ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ನಾಲ್ಕು ರ‍್ಯಾಂಕ್ ಗಳು ಲಭಿಸಿವೆ. ವಿಜ್ಞಾನ ವಿಭಾಗದಲ್ಲಿ ದಿವ್ಯಾ ಎಸ್ ಭಟ್ (ಪಿಎಂಸಿಎಸ್) ಎರಡನೇ ರ‍್ಯಾಂಕ್, ಅನುಶ್ರೀ ಎಸ್ ಭಟ್ (ಬಿಝೆಡ್ಸಿ) ಮೂರನೇ ರ‍್ಯಾಂಕ್, ಶಿವಾನಿ ಮಲ್ಯ (ಬಿಝೆಡ್ಸಿ) ಆರನೇ ರ‍್ಯಾಂಕ್ ಹಾಗೂ ಕಲಾ ವಿಭಾಗದಲ್ಲಿ ಸುಮಾ ವೈ. ಭಟ್ (ಎಚ್ಇಪಿ) ಹತ್ತನೇ ರ‍್ಯಾಂಕ್ ಗಳಿಸಿರುತ್ತಾರೆ.
ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ