ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ ಮಯೂರ್ ನಾಯ್ಗ ಇವರು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೂರು ನಗದು ಪುರಸ್ಕಾರಗಳಿಗೆ ಆಯ್ಕೆಯಾಗಿದ್ದಾರೆ. ಡಾ. ಬಿ. ದಾಮೋದರ್ ರಾವ್ ನಗದು ಪ್ರಶಸ್ತಿ ಪೆರುವಾಯಿ ಸುಬ್ಬಯ್ಯ ಶೆಟ್ಟಿ ಸ್ಮರಣಾರ್ಥ ನಗದು ಪ್ರಶಸ್ತಿ ಮತ್ತು ಎಂ.ಎಸ್. ಪುಟ್ಟಣ್ಣ ನಗದು ಪ್ರಶಸ್ತಿ ಇವರಿಗೆ ಲಭಿಸಿದೆ. ಎ.23ರಂದು ನಡೆದ ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಇವರು ಈ ಪುರಸ್ಕಾರವನ್ನು ಸ್ವೀಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ