ಕಾರ್ಮಿಕ ದಿನ: ಮನೆಮಂದಿಗಾಗಿ ದುಡಿಯುತ್ತಲೇ ದೇಶ ಕಟ್ಟುವ ಕಾರ್ಮಿಕನಿಗಿದೋ ಶತ ಶತ ನಮನ...

Upayuktha
0


ತನ್ನೆಲ್ಲಾ ಕಷ್ಟಗಳನ್ನು ನಿವಾರಿಸಲು, ದಿನನಿತ್ಯದ ಅಗತ್ಯತೆಯನ್ನು ಪೂರೈಸಲು ಮೈ ಮುರಿದು ದುಡಿಯುವವನೇ ಕಾರ್ಮಿಕ. ಪ್ರತಿದಿನ ಪ್ರತಿಕ್ಷಣ ತನ್ನವರಿಗಾಗಿ ತನ್ನೊಳಗಿನ ನೋವನ್ನು ಮರೆತು ದುಡಿಯುತ್ತನೆ. ಜೀವನದುದ್ದಕ್ಕೂ ಅದೆಷ್ಟು ಚುಚ್ಚು ಮಾತುಗಳನ್ನು ಕೇಳುತ್ತಾ, ಯಾರೇ ಹೀಯಾಳಿಸಿದರೂ ಕುಗ್ಗದೆ ಮತ್ತೆ ಕೆಲಸದಲ್ಲಿ ತೊಡಗುತ್ತಾರೆ. ಮೊದಲೆಲ್ಲ ಗಂಡಸರು ಮಾತ್ರ ಕೂಲಿಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತ ಹೆಂಗಸರು ಕೆಲಸ ಮಾಡುತ್ತಿದ್ದಾರೆ.


ಕೂಲಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ ಮೈಬಗ್ಗಿಸಿ ದುಡಿಯಬೇಕು, ಕೈಕೆಸರು ಮಾಡಿಕೊಂಡರೆ ಮಾತ್ರ ಮೊಸರು ಪಡೆಯುವ ಪರಿಸ್ಥಿತಿ. ಆರಾಮವಾಗಿ ದಿನ ಕಳೆಯಲು ಸಂಭ್ರಮದ ದಿನಗಳನ್ನು ಆಚರಿಸಲು ಹಿಂದುಮುಂದು ನೋಡಿಕೊಂಡು ಖರ್ಚು ಮಾಡಬೇಕು. 


ಆದರೆ ಕೂಲಿ ಕೆಲಸ ಮಾಡುವವರೆಂದರೆ ಮೂಗು ಮುರಿಯುವವರೇ ಜಾಸ್ತಿ. ದುಡಿಯುವ ಕೈಗಳನ್ನು ಗೌರವದಿಂದ ನೋಡುವ ಬದಲು ಅಸಡ್ಡೆಯಿಂದ ನೋಡುವವರೇ ಹೆಚ್ಚು. ಇವೆಲ್ಲವನ್ನು ಲೆಕ್ಕಿಸದೆ ತನ್ನ ದಿನವನ್ನು ನಗುಮುಖದಿಂದ ಪ್ರಾರಂಭಿಸಿ  ತೃಪ್ತಿಯಿಂದ ಮುಗಿಸುವವನು ಕಾರ್ಮಿಕ.  


ಕುಟುಂಬದ ನಗುವನ್ನು ನೋಡಲು ತನ್ನೆಲ್ಲಾ ಆಸೆ ಕನಸುಗಳನ್ನು ಮರೆಮಾಚಿ. ಅವರ ಹಿತಕ್ಕಾಗಿ ಬದುಕುತ್ತಾನೆ. ತನ್ನ ಆಯಾಸನ್ನೆಲ್ಲ ದುಡಿಯುತ್ತಲೇ ಮುಗಿಸುತ್ತಾನೆ. ಪ್ರತಿದಿನ ಎಷ್ಟು ದುಡಿಯುತ್ತಾನೆ ಅದರ ಅರ್ಧಪಾಲನ್ನು ಸಾಲ ತೀರಿಸುವಲ್ಲಿ ವ್ಯಯಿಸಬೇಕಾಗುತ್ತದೆ. ಇಷ್ಟೆಲ್ಲ ಸವಾಲುಗಳನ್ನು ಎದುರಿಸುವ ಕಾರ್ಮಿಕನಿಗೆ ಒಂದು ದಿನವನ್ನು ಮೀಸಲಿಡಾಲಾಗಿದೆ.


ಅದೇ ಮೇ 1 ವಿಶ್ವ ಕಾರ್ಮಿಕರ ದಿನಾಚರಣೆ. ಈ ದಿನ ಇವರಿಗಾಗಿಯೇ ಮೀಸಲು. ಕಾರ್ಮಿಕರ ಚಳುವಳಿಯ ಉತ್ತೇಜನದಿಂದ ಈ ದಿನದ ಆಚರಣೆ ಪ್ರಸ್ತುತಿಗೆ ಬಂತು. ಪ್ರತಿದಿನ ದುಡಿಯುವವರಿಗೆ ಈ ರೀತಿಯ ದಿನಗಳು  ದುಡಿಯಲು ಇನ್ನಷ್ಟು ಸ್ಪೂರ್ತಿ ತುಂಬುವುದಂತೂ ನಿಜ.


-ದೀಕ್ಷಿತಾ ಜೇಡರಕೊಡಿ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top