ಮೇ 3ರಂದು ಮೋನಿಷಾ ಐಸಿರಿ ಗೌಡ ಕಥಕ್ ರಂಗಮಂಚ ಪ್ರವೇಶ

Upayuktha
0

ಬೆಂಗಳೂರು: ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ವತಿಯಿಂದ ಶ್ರೀಮತಿ ಶ್ರೀದೇವಿ ಜಗದೀಶ ಹಾಗೂ ಶ್ರೀ ವೈ.ಎಂ. ಜಗದೀಶ ಪುತ್ರಿ ಮತ್ತು ಗುರು ಶ್ರೀಮತಿ ಶ್ವೇತ ವೆಂಕಟೇಶ ಅವರ ಶಿಷ್ಯೆ ಕು||ಮೋನಿಷಾ ಐಸಿರಿ ಗೌಡ ಅವರ ಕಥಕ್ ರಂಗಮಂಚ ಪ್ರವೇಶವು ಮೇ 3, ಸಂಜೆ 6.00 ಗಂಟೆಗೆ ನಗರದ ವೈಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿದೆ.


ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣರವರ ಘನ ಉಪಸ್ಥಿತಿಯಲ್ಲಿ ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಹಾಗೂ ನಂದಿನಿ ಕೆ ಮೆಹ್ತ ರವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.


ಬಾಲ್ಯದಿಂದಲೇ ನೃತ್ಯಾಭ್ಯಾಸ ಆರಂಭಿಸಿದ ಕು| ಮೋನಿಷಾ ಕಥಕ್‌ ನೃತ್ಯ ಪ್ರಕಾರದಲ್ಲಿ ಡಾ.ಮಾಯಾರಾವ್ ರವರ ಬಳಿ ಪ್ರಾರಂಭಿಕ ಅಭ್ಯಸಿಸಿ ಭರತನಾಟ್ಯದಲ್ಲಿ ಡಾ.ಸುಪರ್ಣ ವೆಂಕಟೇಶ್ ರವರಿಂದ ಕಲಿತು ಇದೀಗ ಗುರು ಶ್ರೀಮತಿ ಶ್ವೇತ ವೆಂಕಟೇಶ ರವರಲ್ಲಿ ಕಥಕ್ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top