ಪತ್ರಿಕೋದ್ಯಮ ಶಿಕ್ಷಕರ ಸಂಘ ರಚನೆಗೆ ಚಾಲನೆ
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಶಿಕ್ಷಕರ ಸಂಘ ರಚನೆಗೆ ಚಾಲನೆ ದೊರೆತಿದೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕೋದ್ಯಮ ಪದವಿ ಪಠ್ಯಕ್ರಮ (ಎನ್ಇಪಿ) ಕುರಿತ ಒಂದು ದಿನದ ಕಾರ್ಯಾಗಾರ ವೇಳೆ ಈ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಂಘದ ಮೊತ್ತಮೊದಲ ಗೌರವಾಧ್ಯಕ್ಷರಾಗಿ ಉಜಿರೆಯ ಎಸ್ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬೆಸೆಂಟ್ ಮಹಿಳಾ ಕಾಲೇಜಿನ ಸ್ಮಿತಾ ಶೆಣೈ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಳ್ವಾಸ್ ಕಾಲೇಜಿನ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿಯಾಗಿ ಅಂಬಿಕಾ ವಿದ್ಯಾಲಯದ ರಾಕೇಶ್ ಕುಮಾರ್ ಕಮ್ಮಾಜೆ, ಜೊತೆ ಕಾರ್ಯದರ್ಶಿಗಳಾಗಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸಚೇಂದ್ರ ಹಾಗೂ ವಿವಿ ಕಾಲೇಜಿನ ಗುರುಪ್ರಸಾದ್ ಟಿ ಎನ್, ಖಜಾಂಜಿಯಾಗಿ ವಿವಿ ಕಾಲೇಜಿನ ಡಾ. ಸೌಮ್ಯಾ ಕೆ ಬಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಪ್ರೊ. ಭಾಸ್ಕರ ಹೆಗ್ಡೆ, ಸಂಘ ಪತ್ರಿಕೋದ್ಯಮ ಕಲಿಕೆ ಮತ್ತು ಉದ್ಯಮದ ನಡುವೆ ಸೇತುವೆಯಂತೆ ಕೆಲಸ ಮಾಡಲಿದೆ, ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಪದವಿ ವಿಭಾಗದ ಅಧ್ಯಯನ ಮಂಡಳಿಯ ಮುಖ್ಯಸ್ಥೆ ಪ್ರೊ. ಕಿಶೋರಿ ನಾಯಕ್ ಕೆ ಮೊದಲಾದವರು ಸಂಘಕ್ಕೆ ಶುಭ ಕೋರಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ