ಸೂರತ್: ವಿದ್ಯಾರ್ಥಿಗಳು ಹೋಮ್​ವರ್ಕ್ ಮಾಡದಿದ್ರೆ ಬೇವಿನ ರಸ ಕುಡಿಯುವ ಶಿಕ್ಷೆ!

Upayuktha Writers
0

 

ಸೂರತ್: ಗುಜರಾತ್​ನ ಸೂರತ್​ನಲ್ಲಿ ವಿಶಿಷ್ಟವಾದ ಶಾಲೆಯೊಂದಿದೆ. ಈ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬೇವಿನ ರಸ ಕುಡಿಯುವ ಶಿಕ್ಷೆ ನೀಡಲಾಗುತ್ತದೆ. ಇದರ ಜೊತೆಗೆ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ.



ಸೂರತ್​ನ ಅಡಾಜನ್ ಪ್ರದೇಶದ ವಿದ್ಯಾಕುಂಜ್ ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸದೆ ಶಾಲೆಗೆ ಬಂದರೆ ಅಥವಾ ತಮ್ಮ ಮನೆಕೆಲಸವನ್ನು ಮುಗಿಸದೆ ಶಾಲೆಗೆ ಬಂದರೆ ಅವರಿಗೆ ಬೇವಿನ ರಸ ನೀಡಲಾಗುತ್ತದೆ. 


ಅಲ್ಲಿನ ಪ್ರಾಂಶುಪಾಲರಾದ ಮಹೇಶ್ ಪಾಟೀಲ್​, ಗಾಂಧಿ ತತ್ವಗಳನ್ನು ಅನುಸರಿಸುತ್ತಿರುವ ಕಾರಣದಿಂದ ಮಕ್ಕಳಲ್ಲಿ ಗಾಂಧಿ ತತ್ವವನ್ನು ಬೆಳೆಸಲು ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅವರಿಗೆ ಶಿಕ್ಷೆಯನ್ನೂ ನೀಡಿದಂತಾಗುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ. ಗಾಂಧಿವಾದಿ ತತ್ವಗಳ ಬೋಧಕರಾದ ಮಹೇಶ್ ಪಾಟೀಲ್ ಅವರು ತಪ್ಪು ಮಾಡಿದ ಮಕ್ಕಳಿಗೆ ಬೇವಿನ ರಸ ಕುಡಿಸುತ್ತಾರೆ.

.
hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top