ಡಯಾಬಿಟಿಕ್ ಫುಟ್ ಕೇರ್ ಕ್ಷೇತ್ರದಲ್ಲಿನ ಸಹಯೋಗ ಒಪ್ಪಂದ ಪತ್ರಕ್ಕೆ ಫುಟ್ ಸೆಕ್ಯುರ್ ಮತ್ತು ಮಾಹೆ ಸಹಿ

Upayuktha
0


ಏಪ್ರಿಲ್ 23 ರಂದು ಮಾಹೆ ಮತ್ತು ಫುಟ್ ಸೆಕ್ಯೂರ್ ನಡುವೆ ನಡೆದ ಎಂಒಯು ವಿನಿಮಯ ಸಂದರ್ಭದಲ್ಲಿ  ಬಲದಿಂದ ಎಡಕ್ಕೆ -ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಡೀನ್ ಮತ್ತು ಸಿಡಿಎಫ್ಸಿಆರ್ ಮುಖ್ಯ ಸಂಯೋಧಕ ಡಾ. ಜಿ ಅರುಣ್ ಮಯ್ಯ, ಫುಟ್ ಸೆಕ್ಯೂರ್  ಸಂಸ್ಥಾಪಕ ಡಾ. ಸಂಜಯ್ ಶರ್ಮಾ, ರಿಜಿಸ್ಟ್ರಾರ್  ಡಾ. ನಾರಾಯಣ ಸಭಾಹಿತ್, ಮಾಹೆಯ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್, ಮಾಹೆಯ ವೈಸ್ ಚಾನ್ಸೆಲರ್  ಡಾ. ಎಂ ವಿ ಪ್ರಭು ಉಪಸ್ಥಿತರಿದ್ದರು.


ಮಂಗಳೂರು: ಫುಟ್‌ಕೇರ್‌ನಲ್ಲಿ ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಗಳ ಸಹಕಾರಕ್ಕಾಗಿ ಪರಸ್ಪರ ಸಹಯೋಗದ ಒಪ್ಪಂದ ಪತ್ರಕ್ಕೆ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡಯಾಬಿಟಿಕ್ ಫುಟ್‌ ಕೇರ್ ಮತ್ತು ರಿಸರ್ಚ್ ಸೆಂಟರ್ (CDFR) ಫುಟ್‌ ಸೆಕ್ಯೂರ್‌ನೊಂದಿಗೆ ಮಣಿಪಾಲದಲ್ಲಿಂದು (ಏ.23, 2022) ಸಹಿ ಮಾಡಿದೆ.   


ಭಾರತದ ಅಗ್ರ ಶ್ರೇಯಾಂಕದ ಖಾಸಗಿ ವಿಶ್ವವಿದ್ಯಾನಿಲಯವಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ಡಯಾಬಿಟಿಕ್ ಫುಟ್ ಕೇರ್ & ರಿಸರ್ಚ್ ಸೆಂಟರ್ ಮತ್ತು ಫೂಟ್ಸೆಕ್ಯೂರ್- ಭಾರತದ ಮೊದಲ ಫಿಜಿಟಲ್ ಪೊಡಿಯಾಟ್ರಿ ಸೆಂಟರ್, ಮಧುಮೇಹ ಫುಟ್ಕೇರ್ ಚಿಕಿತ್ಸೆಯಲ್ಲಿ ಸುಧಾರಿತ ತಂತ್ರಜ್ಞಾನದ ನೆರವಿನ ಫುಟ್ ಸೆಕ್ಯುರ್ ಮತ್ತು ಕೌಶಲ್ಯ ಅಭಿವೃದ್ಧಿಗೆ ಕೈಜೋಡಿಸಿವೆ. 


ಮಾಹೆಯ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ.ವೆಂಕಟೇಶ್ ಮತ್ತು ಫುಟ್‌ ಸೆಕ್ಯೂರ್‌ನ ಸಂಸ್ಥಾಪಕ ಡಾ ಸಂಜಯ್ ಶರ್ಮಾ ನಡುವೆ ಈ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಲಾಗಿದ್ದು, ಮಾಹೆಯ  ಪ್ರೊ ವೈಸ್ ಚಾನ್ಸೆಲರ್ ಡಾ. ಎಂ ವಿ ಪ್ರಭು, ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್ ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ನ ಡೀನ್ ಮತ್ತು ಸಿಡಿಎಫ್‌ಸಿಆರ್‌ನ ಮುಖ್ಯ ಸಂಯೋಧಕ ಡಾ. ಜಿ ಅರುಣ್ ಮಯ್ಯ ಉಪಸ್ಥಿತರಿದ್ದರು.

2022 ನ್ನು ಮಾಹೆಯು ನಾವೀನ್ಯತೆ ಮತ್ತು ಉದ್ಯಮಶೀಲತೆ ವರ್ಷ ಎಂದು ಘೋಷಿಸಿದೆ. ಮಾಹೆ ಮತ್ತು ಫುಟ್ ಸೆಕ್ಯೂರ್ ನಡುವಿನ ಈ ತಂತ್ರಜ್ಞಾನ ಆಧಾರಿತ ಒಪ್ಪಂದವು ಮಧುಮೇಹ ಪಾದದ ಆರೈಕೆ ಕ್ಷೇತ್ರದಲ್ಲಿ ಹೊಸ ಸಂಶೋಧನೆಯನ್ನು ಬಲಪಡಿಸುತ್ತದೆ. ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಹೊಸ ಆಶಾಕಿರಣವಾಗಿದೆ ಎಂದು ಮಾಹೆಯ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಅವರು ತಿಳಿಸಿದರು.  

"ಮಾಹೆ ಮತ್ತು ಫುಟ್ ಸೆಕ್ಯುರ್ ನಡುವಿನ ಸಹಯೋಗವು ಮಧುಮೇಹ ಪಾದದ ರೋಗ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ" ಎಂದು ನರರೋಗದ ಕಾಲು ನೋವು ನಿರ್ವಹಣೆಗೆ ಲೇಸರ್ ಚಿಕಿತ್ಸೆಯಲ್ಲಿ ತಜ್ಞರಾಗಿರುವ ಡಾ ಮಯ್ಯ ಹೇಳಿದರು.


ವಿಶ್ವವಿದ್ಯಾಲಯ ಮತ್ತು ಉದ್ಯಮದ ನಡುವಿನ ಸಹಯೋಗದ ಸಂಶೋಧನೆಯು ಪರಿಹಾರೋಪಾಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿಶ್ವವಿದ್ಯಾಲಯದ ಆಸ್ಪತ್ರೆಗಳಲ್ಲಿ ಅದನ್ನು ಮೌಲ್ಯೀಕರಿಸಲು ನಿರ್ಣಾಯಕವಾಗಲಿದೆ. ಮಾಹೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ಉದ್ಯೋಗ ನೀಡಲು ಸದವಕಾಶವನ್ನು ಫುಟ್ ಸೆಕ್ಯುರ್ ಎದುರು ನೋಡುತ್ತಿದೆ ಎಂದು ಡಾ ಸಂಜಯ್ ಶರ್ಮಾ ಹೇಳಿದರು.


ಫುಟ್ ಸೆಕ್ಯುರ್ ಎಂಬುದು ಪೊಡಿಯಾಟ್ರಿ ಕೇಂದ್ರಗಳ ಸರಪಳಿಯಾಗಿದ್ದು, ಒಂದೇ ಸೂರಿನಡಿ ಫಿಜಿಟಲ್ ಫೂಟ್ ಮತ್ತು ಪಾದದ ಆರೈಕೆಯನ್ನು ಒದಗಿಸುತ್ತದೆ. ಮಾಹೆ ವಿಶ್ವಾದ್ಯಂತ 220ಕ್ಕೂ ಹೆಚ್ಚು ಪ್ರಮುಖ ವಿಶ್ವವಿದ್ಯಾಲಯಗಳೊಂದಿಗೆ ಸಕ್ರಿಯ ಪಾಲುದಾರಿಕೆಯನ್ನು ಹೊಂದಿರುವ ಜಾಗತಿಕ ಸಂಸ್ಥೆಯಾಗಿದೆ.


ಜಂಟಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಒಪ್ಪಂದವು ಒಳಗೊಂಡಿರುತ್ತದೆ. ಮಾಹೆಯಲ್ಲಿನ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಗಳನ್ನು ನಡೆಸುವ ಉದ್ದೇಶಕ್ಕಾಗಿ ಭೇಟಿ ನೀಡುವ ತಜ್ಞರನ್ನು ವಿನಿಮಯ ಮಾಡಿಕೊಳ್ಳುವ ಈ ಒಪ್ಪಂದವು ಡಾ. ಸಂಜಯ್ ಶರ್ಮಾ ಅವರು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಸಹಾಯಕ ಅಧ್ಯಾಪಕರಾಗಿ ಕಾರ್ಯನಿರ್ವಹಿಸುವಂತೆ ಮಾಡಲಿದೆ.


ಫುಟ್ ಸೆಕ್ಯುರ್: ಏನಿದು?

ಫುಟ್ಸೆಕ್ಯೂರ್ ಡಾ ಸಂಜಯ್ ಶರ್ಮಾ ಅವರು ಆರಂಭಿಸಿದ ವಿಶಿಷ್ಠ ಯೋಜನೆ. ಇದು ಫೂಟ್ ಮತ್ತು ಆಂಕಲ್ ಕ್ಲಿನಿಕ್‌ಗಳ ಸಮಗ್ರ ಸರಪಳಿಯಾಗಿದ್ದು, ರೋಗನಿರ್ಣಯ, ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ, ಆರ್ಥೋಟಿಕ್ಸ್ ಮತ್ತು ಪುನರ್ವಸತಿ ಸೇರಿದಂತೆ ಪೊಡಿಯಾಟ್ರಿಕ್ ಸೇವೆಗಳಿಗೆ ಮೀಸಲಾಗಿದೆ. ಪ್ರಸ್ತುತ ಫುಟ್ ಸೆಕ್ಯುರ್ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ 5 ಪೊಡಿಯಾಟ್ರಿ ವಿಭಾಗಗಳನ್ನು ಸ್ಥಾಪಿಸಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:

-ಡಾ ಸಂಜಯ್ ಶರ್ಮಾ

M: 9980772658 | ಇಮೇಲ್: sanjay@footsecure.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Advt Slider:
To Top