|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೀವಜಗತ್ತಿಗೆ ಒಳಿತು ಮಾಡುವುದೇ ನಿಜವಾದ ಪೂಜೆ: ರಾಘವೇಶ್ವರ ಶ್ರೀ

ಜೀವಜಗತ್ತಿಗೆ ಒಳಿತು ಮಾಡುವುದೇ ನಿಜವಾದ ಪೂಜೆ: ರಾಘವೇಶ್ವರ ಶ್ರೀ

ಸಂನ್ಯಾಸ ಗ್ರಹಣದ 29ನೇ ಪರ್ವ: ಆರ್ತ ಮಹಿಳೆಯ ಕುಟುಂಬಕ್ಕೆ ಜೀವನದಾನ



ಗೋಕರ್ಣ: ಜನ್ಮದಿನವನ್ನು ಬಗೆ ಬಗೆಯಾಗಿ ಆಚರಿಸುತ್ತಾರೆ. ಆದರೆ ಜನ್ಮದಿನದಂದು ಮಾತ್ರವಲ್ಲದೇ ಜೀವನವಿಡೀ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.


ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ 29ನೇ ಸಂನ್ಯಾಸ ಗ್ರಹಣ ದಿನದ ಪುಣ್ಯ ಪರ್ವದಂದು ಪ್ರತಿ ವರ್ಷದಂತೆ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜನರ ಜೀವನಕ್ಕೆ ನೆರವಾಗುವ ಜೀವಕಾರುಣ್ಯದ ಯೋಜನೆ ಜೀವನದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ಶುಭಕೃತ್ ಸಂವತ್ಸರದ ಜೀವನದಾನ ಇಂದು ನಡೆಯುತ್ತಿದೆ. ಜನ್ಮದಿನವನ್ನು ವಿವಿಧ ಬಗೆಯಾಗಿ ಆಚರಿಸುತ್ತಾರೆ. ಹುಟ್ಟಿದ ದಿನವನ್ನು ಮಾತ್ರವಲ್ಲ, ಬದುಕೆಲ್ಲ ಶುಭವನ್ನು ಮಾಡುವುದು ಮುಖ್ಯ. ಸುತ್ತಮುತ್ತಲ ಜೀವಜಗತ್ತಿಗೆ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ. ಭಯಮುಕ್ತ, ದುಃಖಮುಕ್ತವಾಗಿ, ಶುಭಕೃತ್ ಶಂಕರರಾಗಿ, ತಮಗೆ, ಕುಟುಂಬಕ್ಕೆ, ಊರಿಗೆ, ಗ್ರಾಮಕ್ಕೆ ಒಳಿತು ಮಾಡುವ ಪಣ ತೊಡುವಂತೆ ಕರೆ ನೀಡಿದರು.


ರಾಮ ಶುಭವನ್ನು ನೀಡುವವನು. ರಾಮನ ಪದಸ್ಪರ್ಶದಿಂದ ಲಂಕೆಯೂ ರಾಮರಾಜ್ಯವಾಗಿದೆ. ಗಂಗೆಯಾಚೆ ರಾಮ ಹೆಜ್ಜೆ ಇಟ್ಟಾಗ ಕಲ್ಪತರು ಜನಿಸಿದರೆ, ದಕ್ಷಿಣದಲ್ಲಿ ಕಂಟಕವೆಂಬ ಮುಳ್ಳನ್ನು ಕಿತ್ತು ಅವರ ಬಾಳು ಕೂಡಾ ಬೆಳಕಾಗಿದೆ. ನಾವು ಸಿಹಿ ತಿಂದು ಜನ್ಮದಿನ ಆಚರಿಸುವುದಕ್ಕಿಂತ ಬೇರೆಯವರ ಬಾಳಿಗೆ ಸವಿ ತರುವುದು ಮುಖ್ಯ. ಶ್ರೀಶಂಕರರ ಜೀವನವೇ ಒಂದು ಉಪದೇಶ. ಶಂ ಎಂದರೆ ಶುಭ; ಕರ ಎಂದರೆ ಮಾಡುವವನು. ಅಂದರೆ ಶುಭ ಮಾಡು ಎನ್ನುವುದೇ ಅವರ ಜೀವನ ಸಂದೇಶ ಎಂದು ಬಣ್ಣಿಸಿದರು. ಶುಭಂಕರತ್ವ, ಶಂಕರತ್ವ ಬಾಳಿನಲ್ಲಿ ಮುಖ್ಯ ಎಂದರು.


ಆರ್ತ ಕುಟುಂಬದ ಕಣ್ಣೀರು ಒರೆಸುವ ಮೂಲಕ ಸಂನ್ಯಾಸ ಸ್ವೀಕಾರ ದಿನವನ್ನು ಆಚರಿಸಲಾಗುತ್ತಿದೆ. ಅವರ ಜೀವನ ಬೆಳಕಾಗಲಿ; ಬೇಗೆಯಲಿ ಬೇಯದಿರಲಿ ಎಂದು ಆಶಿಸುವುದೇ ಇಂದಿನ ಆಚರಣೆ. ಅವರ ಬದುಕಿನ ಕಷ್ಟ ದೂರ ಮಾಡುವ ಪ್ರಮಾಣ ಮಾಡುವ ದಿನ ಎಂದು ಹೇಳಿದರು.


ಶ್ರೀಮಠದ ಸಿಇಓ ಕೆ.ಜಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾತಿ ಮತ ಬೇಧವಿಲ್ಲದೇ ಆರ್ತರನ್ನು ಗುರುತಿಸಿ ಪ್ರತಿ ವರ್ಷ ಒಬ್ಬರಿಗೆ ಜೀವನದಾನ ನೀಡಿ ಅವರ ಇಡೀ ಜೀವನ ನಿರ್ವಹಣೆ ಹೊಣೆಯನ್ನು ಟ್ರಸ್ಟ್ ವಹಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಹೊನ್ನಾವರ ತಾಲೂಕಿನ ಯಶೋಧಾ ಹೆಗಡೆ ಅವರಿಗೆ ಜೀವನದಾನ ಪ್ರದಾನ ಮಾಡಲಾಯಿತು. ಟ್ರಸ್ಟಿಗಳಾದ ಎಸ್.ಎಸ್.ಹೆಗಡೆ, ಆರ್.ಜಿ.ಹೆಗಡೆ, ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ.ಭಟ್ ಕಬ್ಬಿನಹಿತ್ಲು ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم