. ವೇಗದ ಬದುಕಿನಲ್ಲಿ ತಾಳ್ಮೆಯು ಬಹಳ ಮುಖ್ಯ. ವಿಪರೀತ ಒತ್ತಡದ ವ್ರತ್ತಿ ಜೀವನದಲ್ಲಿಯೂ ಸಹ ತಾಳ್ಮೆಯನ್ನು ಹೊಂದಿರುವ ಡಾ. ಸಿಎ ಎ ರಾಘವೇಂದ್ರ ರಾಯರು ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಹಲವಾರು ಶಿಕ್ಷಣ ಸಂಸ್ಥೆಗಳನ್ನು, ಸುಸಜ್ಜಿತವಾದ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿ, ಕಳೆದ 34 ವರ್ಷಗಳಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಂದ ಭವಿಷ್ಯದಲ್ಲಿ ಹಲವಾರು ಉತ್ತಮ ಕೆಲಸಗಳು ಆಗಬೇಕಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳು ಅತೀ ಮುಖ್ಯ. ಶ್ರೀನಿವಾಸ್ ವಿಶ್ವವಿದ್ಯಾಲಯವು ಸಂಸ್ಕೃತ ಭಾಷೆ ಹಾಗೂ ಯೋಗ ಅಭ್ಯಾಸದಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸಿ, 50 ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯಲ್ಲಿ ಸಂಶೋಧನೆಗೆ ಅವಕಾಶವನ್ನು ನೀಡಿರುವುದು ಅತ್ಯಂತ ಶ್ಲಾಘನೀಯ. ಡಾ. ಸಿಎ ಎ ರಾಘವೇಂದ್ರ ರಾವ್ ರವರ ಸುಪುತ್ರರಾದ ಡಾ. ಎ ಶ್ರೀನಿವಾಸ್ ರಾವ್ ರವರು ಅತ್ಯುತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ದೇವರು ಎಲ್ಲರಿಗೂ ಸನ್ಮಾನಗಳನ್ನು ಕರುಣಿಸಲಿ ಎಂದು ಹರಸಿದರು.


ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಸಿಎ ಎ ರಾಘವೇಂದ್ರ ರಾವ್ ರವರು ಮಾತನಾಡಿ, ಶ್ರೀನಿವಾಸ್ ವಿಶ್ವವಿದ್ಯಾಲಯದ ಸ್ಥಾಪನೆಗೆ ತನ್ನ ತಂದೆಯವರಾದ ಶ್ರೀ ಅಡ್ಕ ಶಾಮ ರಾವ್ ರವರು ಸ್ಫೂರ್ತಿ ಎಂದು ಹೇಳಿದರು.


ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ನಾವು ಯುವಜನತೆಗೆ ಉತ್ತಮ ವೃತ್ತಿಪರ ಜೀವನಕ್ಕೆ ಮುನ್ನುಡಿಯನ್ನು ಬರೆಯುತ್ತಿದ್ದೇವೆ. ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಆಧುನಿಕ ಗುಣಮಟ್ಟದ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ಆದ್ದರಿಂದ, ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ನಮ್ಮ ವಿಶ್ವವಿದ್ಯಾಲಯದ ಹಾಗೂ ನಮ್ಮ ಪದವೀಧರರ ಸಂಬಂಧವು ಇದೇ ರೀತಿ ಮುಂದುವರೆಯಲಿ ಎಂದು ಹೇಳಿದರು.


ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಪದವೀಧರರಿಗೆ ಪ್ರತಿಜ್ಞಾ ಪ್ರಮಾಣ ವಿಧಿಯನ್ನು ಬೋಧಿಸಿದರು.


ಈ ಸಂದರ್ಭದಲ್ಲಿ, ವಿವಿಧ ಶೈಕ್ಷಣಿಕ ವಿಭಾಗಗಳಲ್ಲಿ ರಾಂಕ್ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪಿಹೆಚ್.ಡಿ. ಪದವೀಧರರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ, 668 ಡಿಗ್ರಿ ಪದವೀಧರರಿಗೆ, 183 ಸ್ನಾತಕೋತ್ತರ ಪದವೀಧರರಿಗೆ, 6 ಪಿಹೆಚ್.ಡಿ, 3 ಡಿ.ಎಸ್ಸಿ ಹಾಗೂ ಒಂದು ಡಿ.ಲಿಟ್ ಪದವೀಧರರಿಗೆ ಪದವಿಯನ್ನು ಪ್ರದಾನಿಸಲಾಯಿತು.


ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯರಾದ ಪ್ರೊ. ಶ್ರೀಮತಿ ಎ. ಮಿತ್ರಾ ಎಸ್. ರಾವ್, ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್, ವಿಶ್ವವಿದ್ಯಾಲಯದ ಸಹಉಪಕುಲಪತಿಗಳಾದ ಡಾ. ಜೆ. ಸತ್ಯ ಸಾಯಿ ಕುಮಾರ್, ವಿಶ್ವವಿದ್ಯಾಲಯದ ಕುಲಸಚಿವರುಗಳು, ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಶ್ರೀನಿವಾಸ ಸಮೂಹ ಶೈಕ್ಷಣಿಕ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅಜಯ್ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಪ್ರೊ. ದಿವಾಕರ ಭಟ್ ಹಾಗೂ ಕಾಲೇಜ್ ಆಫ್ ಏವಿಯೇಷನ್ ವಿದ್ಯಾರ್ಥಿ ಶ್ರೀ ಅನಿರುದ್ಧ್ ರವರು ವೇದಘೋಷದ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಿದರು. ಡಾ. ಅನಿಲ್ ಕುಮಾರ್  ವಂದಿಸಿದರು. ಪ್ರೊ ರೋಹನ್ ಫೆರ್ನಾಂಡಿಸ್ ಮತ್ತು ಡಾ. ಪದ್ಮಾ  ಕಾರ್ಯಕ್ರಮ ನಿರೂಪಿಸಿದರು.



ಉಪಯುಕ್ತ ನ್ಯೂಸ್ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post